
ಬೆಂಗಳೂರು (ಜ.03): ‘ಓಂಕಾರ’ದ ಧ್ವನಿಯ ಮಹತ್ವ, ವಿಸ್ತಾರಗಳೆಷ್ಟು? ನಿಸ್ವಾರ್ಥ ಕಾಯಕ ಎಂದರೆ ಹೇಗಿರುತ್ತದೆ? ಎಂಬುದನ್ನು ನಾಸಾ ವಿಜ್ಞಾನ ಸಂಸ್ಥೆ ಧ್ವನಿ ಮುದ್ರಿಸಿರುವ ಸೂರ್ಯನಿಂದ ಹೊರಡುವ ಶಬ್ಧ ತರಂಗಗಳನ್ನು ಕೇಳಿ ವಿಶ್ವದ ವಿಜ್ಞಾನಿಗಳೆಲ್ಲಾ ದಂಗಾಗಿದ್ದಾರೆ. ಏಕೆಂದರೆ ಆದು ಓಂ ಕಾರದ ಶಬ್ಧವಾಗಿದೆ.
ನಮ್ಮ ಭಾರತದೇಶದ ಜನಸಂಖ್ಯೆಯಲ್ಲಿ ಎಪ್ಪತ್ತೈದು ಪ್ರತಿ ಶತ ಜನರು ತಮ್ಮ ಧರ್ಮದ ಧಾರ್ಮಿಕ ವಿಚಾರಗಳನ್ನು ಬಹುವಾಗಿ ನಂಬುತ್ತಾರೆ. ವಿಜ್ಞಾನ ಅಥವಾ ನಾಸಾದವರು ಒಪ್ಪಿರುವರು ಎಂದೊಡನೆ ಸಾಮಾಜಿಕ ಜಾಲ ತಾಣಗಳಲ್ಲಿ ಆ ವಿಚಾರಗಳನ್ನು ಭಯಂಕರವಾಗಿ ಹರಡುವುದುಂಟು. ತುಂಬಾ ದಿನಗಳಿಂದ ಇಂತಹ ಸುಳ್ಳು ಸಂದೇಶದೊಂದಿಗೆ ಒಂದು ಓಂಕಾರದ ಧ್ವನಿ ಸುರುಳಿ ವಾಟ್ಸಾಪ್ ಮತ್ತು ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಪಂಚ ಭೂತಗಳ ರಾಜ ಶಬ್ದ ಹುಟ್ಟಿದ್ದೇ ಓಂಕಾರದಲ್ಲಿ. ಅದನ್ನು ನಾವು ನಿಶ್ಯಬ್ದ ವಾತಾವರಣದಲ್ಲೆಲ್ಲ ಗ್ರಹಿಸಬಹುದು. ಸಮುದ್ರ ಶಂಖವನ್ನು ಕಿವಿಯಲ್ಲಿಟ್ಟುಕೊಂಡಾಗ ಈ ಓಂಕಾರದ ಅನುಭವವಾಗುತ್ತದೆ. ಹೀಗೆ ಈ ಓಂಕಾರವಿಲ್ಲದ ಸೃಷ್ಟಿಯೇ ಇಲ್ಲ. ಆದರೆ ಈ ಓಂಕಾರದ ಉಚ್ಚಾರಣೆಯ ಉದ್ದ ಆಯಾ ಚರಾಚರಗಳ ಉಸಿರಿನ ಅಂತರದ ಮೇಲೆ ಕೇಳಳ್ಪಡುತ್ತದೆ. ಉದಾಹರಣೆಗೆ ನಾವು ನಿಮಿಷಕ್ಕೆ ನಾಲ್ಕು ಸಲ ಉಸಿರಾಡುತ್ತೇವೆ. ಆ ಉಸಿರು ಹೃದಯ ಬಡಿತವನ್ನು ನಿರ್ಧರಿಸುತ್ತದೆ. ನಮ್ಮ ಒಂದು ಉಸಿರು ಒಂದು ಓಂಕಾರಕ್ಕೆ ಸಮ, ಹಾಗಾಗಿ ಮನುಷ್ಯನ ಆಯುಷ್ಯ 120 ವರ್ಷ. ಹೀಗೆ ಅಳೆದಾಗ ಚಂದ್ರನ ಒಂದು ಉಸಿರು ಅಂದರೆ ಓಂಕಾರದ ಉದ್ದ ನಮ್ಮ ಎರಡೂವರೇ ದಿನದಷ್ಟು. ಭೂದೇವಿಯ ಓಂಕಾರದ ಉದ್ದ ಒಂದು ತಿಂಗಳು. ಗುರುಗ್ರಹಕ್ಕೆ ಒಂದು ವರ್ಷ. ಶನಿಗ್ರಹದ ಓಂಕಾರದ ಉದ್ದ ನಮ್ಮ ಎರಡೂವರೇ ವರ್ಷಗಳಷ್ಟು. ನಮ್ಮ ಸವಿತೃ ಸೂರ್ಯ ನಾರಾಯಣನ ಓಂಕಾರೋಚ್ಛಾರಕ್ಕೆ ಹಿಡಿಯುವ ಸಮಯ! ಮಿತ್ರರೇ, ಅದು ಶ್ರವಣಾತೀತ ನಾಸಾ ಹತೋಟಿಗೆ ಸಿಗದಂತಹುದು. ಅಂದರೆ ನಮ್ಮ ಪೂರ್ಣಾಯುಷ್ಯದ ಕಾಲ 120 ವರ್ಷಗಳಷ್ಟು. ಹೀಗೇ ಲೆಕ್ಕ ಏರುತ್ತಾ ಹೋಗುತ್ತದೆ.
ಹೀಗೆ ‘ಮೇಖಲಾಬಿಂದು’ ಎನ್ನುವ ಸೌರಮಂಡಲವಿದೆ. ಆ ಓಂಕಾರದ ಉದ್ದ ಸೂರ್ಯನ 1500 ರಷ್ಟು! ಕೋಟಿ ಸೂರ್ಯ ಸಮ ಪ್ರಭನಾದ ನಮ್ಮ ಗಣೇಶನ ಓಂಕಾರದ ಉದ್ದ ‘ವಿವಸ್ವಾನ್’ ಎಂದು. ನಮ್ಮ ಸೂರ್ಯನ ಒಂದು ಕೋಟಿಯಷ್ಟು! ಈಗ ಹೇಳಿ, ನೀವು ಕೇಳುತ್ತಿರುವ ನಾಸಾದೆಂದು ಸುತ್ತಾಡುತ್ತಿರುವ ಧ್ವನಿ ಸುರುಳಿಯ ಓಂಕಾರದ ಉದ್ದ ಮನುಷ್ಯ ಮಾತ್ರನದು. ಸೂರ್ಯನಿಂದ ಓಂಕಾರ ಹೊರಹೊಮ್ಮುವ ವೇದದ ಮಾತಿನ ಸಾಕ್ಷಿಗೆ ನಾವಿಂತಹ ಕೃತಕ ಧ್ವನಿಸುರುಳಿಗಳ ಮೊರೆಹೋಗುವುದು
ಅಜ್ಞಾನವಲ್ಲವೇ? ಆಲೋಚಿಸಿ...!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.