ಶೇಕ್ಸ್’ಪಿಯರ್’ಗಿಂತಲೂ ಹಿರಿಯ ಜೀವಿ ಪತ್ತೆ..!

By Suvarna Web DeskFirst Published Dec 14, 2017, 5:38 PM IST
Highlights

ಆರ್ಕ್ಟಿಕ್ ಸಾಗರದಲ್ಲಿ ಅತ್ಯಂತ ಹಳೆಯದಾದ ಜೀವಿಯೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.  ವಿಜ್ಞಾನಿಗಳ ಪ್ರಕಾರ ಕಶೇರುಕಗಳಲ್ಲಿ ಇದೇ ಅತ್ಯಂತ ಹಿರಿಯದೆನ್ನಲಾಗಿದೆ.

ಹೊಸದಿಲ್ಲಿ (ಡಿ.14): ಆರ್ಕ್ಟಿಕ್ ಸಾಗರದಲ್ಲಿ ಅತ್ಯಂತ ಹಳೆಯದಾದ ಜೀವಿಯೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.  ವಿಜ್ಞಾನಿಗಳ ಪ್ರಕಾರ ಕಶೇರುಕಗಳಲ್ಲಿ ಇದೇ ಅತ್ಯಂತ ಹಿರಿಯದೆನ್ನಲಾಗಿದೆ.

ಅಂದ ಹಾಗೇ ಈ ನೀರಿನಲ್ಲಿ  ಪತ್ತೆಯಾದ  ಜೀವಿ ಶಾರ್ಕ್ ಆಗಿದ್ದು, 512 ವರ್ಷ ಹಳೆಯದೆಂದು ಅಂದಾಜು ಮಾಡಲಾಗಿದೆ.  ಅಲ್ಲದೇ ಶೇಕ್ಸ್’ಪಿಯರ್’ಗಿಂತಲೂ ಕೂಡ ಈ ಶಾರ್ಕ್ ಮೊದಲು ಜನಿಸಿದ್ದು, ಇದರ ತೂಕ ಒಂದು ಟನ್’ಗಿಂತಲೂ ಅಧಿಕ ಇರಬಹುದೆನ್ನಲಾಗಿದೆ.

ಅಂದರೆ ಸುಮಾರು 1505ರಲ್ಲಿ ಮಾರ್ಟಿನ್ ಲೂಥರ್ ಕಿಂಗ್  ರಾಜನಾಗಿದ್ದ ಅವಧಿಯಲ್ಲಿ ಜನಿಸಿದ್ದೆನ್ನಲಾಗಿದೆ. ಈ ಶಾರ್ಕ್ ಇಲ್ಲಿ 7200 ಅಡಿಯಲ್ಲಿ ಈಜುತ್ತಿರುತ್ತದೆ. 18 ಅಡಿ ಉದ್ದವಿದೆ ಎಂದು ಹೇಳಿದ್ದಾರೆ.

ಅಧ್ಯಯನದ ಮೂಲಕ ಇದರ ವಯಸ್ಸನ್ನು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಸಾಮಾನ್ಯವಾಗಿ ಗ್ರೀನ್’ಲ್ಯಾಂಡ್ ಶಾರ್ಕ್’ಗಳು ಸುಮಾರು 400 ವರ್ಷಗಳ ಕಾಲ ಜೀವಿಸುತ್ತವೆ. ಆದರೆ ಈ ಶಾರ್ಕ್ ಸುಮಾರು 500 ವರ್ಷಗಳಷ್ಟು ಹಳೆಯದೆನ್ನಲಾಗಿದೆ.

ಶಾರ್ಕ್’ಗಳು ತಮ್ಮ ಜೀವನದ ಅತ್ಯಧಿಕ ಸಮಯವನ್ನು ನೀರಿನಲ್ಲಿ ಈಜುತ್ತಲೇ ಕಳೆಯುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.

click me!