ಡಿವೋರ್ಸ್​ ಕೊಟ್ಟ ನಂತರ ಗಂಡ ಬೇಕು ಎಂದು ಪತಿ ಮನೆ ಮುಂದೆ ಪತ್ನಿಯ ಧರಣಿ

Published : Nov 02, 2016, 04:54 AM ISTUpdated : Apr 11, 2018, 12:57 PM IST
ಡಿವೋರ್ಸ್​ ಕೊಟ್ಟ ನಂತರ ಗಂಡ ಬೇಕು ಎಂದು ಪತಿ ಮನೆ ಮುಂದೆ ಪತ್ನಿಯ ಧರಣಿ

ಸಾರಾಂಶ

ನಾರಾಯಣ ಒನ್ನಲ್ ಎಂಬ ಯುವಕ ಕಳೆದ ಐದು ವರ್ಷದ ಹಿಂದೆ ಸೊದರ ಸೊಸೆಯಾಗಿದ್ದ ನಾಗವೇಣಿ ಎಂಬುವಳನ್ನ ಮದುವೆಯಾಗಿದ್ದ. ಎರಡು ಮಕ್ಕಳ ನಂತರ ಈಗ ಅವಳು ಮಾನಸಿಕ ಅಸ್ವಸ್ಥೆ ಎಂದು ಆರೋಪಿಸಿ ವಿಚ್ಚೇದ ನೀಡಿದ್ದಾನೆ. 

ಧಾರವಾಡ(ಅ.02): ಡಿವೋರ್ಸ್​​ ನೀಡಿರುವ ಪತಿಗೆ ನನಗೆ ವಿಚ್ಛೆದನ ಬೇಡ ಗಂಡ ಬೇಕು ಗಂಡ ಎಂದು ಧಾರವಾಡ ಹೈಕೋರ್ಟ್​ನಿಂದ ತಡೆಯಾಜ್ಞೆ ತಂದು ಪತಿ ಮನೆಮುಂದೆ ಮಕ್ಕಳ್ಳೊಂದಿಗೆ ಮಹಿಳೆ ಧರಣಿ ಕುಳಿತುರವ ಘಟನೆ ಗದಗನ ಬೆಟಗೇರಿ ಬಾಲಾಜಿ ನಗರದಲ್ಲಿ ನಡೆದಿದೆ. 

ನಾರಾಯಣ ಒನ್ನಲ್ ಎಂಬ ಯುವಕ ಕಳೆದ ಐದು ವರ್ಷದ ಹಿಂದೆ ಸೊದರ ಸೊಸೆಯಾಗಿದ್ದ ನಾಗವೇಣಿ ಎಂಬುವಳನ್ನ ಮದುವೆಯಾಗಿದ್ದ. ಎರಡು ಮಕ್ಕಳ ನಂತರ ಈಗ ಅವಳು ಮಾನಸಿಕ ಅಸ್ವಸ್ಥೆ ಎಂದು ಆರೋಪಿಸಿ ವಿಚ್ಚೇದ ನೀಡಿದ್ದಾನೆ. 

ಮಹಿಳೆ ಮಕ್ಕಳೊಂದಿಗೆ ಪತಿ ಮನೆ ಎದಿರು ಧರಣಿ ನಡೆಸುತ್ತಿರುವ ಬಗ್ಗೆ ಚಿತ್ರಿಕರಿಸಲು ಹೊದ ವೇಳೆ ನಾರಾಯಣ ಹಾಗೂ ಅವರ ಬೆಂಬಲಿಗರು ಮಾಧ್ಯಮದವರ ಮೇಲೆನೆ ಕೂಗಾಡಿ, ಅಡ್ಡಿಪಡಿಸಲು ಮುಂದಾದರು. 

ನಾನು ಮಾನಸಿಕ ಅಸ್ವಸ್ಥೆ ಅಲ್ಲ. ಪತಿ ನಾರಾಯಣ ಮತ್ತು ಅತ್ತೆ, ನಾದಣಿ ಸೇರಿಕೊಂಡು ಚಿತ್ರಹಿಂಸೆ ನೀಡಿ ಮಾನಸಿಕ ಅಸ್ವಸ್ಥೆ ಎಂಬ ಪಟ್ಟನೀಡಿ ಮನೆಯಿಂದ ಹೊರಹಾಕಿದ್ದಾರೆ. ಈಗ ಸುಳ್ಳು ದಾಖಲೆ ಸೃಷ್ಠಿಮಾಡಿ ವಿಚ್ಛೇದನ ನೀಡಿ ನನ್ನ ಹಾಗೂ ನನ್ನ ಮಕ್ಕಳನ್ನ ದೂರ ತಳ್ಳುತ್ತಿದ್ದಾರೆ ಎಂಬುದು ನಾಗವೇಣಿ ಆರೋಪವಾಗಿದೆ. 

ಅದೇನೆ ಆಗಲಿ ನನಗೆ ನನ್ನ ಗಂಡ ಬೇಕು ಎಂದು ಧಾರವಾಡ ಹೈಕೋರ್ಟ್​ನಿಂದ ವಿಚ್ಛೆದನಕ್ಕೆ ತಡೆಯಾಜ್ಞೆ ತಂದು ಪತ್ನಿ ನಾಗವೇಣಿ ಎರಡು ಮಕ್ಕಳೊಂದಿಗೆ ಪತಿ ನಾರಾಯಣ ಮನೆ ಮುಂದೆ ಧರಣಿ ನಡೆಸಿದ್ದಾಳೆ. ವಿಚ್ಛೆದನ ನಂತರೂ ಗಂಡ ಹೆಂಡಿರ ಜಗಳ ಈಗ ಬೆಟಗೇರಿ ಪೊಲೀಸ್ ಠಾಣೆವರೆಗೂ ಬಂದಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಬಾಂಗ್ಲಾ ರಾಜತಾಂತ್ರಿಕ ಸಮರ
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