ಶ್ರೀರಾಮನೇ ಸೀತೆಯನ್ನು ಸಂಶಯದಿಂದ ತೊರೆದಿದ್ದ

By Web Desk  |  First Published Aug 11, 2018, 11:53 AM IST

ಶ್ರೀ ರಾಮನೆ ಒಮ್ಮೆ ಸಂಶಯದಿಂದ ಸೀತೆಯನ್ನು ತೊರೆದಿದ್ದ ಎಂದು ಕಾಂಗ್ರೆಸ್ ಮುಖಂಡರು ಇದೀಗ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. 


ನವದೆಹಲಿ: ತ್ವರಿತ ತ್ರಿವಳಿ ತಲಾಖ್‌ ಮಸೂದೆ ಕುರಿತು ವ್ಯಾಪಕ ಚರ್ಚೆ ನಡುವೆ, ಮಹಾರಾಷ್ಟ್ರದ ಕಾಂಗ್ರೆಸ್‌ ಸಂಸದ ಹುಸೇನ್‌ ದಳವಾಯಿ ಅವರು ಶ್ರೀರಾಮನ ಬಗ್ಗೆ ನೀಡಿರುವ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ‘ಶ್ರೀರಾಮಚಂದ್ರನೇ ಒಂದು ಬಾರಿ ಪತ್ನಿಯನ್ನು ಸಂಶಯಿಸಿ ಸೀತಾಜೀ ತೊರೆದಿದ್ದ’ ಎಂದು ಹುಸೇನ್‌ ಹೇಳಿರುವುದು ವಿವಾದವಾಗಿದೆ.

‘ಮಹಿಳೆಯರಿಗೆ ಎಲ್ಲ ಸಮುದಾಯಗಳಲ್ಲೂ ತಾರತಮ್ಯ ಎಸಗಲಾಗುತ್ತಿದೆ. ಮುಸ್ಲಿಮರಲ್ಲಿ ಮಾತ್ರವಲ್ಲ ಹಿಂದೂ, ಕ್ರೈಸ್ತ, ಸಿಖ್ಖರಲ್ಲೂ ಅದು ನಡೆಯುತ್ತದೆ. ಪ್ರತಿಯೊಂದು ಸಮಾಜದಲ್ಲೂ ಪುರುಷರದ್ದೇ ಪ್ರಾಬಲ್ಯವಿದೆ. ಶ್ರೀರಾಮಚಂದ್ರನೇ ಒಂದು ಬಾರಿ ಸೀತಾಜೀಯನ್ನು ಸಂಶಯಿಸಿ ತೊರೆದಿದ್ದ. ಹೀಗಾಗಿ ನಾವು ಸಮಗ್ರ ಬದಲಾವಣೆ ತರಬೇಕಾಗಿದೆ’ ಎಂದು ಅವರು ಹೇಳಿದ್ದರು.

Tap to resize

Latest Videos

ಆದರೆ, ಹೇಳಿಕೆ ವಿವಾದವಾಗುತ್ತಿದ್ದಂತೆ ಎಚ್ಚರಗೊಂಡ ಹುಸೇನ್‌, ‘ನಾನು ಶ್ರೀರಾಮನನ್ನು ಗೌರವಿಸುತ್ತೇನೆ’ ಎಂದಿದ್ದಾರೆ. ‘ಹೇಳಿಕೆಯಿಂದ ನಿರ್ದಿಷ್ಟಸಮುದಾಯದ ಭಾವನೆಗಳಿಗೆ ಧಕ್ಕೆಯಾದರೆ, ಕ್ಷಮೆ ಯಾಚಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.

click me!