ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ : ಪ್ರವಾಸಿಗನ ಹತ್ಯೆ

First Published May 8, 2018, 12:32 PM IST
Highlights

ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಅಟ್ಟಹಾಸ ಮುಂದುವರಿದಿದೆ. ಇಂದು ನಡೆದ ಕಲ್ಲು ತೂರಾಟಕ್ಕೆ ತಮಿಳುನಾಡು ಮೂಲದ ಪ್ರವಾಸಿಗರೋರ್ವರು ಬಲಿಯಾಗಿದ್ದಾರೆ. ಅಲ್ಲದೇ ಇದೇ ವೇಳೆ ಅವರ ಕುಟುಂಬದ ಇಬ್ಬರು ಸದಸ್ಯರು ಗಾಯಗೊಂಡಿದ್ದಾರೆ. 

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಅಟ್ಟಹಾಸ ಮುಂದುವರಿದಿದೆ.  ಸೋಮವಾರ ನಡೆದ ಕಲ್ಲು ತೂರಾಟಕ್ಕೆ ತಮಿಳುನಾಡು ಮೂಲದ ಪ್ರವಾಸಿಗರೋರ್ವರು ಬಲಿಯಾಗಿದ್ದಾರೆ. 

ಅಲ್ಲದೇ ಇದೇ ವೇಳೆ ಅವರ ಕುಟುಂಬದ ಇಬ್ಬರು ಸದಸ್ಯರು ಗಾಯಗೊಂಡಿದ್ದರು.  ಶ್ರೀನಗರ ಹಾಗೂ ಗುಲ್ ಮಾರ್ಗ್ ಪ್ರದೇಶದಲ್ಲಿ ಚೆನ್ನೈ ಮೂಲದ ಪ್ರವಾಸಿಗರ ಕುಟುಂಬ ತೆರಳುತ್ತಿದ್ದ ಕ್ಯಾಬ್ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.  

ಮೃತರನ್ನು ಆರ್ ತಿರುಮಣಿ ಎಂದು ಗುರುತಿಸಲಾಗಿದೆ.  ಕಲ್ಲು ತೂರಾಟದ ವೇಳೆ ತಿರುಮಣಿ ತಲೆಗೆ  ಗಂಭೀರವಾಗಿ ಗಾಯವಾಗಿದ್ದು, ಈ ವೇಳೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.   ಚಿಕಿತ್ಸೆ ಫಲಿಸದೇ ತಿರುಮಣಿ ಮೃತಪಟ್ಟಿದ್ದಾರೆ. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಐವರು ಹಿಜ್ ಬುಲ್  ಉಗ್ರರ  ಎನ್ಕೌಂಟರ್  ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತ್ಯೇಕತಾವಾದಿಗಳ ಗುಂಪು ಪ್ರವಾಸಿಗರ ಮೇಲೆ ಕಲ್ಲು ತೂರಾಟ ನಡೆಸಿತ್ತು.  ಭಾನುವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್‌ನಲ್ಲಿ ಒಟ್ಟು ಐದು ಮಂದಿ ಉಗ್ರರು ಹತರಾಗಿದ್ದರು. 

click me!