ಬೆಂಗಳೂರಲ್ಲಿ ಸೆಕ್ಸ್ ಅಂಡ್ ಮರ್ಡರ್; ಉಗಾಂಡಾ ಹುಡುಗಿಯ ಬರ್ಬರ ಹತ್ಯೆ; ಓರ್ವ ಬಂಧನ

Published : Feb 02, 2017, 11:51 AM ISTUpdated : Apr 11, 2018, 01:09 PM IST
ಬೆಂಗಳೂರಲ್ಲಿ ಸೆಕ್ಸ್ ಅಂಡ್ ಮರ್ಡರ್; ಉಗಾಂಡಾ ಹುಡುಗಿಯ ಬರ್ಬರ ಹತ್ಯೆ; ಓರ್ವ ಬಂಧನ

ಸಾರಾಂಶ

ಆತ ದೂರದ ಊರಿಂದ ಕೆಲಸ ಅರಸಿ ಬಂದಿದ್ದ.. ಆಕೆ ದೂರದ ದೇಶದಿಂದ ವಿದ್ಯಾಭ್ಯಾಸ ಕ್ಕಾಗಿ ಬಂದಿದ್ಲು.. ಹೀಗೆ ಸಿಲಿಕಾನ್ ಸಿಟಿಗೆ ಬಂದವರು ತಮ್ಮದೇ ಆದ ಹಾದಿಯಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಆಸೆಯಿಂದ ಬಂದಿದ್ರು.. ಹೀಗೆ ಬಂದವರು ಹಾದಿ ತಪ್ಪಿದ್ರು.. ತಾವು ಮಾಡಿಕೊಂಡ ತಪ್ಪಿನಲ್ಲಿ ಆಕೆ ಬರ್ಬರವಾಗಿ ಕೊಲೆಯಾದ್ರೇ, ಆತ ಜೈಲು ಸೇರಿದ್ದಾನೆ.. ಹಾಗಾದ್ರೆ ಅಲ್ಲಿ ನಡೆದ ಘಟನೆ ಆದ್ರೂ ಏನು ಗೊತ್ತಾ? ಈ ಸ್ಟೋರಿ ನೋಡಿ...

ಬೆಂಗಳೂರು(ಫೆ. 02): ಆಫ್ರಿಕನ್ ವಿದ್ಯಾರ್ಥಿನಿಯೊಬ್ಬಳ ಬರ್ಬರ ಹತ್ಯೆ ನಿನ್ನೆ ಸಂಭವಿಸಿದ್ದು, ಈ ಸಂಬಂಧ ಉತ್ತರ ಭಾರದ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಗಾಂಡದ ನಕನಾಕಿಯಾ ಫ್ಲಾರೆನ್ಸ್ ಎಂಬಾಕೆ ನಿನ್ನೆ ಕೊಲೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಇಶಾಂತ್ ಬಂಧಿನಾಗಿರುವ ಆರೋಪಿ.

ತನ್ನೂರಿಂದ ವಿದ್ಯಾಭ್ಯಾಸಕ್ಕೆ ಬಂದಿದ್ದ ಫ್ಲಾರೆನ್ಸ್ ಹೆಣ್ಣೂರು ಮುಖ್ಯ ರಸ್ತೆಯ ಓಂಕಾರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುತ್ತಾಳೆ. ಈಕೆ ನಿನ್ನೆ ರಾತ್ರಿ ಎಂಜಿ ರಸ್ತೆಗೆ ತೆರಳಿರುತ್ತಾಳೆ. ಈ ವೇಳೆ ಅಲ್ಲಿಗೆ ಬಂದಿದ್ದ ಹಿಮಾಚಲ ಪ್ರದೇಶ ಮೂಲದ ಇಶಾನ್ ಎಂಬಾತನ ಪರಿಚಯವಾಗಿದೆ. ಇಬ್ಬರ ನಡುವೆ ಸೆಕ್ಸ್'ಗೆ ಒಪ್ಪಂದ ನಡೆದಿದೆ. ಅದರಂತೆ 5 ಸಾವಿರಕ್ಕೆ ಮಾತನಾಡಿಕೊಂಡು ಅಲ್ಲಿಂದ ಆಕೆ ಇಶಾಂತ್ ತನ್ನನ್ನು ಪಿಕ್ ಅಪ್ ಮಾಡಿಕೊಂಡು ತಾನು ವಾಸವಿರುವ ತಿಮ್ಮಗೌಡ ಲೇಔಟ್'ನಲ್ಲಿನ ಮನೆಗೆ ಕರೆದುಕೊಂಡು ಬಂರುತ್ತಾಳೆ. ಆದ್ರೆ ಎಲ್ಲ ಆದ ಬಳಿಕ ಆಕೆ ಉಲ್ಟಾ ಹೊಡೆಯುತ್ತಾಳೆ. ಐದು ಸಾವಿರ ಹೇಳಿದ್ದವಳು ನಂತರ ಹತ್ತು ಸಾವಿರ ಕೊಡುವಂತೆ ಬೇಡಿಕೆ ಇಡುತ್ತಾಳೆ. ಅಲ್ಲದೆ ತಾನು ಕೇಳಿದಷ್ಟು ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಚಾಕು ತೋರಿಸಿ ಬೆದರಿಸುತ್ತಾಳೆ. ಯಾವಾಗ ಆಕೆ ಚಾಕು ತೊರಿಸಿದಳೋ ಆಗ ಹೆದರಿದ ಇಶಾನ್ ಆಕೆ ಬಳಿಯಿದ್ದ ಚಾಕುವನ್ನು ತೆಗೆದುಕೊಂಡು ಆಕೆಯ ಮೇಲೆ ಹಲ್ಲೆ ಮಾಡುತ್ತಾನೆ. ನಂತ್ರ ಹಲ್ಲೆಗೊಳಗಾದ ಆಕೆ ತೀವ್ರವಾದ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಡುತ್ತಾಳೆ.

