ಶ್ವೇತಭವನಕ್ಕೆ ಗುಡ್ ಬಾಯ್ ಹೇಳಿ ಬಾಡಿಗೆ ಮನೆಗೆ ಶಿಫ್ಟ್ ಆದ ಬರಾಕ್ ಒಬಾಮಾ

By Suvarna Web DeskFirst Published Jan 23, 2017, 8:03 AM IST
Highlights

2017ರ ಜನವರಿ 20 ಅಮೆರಿಕಾದ ಅಧ್ಯಕ್ಷರಾಗಿ ಒಬಾಮಾ ಕಾರ್ಯನಿರ್ವಹಿಸಿದ ಕೊನೆಯ ದಿನವಾಗಿತ್ತು. ಯಾಕೆಂದರೆ ಜನವರಿ 20 ರಂದು ಅಧಿಕೃತವಾಗಿ ಡೊನಾಲ್ಡ್ ಟ್ರಂಪ್  ಅಮೆರಿಕಾದ 45 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಶ್ವೇತಭವನಕ್ಕೆ ಗುಡ್ ಬೈ ಹೇಳಿದ ಬರಾಕ್ ಒಬಾಮಾ, ಅಲ್ಲಿಂದ ಹೊರ ಬಂದು ಏನು ಮಾಡುತ್ತಾರೆ? ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಈ ಕುರಿತಾಗಿ ನಿಮಗೂ ತಿಳಿಯಬೇಕೇ? ಹಾಗಾದ್ರೆ ಈ ಸ್ಟೋರಿ ಓದಿ.

ವಾಷಿಂಗ್ಟನ್(ಜ.23): 2017ರ ಜನವರಿ 20 ಅಮೆರಿಕಾದ ಅಧ್ಯಕ್ಷರಾಗಿ ಒಬಾಮಾ ಕಾರ್ಯನಿರ್ವಹಿಸಿದ ಕೊನೆಯ ದಿನವಾಗಿತ್ತು. ಯಾಕೆಂದರೆ ಜನವರಿ 20 ರಂದು ಅಧಿಕೃತವಾಗಿ ಡೊನಾಲ್ಡ್ ಟ್ರಂಪ್  ಅಮೆರಿಕಾದ 45 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಶ್ವೇತಭವನಕ್ಕೆ ಗುಡ್ ಬೈ ಹೇಳಿದ ಬರಾಕ್ ಒಬಾಮಾ, ಅಲ್ಲಿಂದ ಹೊರ ಬಂದು ಏನು ಮಾಡುತ್ತಾರೆ? ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಈ ಕುರಿತಾಗಿ ನಿಮಗೂ ತಿಳಿಯಬೇಕೇ? ಹಾಗಾದ್ರೆ ಈ ಸ್ಟೋರಿ ಓದಿ.

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬರಾಕ್ ಒಬಾಮಾ ಇದೀಗ ವಾಷಿಂಗ್ಟನ್'ನ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರೆ. ಅವರು ಅಲ್ಲೇ ಇದ್ದು ಉದ್ಯೋಗ ಮಾಡಲಿದ್ದಾರೆ. ಇವರು ಯಾವ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಾರೆ ಎಂಬ ವಿಚಾರ ಮಾತ್ರ ಿನ್ನೂ ಗೌಪ್ಯವಾಗಿದೆ.

ಮಾಜಿ ಅಧ್ಯಕ್ಷ ಒಬಾಮಾರ ಆಪ್ತರು ತಿಳಿಸಿರುವ ಪ್ರಕಾರ 'ಅವರ ಬಳಿ ತನ್ನದೇ ಎನ್ನಲು ಸ್ವಂತ ಕಾರು ಕೂಡಾ ಇಲ್ಲವಂತೆ. ಹಾಗಾಗಿ ಉದ್ಯೋಗ ಮಾಡುವುದಾದರೂ ಅವರು ಕೆಲಸ ಮಾಡುವ ಸ್ಥಳಕ್ಕೆ ತನ್ನ ಹಳೆಯ ಬೈಕ್'ನಲ್ಲೇ ಪ್ರಯಾಣಿಸುತ್ತಾರೆ. ಈಗಾಗಲೇ ಕೆಲಸಕ್ಕಾಗಿ ಅವರು ಅರ್ಜಿ ಸಲ್ಲಿಸಿದ್ದು, ಕೆಲವೇ ದಿನಗಳಲ್ಲಿ ಉದ್ಯೋಗಕ್ಕೆ ಸೇರಲಿದ್ದಾರೆ' ಎಂದಿದ್ದಾರೆ.

ಒಬಾಮಾ ಮುಂದಿನ ಎರಡು ವರ್ಷಗಳ ಕಾಲ ಈಗ ಶಿಫ್ಟ್ ಆಗಿರುವ ಮನೆಯಲ್ಲೇ ನೆಲೆಸಲಿದ್ದಾರೆ. ಇನ್ನು ಒಬಾಮಾ ಈ ಮನೆಯಲ್ಲಿ ವಾಸ್ತವ್ಯ ಹೂಡಿರುವ ಹಿಂದೆಯೂ ಕಾರಣಗಳಿವೆ. 'ಅಮೆರಿಕಾದ ಕಾನೂನಿನನ್ವಯ ಯಾವೊಬ್ಬ ಮಾಜಿ ಅಧ್ಯಕ್ಷನಿಗೂ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ' ಎಂಬುವುದು ಮೊದಲ ಕಾರಣವಾಗಿದ್ದರೆ. ಒಬಾಮಾರಾ ಚಿಕ್ಕ ಮಗಳು ಸಾಶಾ ಒಬಾಮಾ ಇನ್ನೂ ಕಲಿಯುತ್ತಿದ್ದು, ಆಕೆಯ ಶಿಕ್ಷಣ ಪೂರ್ಣಗೊಳ್ಳುವವರೆಗೆ ಇವರು ತನ್ನ ಕುಟುಂಬದೊಂದಿಗೆ ವಾಷಿಂಗ್ಟನ್'ನ ಬಾಡಿಗೆ ಮನೆಯಲ್ಲೇ ಉಳಿದುಕೊಳ್ಳಲಿದ್ದಾರೆ.

ಆದರೆ ಅಮೆರಿಕಾದ ಮಾಜಿ ಅಧ್ಯಕ್ಷ ಎಂಬ ಕಾರಣದಿಂದ ಈಗಲೂ ಒಬಾಮಾರಿಗೆ ಭದ್ರತೆ ಒದಗಿಸಲಾಗಿದೆ. ಇದರೊಂದಿಗೆ ಇವರ ಕುಟುಂಬದ ಇತರ ಸದಸ್ಯರಿಗೂ ಸೀಕ್ರೆಟ್ ಸರ್ವಿಸ್ ಮೂಲಕ ಭದ್ರತೆ ಸಿಗಲಿದೆ.

click me!