ಹೊಸನಗರದಲ್ಲಿ ಹೊತ್ತಿ ಉರಿದ ಓಮ್ನಿ ಕಾರು

Published : Oct 31, 2017, 01:24 PM ISTUpdated : Apr 11, 2018, 12:55 PM IST
ಹೊಸನಗರದಲ್ಲಿ ಹೊತ್ತಿ ಉರಿದ ಓಮ್ನಿ ಕಾರು

ಸಾರಾಂಶ

ಕಾರು ಚಾಲನೆ ಮಾಡಿ ಅರ್ಧ ಕಿ.ಮೀ. ಕ್ರಮಿಸುವಷ್ಟರಲ್ಲಿ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಚಾಲಕ ಕಾರಿನಿಂದ ಇಳಿದು ನೋಡುವಷ್ಟರಲ್ಲಿ ಬೆಂಕಿ ಜ್ವಾಲೆ ಇಡೀ ಕಾರಿಗೆ ವ್ಯಾಪಿಸಿದೆ.

ಹೊಸನಗರ(ಅ.31): ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರು ಅಗ್ನಿ ಆಕಸ್ಮಿಕಕ್ಕೊಳಗಾಗಿ ರಸ್ತೆ ಮಧ್ಯದಲ್ಲೇ ಹೊತ್ತಿ ಸುಟ್ಟು ಕರಕಲಾದ ಘಟನೆ ತಾಲೂಕಿನ ಮಾರುತಿಪುರದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ಮಾರುತೀಪುರ ಪಟ್ಟಣದ ವರ್ತಕ ಪ್ರಾಣೇಶ ಕಾರಿನ ಮಾಲೀಕ. ಕೃಷ್ಣ ಎನ್ನುವವರು ಕಾರು ಚಲಾಯಿಸುತ್ತಿದ್ದರು. ಕಾರು ಚಾಲನೆ ಮಾಡಿ ಅರ್ಧ ಕಿ.ಮೀ. ಕ್ರಮಿಸುವಷ್ಟರಲ್ಲಿ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಚಾಲಕ ಕಾರಿನಿಂದ ಇಳಿದು ನೋಡುವಷ್ಟರಲ್ಲಿ ಬೆಂಕಿ ಜ್ವಾಲೆ ಇಡೀ ಕಾರಿಗೆ ವ್ಯಾಪಿಸಿದೆ.

ಕೇವಲ ಅರ್ಧಗಂಟೆಯೊಳಗೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಬಳಿಕ 'ಫಸ್ಟ್ ಡೇ' ಪಬ್ಲಿಕ್ ದರ್ಶನ್ ಕೊಟ್ಟ ಸಮಂತಾ-ರಾಜ್ ದಂಪತಿ.. ಎಲ್ಲಿ, ಯಾವ ಟೈಂ ನೋಡಿ..!
ಆತಂಕಕಾರಿ ಹಂತಕ್ಕೆ ದೆಹಲಿ ಹವೆ: 430ರ ಗಡಿ ದಾಟಿದ ವಾಯು ಗುಣಮಟ್ಟ ಸೂಚ್ಯಂಕ: ವಾರದಲ್ಲಿ ಕೆಲವೇ ದಿನ ಮಕ್ಕಳಿಗೆ ಶಾಲೆ