ಕೋಟ್ಯಾಧಿಪತಿಯಾಗಿಸುತ್ತದೆ1 ರೂಪಾಯಿ ನೋಟು! ಈಬೆಯಲ್ಲಿ ನೋಟುಗಳ ಮ್ಯಾಜಿಕ್

Published : Jan 11, 2017, 11:30 PM ISTUpdated : Apr 11, 2018, 01:00 PM IST
ಕೋಟ್ಯಾಧಿಪತಿಯಾಗಿಸುತ್ತದೆ1 ರೂಪಾಯಿ ನೋಟು! ಈಬೆಯಲ್ಲಿ ನೋಟುಗಳ ಮ್ಯಾಜಿಕ್

ಸಾರಾಂಶ

ಪ್ರಪಂಚದಲ್ಲಿ ಬಿನ್ನ ವಿಭಿನ್ನ ಹವ್ಯಾಸಗಳಿರುವ ವ್ಯಕ್ತಿಗಳಿರುತ್ತಾರೆ. ಇಂತಹವರಲ್ಲಿ ವಿವಿಧ ನೋಟುಗಳನ್ನೂ ಸಂಗ್ರಹಿಸುವುದೂ ಇರುತ್ತಾರೆ. ಒಂದು ವೇಳೆ ನಿಮ್ಮ ಬಳಿ ವಿಶೇಷ ಸಂಖ್ಯೆಯುಳ್ಳ ಒಂದು ರೂಪಾಯಿ ನೋಟುಗಳಿದ್ದರೆ ಇದನ್ನು ಮಾರಾಟ ಮಾಡಿ ನೀವೂ ಕೋಟ್ಯಾಧಿಪತಿಗಳಾಗಬಹುದು.

ನವದೆಹಲಿ(ಜ.12):ಪ್ರಪಂಚದಲ್ಲಿ ಬಿನ್ನ ವಿಭಿನ್ನ ಹವ್ಯಾಸಗಳಿರುವ ವ್ಯಕ್ತಿಗಳಿರುತ್ತಾರೆ. ಇಂತಹವರಲ್ಲಿ ವಿವಿಧ ನೋಟುಗಳನ್ನೂ ಸಂಗ್ರಹಿಸುವುದೂ ಇರುತ್ತಾರೆ. ಒಂದು ವೇಳೆ ನಿಮ್ಮ ಬಳಿ ವಿಶೇಷ ಸಂಖ್ಯೆಯುಳ್ಳ ಒಂದು ರೂಪಾಯಿ ನೋಟುಗಳಿದ್ದರೆ ಇದನ್ನು ಮಾರಾಟ ಮಾಡಿ ನೀವೂ ಕೋಟ್ಯಾಧಿಪತಿಗಳಾಗಬಹುದು.

ಇಂತಹುದ್ದೊಂದು ಅವಕಾಶ ಕಲ್ಪಿಸಿದ್ದು, ಇ-ಕಾಮರ್ಸ್ ವೆಬ್'ಸೈಟ್ ಆಗಿರುವ ಈಬೆ. ಇಲ್ಲಿ ನೀವು ಒಂದು ರೂಪಾಯಿಂದ 1000 ರೂಪಾಯಿವರೆಗಿನ ನೋಟುಗಳನ್ನು ಮಾರಾಟ ಮಾಡಿ ಲಕ್ಷ, ಕೋಟಿ ರೂಪಾಯಿ ಪಡೆಯಬಹುದು. ಈಗಿನ ಕಾಲದಲ್ಲಿ ಒಂದು ರೂಪಾಯಿಗೆ ದಶಕದ ಹಿಂದೆ ಇದ್ದ ಬೆಲೆ ಇಲ್ಲ. ಆದರೆ ಇದೇ ನೋಟು ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡಬಹುದು ಎಂಬುವುದನ್ನು ನೀವು ಯಾವತ್ತಾದರೂ ಯೋಚಿಸಿದ್ದೀರಾ?

