
ವಾಷಿಂಗ್ಟನ್(ಫೆ.01): ಡೊನಾಲ್ಡ್ ಅ್ರಂಪ್ ತನ್ನ ನಿರ್ಧಾರದಿಂದ ಕೇವಲ ಅಮೆರಿಕಾದಲ್ಲಷ್ಟೇ ಅಲ್ಲ ಇಡೀ ಜಗತ್ತಿನಲ್ಲೇ ತಲ್ಲಣ ಮೂಡಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಪ್ರವಾಸಿಗರಿಗೆ ಸಂಬಂಧಿಸಿದಂತೆ ಆದೇಶವೊಂದಕ್ಕೆ ಟ್ರಂಪ್ ಸಹಿ ಹಾಕಿದ್ದು, ಇದು ಜಾರಿಗೊಂಡ ಬಳಿಕ ಪ್ರವಾಸಿಗರ ಸಮಸ್ಯೆಗಳೂ ಹೆಚ್ಚಿವೆ. ಇವರ ಈ ನಡೆಯ ಕುರಿತಾಗಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದೀಗ ಈ ಬೆಳವಣಿಗೆಗಳ ನಡುವೆ ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಶಾಕಿಂಗ್ ದೃಶ್ಯವೊಂದು ದಾಖಲಾಗಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಧಿಕೃತವಾಗಿ ಅಮೆರಿಕಾದ ಅಧ್ಯಕ್ಷರಾಗಿ ಪ್ರತಿಜ್ಞೆ ಸ್ವೀಕರಿಸಿದ ಬಳಿಕ ಟ್ರಂಪ್ ತನ್ನ ಪತ್ನಿ ಮೆಲೆನಿಯಾಳೊಂದಿಗೆ ವೈಟ್'ಹೌಸ್'ಗೆ ಆಗಮಿಸಿದ್ದರು. ಈ ವೇಳೆ ಒಬಾಮಾ ದಂಪತಿ ಇಬ್ಬರನ್ನೂ ಸ್ವಾಗತಿಸಿದ್ದಾರೆ. ಈ ವೇಳೆ ಮೆಲೆನಿಯಾ, ಮಿಶೆಲ್ ಒಬಾಮಾರಿಗೆ ಗಿಫ್ಡ್ ಒಂದನ್ನು ನೀಡಿದ್ದಾರೆ. ಇದನ್ನು ಸ್ವೀಕರಿಸಿದ ಮಿಶೆಲ್ ಒಬಾಮಾ, ತನ್ನ ಪತಿ ಬರಾಕ್ ಒಬಾಮಾರಿಗೆ ಹಸ್ತಾಂತರಿಸುತ್ತಾರೆ. ಆದರೆ ಒಬಾಮಾ ಮಾತ್ರ ಅತ್ತ ಇತ್ತ ನೋಡಿ ಆ ಗಿಫ್ಟ್'ನ್ನು ಕಿತ್ತೆಸೆದಿದ್ದಾರೆ.
ಇದು ನಿಜಾನಾ ಒಬಾಮಾ ಹೀಗೆ ಮಾಡಲು ಸಾಧ್ಯನಾ? ಅಂತ ಅಚ್ಚರಿ ವ್ಯಕ್ತಪಡಿಸುವವರು ಇದೇ ದೃಶ್ಯವನ್ನಾಧರಿಸಿದ ಮತ್ತೋಮದು ವಿಡಿಯೋವನ್ನು ತಪ್ಪದೇ ನೋಡಬೇಕು. ತನ್ನ ಸರಳತೆ ಹಾಗೂ ವ್ಯಕ್ತಿತ್ವದಿಂದಲೇ ಜನರ ಮನಗೆದ್ದ ಒಬಾಮಾ ಹೀಗೆ ವರ್ತಿಸಲು ಸಾಧ್ಯವೇ ಇಲ್ಲ. ಮನಸ್ತಾಪವಿದ್ದರೂ ಅವರು ಸಾರ್ವಜನಿಕವಾಗಿ ಯಾರಿಗೂ ನೋವುಂಟು ಮಾಡುವುದಿಲ್ಲ. ವಾಸ್ತವವಾಗಿ ಗಿಫ್ಡ್ ಸ್ವೀಕರಿಸಿದ ಒಬಾಮಾ ಅದನ್ನು ಗೌರವಪೂರ್ವಕವಾಗಿ ತನ್ನ ಸಿಬ್ಬಂದಿಗೆ ಹಸ್ತಾಂತರಿಸಿ ಮನೆಯೊಳಗೆ ಇಡುವಂತೆ ಸೂಚಿಸಿದ್ದಾರೆ. ಬಳಿಕ ಮರಳಿ ಬಂದು ಟ್ರಂಪ್ ದಂಪತಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಅದ್ಯಾರೋ ಕಿಡಿಗೇಡಿಗಳು ಈ ವಿಡಿಯೋವನ್ನು ಎಡಿಟ್ ಮಾಡಿ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.