ಪೊಲೀಸರು ಮೇಲೆ ಉಗಾಂಡ ಪ್ರಜೆಗಳಿಂದ ಹಲ್ಲೆಗೆ ಯತ್ನ..!
ಇನ್ನು, ಮನೆಯಲ್ಲಿ ನಡೆದ ಕೊಲೆ ಬಗ್ಗೆ ವಿಷಯ ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಉಗಾಂಡ ಮೂಲದ ಆಕೆಯ ಸಹಪಾಟಿಗಳು ಸೇರಿಕೊಂಡು ಮನೆಯ ಮುಂದೆ ದಾಂಧಲೆ ನಡೆಸಿದ್ದಾರೆ.. ಕೊಲೆ ಮಾಡಿದ ಇಶಾಂತ್ ಮೇಲು ಹಲ್ಲೆ ಮಾಡೋಕೆ ಮುಂದಾಗಿದ್ದಾರೆ.. ಈ ವೇಳೆ ಗಾಬರಿಗೊಂಡ ಇಶಾನ್ ಮನೆಯೊಳ ಹೊಕ್ಕು ಡೋರ್ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ಪೊಲೀಸರೇ ಬಾಗಿಲು ಮುರಿದು ಆತನನ್ನು ಬಂಧಿಸಿದ್ದಾರೆ. ಆದ್ರೆ ಈ ವೇಳೆ ಉಗಾಂಡ ಪ್ರಜೆಗಳು ಪೊಲೀಸರ ಮೇಲೂ ಹಲ್ಲೆ ಮಾಡೋಕೆ ಮುಂದಾಗಿದ್ದಾರೆ. ಅದೂ ಅಲ್ಲದೆ ಬಾಗಲೂರು ಇನ್ಸ್'ಪೆಕ್ಟರ್ ಅಂಜನ್ ಕುಮಾರ್ ಮೇಲೂ ಹಲ್ಲೆ ಮಾಡಿದ್ದಾರೆ. ಯಾವಾಗ ಸ್ಥಳದ ವಾತಾವರಣ ಹಳಿತಪ್ಪಿತೋ ಆಗ ಎಚ್ಚೆತ್ತ ಪೊಲೀಸರು ಅವರನ್ನು ಹತ್ತಿಕ್ಕೋಕೆ ಮುಂದಾಗಿದ್ದಾರೆ. ಹೀಗಾಗಿ ಉಗಾಂಡ ಮೂಲದ ಪ್ರಜೆಯೋರ್ವನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಈ ಬಗ್ಗೆ ಗೃಹಸಚಿವ ಡಾ. ಜಿ.ಪರಮೇಶ್ವರ್ ಸಹ ಪ್ರತಿಕ್ರಿಯಿಸಿದ್ದು ಬೆಂಗಳೂರಲ್ಲಿ ವಿದೇಶಿ ಪ್ರಜೆಗಳ ಉಪಟಳ ಹೆಚ್ಚಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಸದ್ಯ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

- ರಮೇಶ್ ಹೆಚ್ / ಚೇತನ್ ಎಂ., ಕ್ರೈಂ ಬ್ಯೂರೋ, ಸುವರ್ಣನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!