ಪ್ರಧಾನಿ ಮೋದಿಯವರನ್ನು ಮದುವೆಯಾಗಬೇಕು: ಧರಣಿ ಕುಳಿತ ಓಂ ಶಾಂತಿ ಶರ್ಮಾ ಯಾರು?

Published : Oct 07, 2017, 12:59 PM ISTUpdated : Apr 11, 2018, 01:11 PM IST
ಪ್ರಧಾನಿ ಮೋದಿಯವರನ್ನು ಮದುವೆಯಾಗಬೇಕು: ಧರಣಿ ಕುಳಿತ ಓಂ ಶಾಂತಿ ಶರ್ಮಾ ಯಾರು?

ಸಾರಾಂಶ

ಜೈಪುರದಲ್ಲಿ ತನಗೆ ಸಾಕಷ್ಟು ಜಮೀನು ಇದೆ. ಕೆಲವನ್ನು ಮಾರಿ ಮೋದಿಯವರಿಗೆ ಉಡುಗೊರೆ ಕೊಡಬೇಕೆಂದುಕೊಂಡಿದ್ದೇನೆ. ಮೋದಿಜೀ ಇಲ್ಲಿ ಬಂದು ನನ್ನನ್ನು ಭೇಟಿಯಾಗುವವರೆಗೂ ನನ್ನ ಧರಣಿ ನಿಲ್ಲಿಸುವುದಿಲ್ಲ ಎಂದೂ ಈ ಮಹಿಳೆ ಹಠ ಹಿಡಿದಿದ್ದಾಳೆ. ಸೆಪ್ಟೆಂಬರ್ 9ರಿಂದ ಜಂತರ್'ಮಂತರ್'ನಲ್ಲಿ ಈ ಮಹಿಳೆ ಧರಣಿ ಕುಳಿತೇ ಇದ್ದಾಳೆ.

ನವದೆಹಲಿ(ಅ. 07): ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದುವೆಯಾಗಬೇಕೆಂದು ಹಠಹಿಡಿದಿದ್ದಾಳೆ. ಜೈಪುರದ ಓಂ ಶಾಂತಿ ಶರ್ಮಾ ಎಂಬಾಕೆ ಮೋದಿಯವರನ್ನು ವಿವಾಹವಾಗುವ ಇಚ್ಛೆಯಿಂದ ಇಲ್ಲಿಯ ಜಂತರ್‌'ಮಂತರ್‌'ನಲ್ಲಿ ಕಳೆದೊಂದು ತಿಂಗಳಿನಿಂದ ಧರಣಿ ಕುಳಿತಿದ್ದಾಳೆ. 40 ವರ್ಷದ ಓಂ ಶಾಂತಿ ಶರ್ಮಾ ಈ ಹಿಂದೆ ವಿವಾಹವಾಗಿದ್ದು, 20 ವರ್ಷದ ಮಗಳಿದ್ದಾಳೆ. ಆದರೆ, ಹಲವು ವರ್ಷಗಳಿಂದ ಗಂಡನಿಂದ ದೂರವಾಗಿ ಒಂಟಿಯಾಗಿದ್ದಾಳಂತೆ. ಪ್ರಧಾನಿ ಮೋದಿ ಕೂಡ ತನ್ನ ಹಾಗೆಯೇ ಒಂಟಿಯಾಗಿದ್ದು, ಅವರನ್ನು ಮದುವೆಯಾಗಬಯಸುವೆ ಎಂದು ಶಾಂತಿ ಹೇಳುತ್ತಾಳೆ.

"ನನ್ನ ಈ ವರ್ತನೆ ನೋಡಿ ಜನರು ಅಪಹಾಸ್ಯ ಮಾಡುತ್ತಾರೆಂದು ನನಗೆ ಗೊತ್ತು. ನಾನೇನೂ ಮಾನಸಿಕ ಅಸ್ವಸ್ಥೆಯಲ್ಲ. ನರೇಂದ್ರ ಮೋದಿಯವರನ್ನು ಕಂಡರೆ ನನಗೆ ಬಹಳ ಗೌರವ. ಹಿರಿಯರಿಗೆ ಗೌರವ ಕೊಡಬೇಕು, ಅವರ ಕೆಲಸದಲ್ಲಿ ನೆರವಾಗಬೇಕೆಂಬ ಸಂಸ್ಕೃತಿಯನ್ನು ಮನೆಯಲ್ಲಿ ಕಲಿಸಿಕೊಟ್ಟಿದ್ದಾರೆ. ದೇಶಸೇವೆ ನಿಮಿತ್ತ ವಿಪರೀತ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಧಾನಿಯವರಿಗೆ ಸಹಾಯದ ಅಗತ್ಯವಿದೆ. ಹೀಗಾಗಿ, ಅವರಿಗೆ ಸೇವೆ ಮಾಡಿ ನೆರವು ನೀಡಲು ಮದುವೆಯಾಗಬಯಸುವೆ" ಎಂದು ಈ ಓಂ ಶಾಂತಿ ಶರ್ಮಾ ಕಾರಣ ಕೊಡುತ್ತಾಳೆ.

ಜೈಪುರದಲ್ಲಿ ತನಗೆ ಸಾಕಷ್ಟು ಜಮೀನು ಇದೆ. ಕೆಲವನ್ನು ಮಾರಿ ಮೋದಿಯವರಿಗೆ ಉಡುಗೊರೆ ಕೊಡಬೇಕೆಂದುಕೊಂಡಿದ್ದೇನೆ. ಮೋದಿಜೀ ಇಲ್ಲಿ ಬಂದು ನನ್ನನ್ನು ಭೇಟಿಯಾಗುವವರೆಗೂ ನನ್ನ ಧರಣಿ ನಿಲ್ಲಿಸುವುದಿಲ್ಲ ಎಂದೂ ಈ ಮಹಿಳೆ ಹಠ ಹಿಡಿದಿದ್ದಾಳೆ. ಸೆಪ್ಟೆಂಬರ್ 9ರಿಂದ ಜಂತರ್'ಮಂತರ್'ನಲ್ಲಿ ಈ ಮಹಿಳೆ ಧರಣಿ ಕುಳಿತೇ ಇದ್ದಾಳೆ.

ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ವಿವಾಹಿತರಾಗಿದ್ದಾರೆ. ಜಶೋದಾಬೆನ್ ಅವರನ್ನು ಮೋದಿ ಮದುವೆಯಾಗಿದ್ದರೂ ಹಲವಾರು ವರ್ಷಗಳಿಂದ ದೂರವಾಗಿಯೇ ಉಳಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

10 ದಿನ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ
ಗ್ಯಾರಂಟಿಯಿಂದಾಗಿ ತಲಾ ಆದಾಯದಲ್ಲಿ ರಾಜ್ಯ ನಂ.1 : ಸಿದ್ದರಾಮಯ್ಯ