
ಚಿಕ್ಕಬಳ್ಳಾಪುರ (ನ. 11): ಕಳೆದ ಹತ್ತು ದಿನಗಳಿಂದ ನಗರಸಭೆ ಮುಂಭಾಗದಲ್ಲಿ ಜೀವನ ನಡೆಸುತ್ತಿರುವ 20 ವಾಟರ್ ಮೆನ್‍ಗಳ ಕುಟುಂಬ ಬೀದಿಗೆ ಬಿದ್ದಿದೆ.
15 ತಿಂಗಳಿಂದ ಸಂಬಳ ಇಲ್ಲದೇ ಜೀವನ ನಡೆಸಲು ಕಷ್ಟವಾಗಿ ಶಿಡ್ಲಘಟ್ಟ ನಗರಸಭೆ ಮುಂಭಾಗದಲ್ಲಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ನಗರಸಭೆ ಮತ್ತು ಗುತ್ತಿಗೆದಾರರ ಜಟಾಪಟಿಯಲ್ಲಿ 15 ತಿಂಗಳಿಂದ ಸಂಬಳ ಇಲ್ಲದೆ ನೌಕರರು ನರಕ ಯಾತನೆ ಅನುಭವಿಸುತ್ತಿದ್ದಾರೆ.
ನಗರಸಭೆ ಅಧಿಕಾರಿಗಳು ಬಿಲ್ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ, ಗುತ್ತಿಗೆದಾರರು ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಇಬ್ಬರ ನಡುವಿನ ಕೆಸರೆರಚಾಟದಲ್ಲಿ ಕೂಲಿ ಕಾರ್ಮಿಕರು ನರಳಾಟ ಅನುಭವಿಸುತ್ತಿದ್ದಾರೆ. ಹತ್ತು ದಿನಗಳಿಂದ ಬೀದಿಯಲ್ಲೇ ಜೀವನ ನಡೆಸುತ್ತಿದ್ದರೂ ಕನಿಷ್ಟ ಸೌಜನ್ಯಕ್ಕೂ ಯಾರೊಬ್ಬರೂ ಬಂದಿಲ್ಲ. ಇಲ್ಲಿ ಮಲಗಿದರೆ ಪೊಲೀಸರನ್ನು ಕರೆಸಿ ಹೊರ ಹಾಕಿಸುವುದಾಗಿ ಕಮಿಷನರ್ ಹೇಳಿದ್ದಾರೆ.
ಆಸ್ಪತ್ರೆಗೂ ಕಟ್ಟಲು ಹಣವಿಲ್ಲದೆ ನವೀನ್ ಎಂಬುವವರ 5ತಿಂಗಳ ಹಸುಗೂಸು ಸಾವನ್ನಪ್ಪಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.