
ಚಿತ್ರದುರ್ಗ(ಸೆ.02): ಟಿಪ್ಪು ಜಯಂತಿ ವಿರೋಧಿಸಿ ಒನಕೆ ಚಳವಳಿಗೆ ಕೋಟೆನಾಡಿನಲ್ಲಿ ಜಿಲ್ಲಾಡಳಿತ ಮಾತ್ರ ಬಿಲ್ಕುಲ್ ಅವಕಾಶ ಕೊಡಲ್ಲ ಅಂತಿದೆ. ಇದಕ್ಕೆ ಕಾರಣ ನೋಡೋದಕ್ಕೆ ಹೋದರೆ ಅಚ್ಚರಿಯಾಗುತ್ತೆ. ಚಿತ್ರದುರ್ಗ ಪೊಲೀಸರಿಗೆ ಒನಕೆ ಒಂದು ಆಯುಧವಂತೆ.
ಇದೇ ಕಾರಣಕ್ಕೆ ಚಳವಳಿಗೆ ಅನುಮತಿ ನೀಡುವುದಿಲ್ಲ ಎಂದು ಪ್ರತಿಭಟನಾಕಾರಿಗೆ ಹೇಳಿದ್ದಾರಂತೆ. ಇದೇ ಕಾರಣಕ್ಕೆ ಪೊಲೀಸರು ಬಿಜೆಪಿ ಹಾಗೂ ಭಜರಂಗ ದಳದ ಕೆಲವು ಮುಖಂಡರ ಮನೆಗಳಲ್ಲಿ ಓನಕೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದೇ ತಿಂಗಳ 10ರಂದು ನಡೆಯಲಿರುವ ಟಿಪ್ಪು ಜಯಂತಿ ವಿರೋಧಿಸಿ ಒನಕೆ ಚಳವಳಿ ನಡೆಸಲು ಕಳೆದ ಒಂದು ವಾರದಿಂದ ಕರಪತ್ರ ಹಂಚಲಾಗಿದೆ. ಇನ್ನು ಒನಕೆ ಚಳವಳಿ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರಗಳ ಒಳಬರುವ ಎಲ್ಲ ಪ್ರವೇಶ ನಿಷೇಧ ಮಾಡಲಾಗಿದೆ.
ಪ್ರತಿಭಟನೆ ತಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಜ್ಜಾಗಿದೆ. ಬೆಳಗ್ಗೆ 10.30ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ಆರಂಭವಾಗುವ ಸಾಧ್ಯತೆ ಇದೆ. ನಿರ್ಬಂಧದ ನಡುವೆ ನಡೆಯುತ್ತಂತೆ ಪ್ರತಿಭಟನೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವರನ್ನು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.