
ನವದೆಹಲಿ (ಫೆ.01): ಬಹುನಿರೀಕ್ಷಿತ ಬಜೆಟನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಮಂಡನೆ ಮಾಡುರುವುದನ್ನು ಇಡೀ ದೇಶ ನೋಡಿದೆ. ಕೆಲವರು ಜನಪರವಾಗಿದೆ ಎಂದರೆ ಇನ್ನು ಕೆಲವರು ಜನವಿರೋಧಿ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಜೆಟ್ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ. ಆರ್ಥಿಕ ಅಭಿವೃದ್ಧಿಗೆ ಅರುಣ್ ಜೇಟ್ಲಿ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ. ಸದ್ಯ ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಗಮನಿಸಿದರೆ ನಿಮಗೆ ಆಶ್ಚರ್ಯವಾದೀತು!
* ದೇಶದಲ್ಲಿ ಒಬ್ಬ ದುಡಿದು 130 ಜನರನ್ನು ಸಾಕಬೇಕು ಇದು ಭಾರತೀಯ ಅರ್ಥವ್ಯವಸ್ಥೆಯ ಸ್ಥಿತಿ
* 10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರು ಕೇವಲ 24 ಲಕ್ಷ ಜನ
* ಪ್ರತಿ ವರ್ಷ ದೇಶದಲ್ಲಿ ಸರಾಸರಿ 30 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟ ಆದರೆ, 5ರಿಂದ 10 ಲಕ್ಷ ಆದಾಯ ಇರುವವರ ಸಂಖ್ಯೆ ಕೇವಲ 52 ಲಕ್ಷ
* 2016ರಲ್ಲಿ ವಿದೇಶ ಪ್ರವಾಸಕ್ಕೆ ಹೋದವರ ಸಂಖ್ಯೆ 2 ಕೋಟಿ ಆದರೆ, 50 ಲಕ್ಷಕ್ಕಿಂತ ಹೆಚ್ಚು ಆದಾಯದಾರರು ಕೇವಲ ಒಂದು ಲಕ್ಷದ 72 ಸಾವಿರ
* ಒಟ್ಟು ಟ್ಯಾಕ್ಸ್ ಕಟ್ಟುವವರ ಸಂಖ್ಯೆಗಿಂತ ಕಾರು ಮಾಲೀಕರ ಸಂಖ್ಯೆ ಹೆಚ್ಚು
* ಒಟ್ಟು ಟ್ಯಾಕ್ಸ್ ಕಟ್ಟುವವರ ಸಂಖ್ಯೆ 1 ಕೋಟಿ 16 ಲಕ್ಷ ಜನ ಮಾತ್ರ
* ದೇಶದ ಜನಸಂಖ್ಯೆ 130 ಕೋಟಿಗಿಂತಲೂ ಹೆಚ್ಚು
* ಒಬ್ಬನ ತೆರಿಗೆಯಲ್ಲಿ ಸರಾಸರಿ 130 ಜನರ ಉದ್ದಾರ ಆಗಬೇಕು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.