
ನವದೆಹಲಿ(ಮಾ.23): ಕಾವೇರಿ ಜಲ ಮಂಡಳಿ ರಚನೆ ವಿಳಂಬದ ಬಗ್ಗೆ ತಮಿಳುನಾಡಿನ ನಟ ಕಂ ರಾಜಕಾರಣಿ ಕಮಲ್ ಹಾಸನ್, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ನಾವು ಪಾಕಿಸ್ತಾನ, ಬಾಂಗ್ಲಾದೇಶದೊಂದಿಗೆ ನಮ್ಮ ನದಿ ನೀರು ಹಂಚಿಕೊಳ್ಳುತ್ತೇವೆ. ಹೀಗಿರುವಾಗ, ನಮ್ಮ ರಾಜ್ಯಗಳೊಳಗೆ ಅದನ್ನು ಯಾಕೆ ಮಾಡಲು ಸಾಧ್ಯವಿಲ್ಲ. ಕಾವೇರಿ ಜಲ ಮಂಡಳಿ ರಚನೆಗೆ ವಿಳಂಬ ಅಸಮರ್ಥತೆ ಕಾರಣವಲ್ಲ, ತುಚ್ಛ ರಾಜಕಾರಣವೇ ಅದಕ್ಕೆ ಕಾರಣ. ಕರ್ನಾಟಕದ ಕುರ್ಚಿಯ ಮೇಲೆ ಕಣ್ಣಿಟ್ಟು ಸಂಗೀತ ಕುರ್ಚಿ ಆಟ ಆಡಲಾಗುತ್ತಿದೆ’ ಎಂದು ಕಮಲ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.