ಹೌದು, ಈಬೆ ವೆಬ್'ಸೈಟ್'ನಲ್ಲಿ ಮೋಂಟೆಕ್ ಸಿಂಗ್ ಅಹ್ಲುವಾಲಿಯಾರವರ ಸಹಿ ಹಾಕಿದ 1 ರೂಪಾಯಿಯ ನೋಟು 11 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈಬೆಯಲ್ಲಿ ಸಾಮಾನ್ಯವಾಗಿ ನೋಟುಗಳನ್ನು ಹರಾಜು ಮಾಡಲಾಗುತ್ತದೆ, ಯಾರು ಹೆಚ್ಚು ಬೆಲೆಯನ್ನು ನಮೂದಿಸುತ್ತಾರೋ ಅವರಿಗೆ ಈ ನೋಟನ್ನು ನೀಡಲಾಗುತ್ತದೆ.

ಇದೇ ರೀತಿ 1000 ರೂಪಾಯಿ ನೋಟನ್ನೂ ಈ ವೆಬ್'ಸೈಟಿನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಹಾರಾಜು ಪ್ರಕ್ರಿಯೆಯಲ್ಲಿ ಇದರ ಬೆಲೆ 1 ಕೋಟಿಗೆ ತಲುಪಿದೆ. ಈ ನೋಟಿಗೆ ಇಂಕ್ ಕಲೆಯಾಗಿದ್ದು, ಇದರಲ್ಲಿರುವ ಸೀರಿಯಲ್ ನಂಬರ್ ಕೂಡಾ ಅಳಿಸಿ ಹೋಗುವ ಹಂತದಲ್ಲಿದೆ. ಅಲ್ಲದೆ 100 ರೂಪಾಯಿಯ ಎರಡು ನೋಟುಗಳು ಎರಡು ಲಕ್ಷದ 50 ಸಾವಿರ ರೂಪಾಯಿ ಮೌಲ್ಯಕ್ಕೆ ಹರಾಜಾಗಿವೆ, ಇದರ ಸೀರಿಯಲ್ ನಂಬರ್'ನಲ್ಲಿ 786 ಹಾಗೂ ಕೊನೆಯ ಆರು ಸಂಖ್ಯೆಗಳು 000000 ಆಗಿದ್ದುದೇ ನೋಟಿನಲ್ಲಿ ನಲ್ಲಿದ್ದ ವಿಶೇಷತೆ ಎಂದರೆ ವಿಶೇಷತೆಯಾಗಿತ್ತು.

ಇಲ್ಲಿ ಮಾರಾಟ/ ಹರಾಜಾಗುವ ಕೆಲ ನೋಟುಗಳು ವಿಶೇಷ ವಿಧಗಳದ್ದಾಗಿದೆ. ಇವುಗಳಲ್ಲಿ ಮುದ್ರಣಾ ದೋಷವಿರುವ ನೋಟುಗಳೂ ಸೇರಿವೆ. ಇನ್ನು ಹಲವಾರು ನೋಟುಗಳಲ್ಲಿ ಸೀರಿಯಲ್ ನಂಬರೇ ಇರುವುದಿಲ್ಲ ಆದರೂ ಇಂತಹ ಉಪಯೋಗಕ್ಕೆ ಬಾರದ ನೋಟುಗಳ ಮೌಲ್ಯ ಲಕ್ಷ ದಾಟುತ್ತದೆ. ಈಬೆ ವೆಬ್'ಸೈಟಿನಲ್ಲಿ  ವಿವಿಧ ರೀತಿಯ ನೋಟುಗಳ ಪಟ್ಟಿ ನೀಡಲಾಗಿದ್ದು, ಇದರಲ್ಲಿ ಸಿಮಿಪ್ರಿಂಟ್, ಎರರ್, ಫ್ಯಾನ್ಸಿ ನಂಬರ್ಸ್, 786, 500, 1000 ಹಾಗೂ ಒಂದು ರೂಪಾಯಿಯ ದುರ್ಬಲ ನೋಟುಗಳಿವೆ.

ಸೂಚನೆ: ಈ ಸುದ್ದಿಯನ್ನು ಲೈವ್ ಇಂಡಿಯಾ ಬಿತ್ತರಿಸಿದ ಸುದ್ದಿ ಹಾಗೂ ಈಬೆಯಲ್ಲಿ ನೀಡಿದ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ನೀಡಲಾಗಿದೆ   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ, ಶಾ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ
ಕಲಾಂಗೂ ಮುನ್ನ ರಾಷ್ಟ್ರಪತಿ ಹುದ್ದೆಗೆ ವಾಜಪೇಯಿ ಹೆಸರು!