ತನ್ನ ಬೇಸರ ನೀಗಿಸಲು 106 ರೋಗಿಗಳ ಹತ್ಯೆಗೈದ ನರ್ಸ್

Published : Nov 11, 2017, 02:30 PM ISTUpdated : Apr 11, 2018, 12:42 PM IST
ತನ್ನ ಬೇಸರ ನೀಗಿಸಲು 106 ರೋಗಿಗಳ ಹತ್ಯೆಗೈದ ನರ್ಸ್

ಸಾರಾಂಶ

ಪಾಪಿ ನರ್ಸ್ ರೋಗಿಗಳಿಗೆ ಓವರ್‌ಡೋಸ್ ನೀಡಿ ಕೃತ್ಯ

ಬರ್ಲಿನ್: ರೋಗಿಗಳ ಪಾಲಿಗೆ ದೇವರಾಗಬೇಕಿದ್ದ ನರ್ಸ್, ಸ್ವತಃ 100ಕ್ಕೂ ಹೆಚ್ಚು ರೋಗಿಗಳನ್ನು ಹತ್ಯೆ ಮಾಡಿದ ಭೀಕರ ಘಟನೆ ಜರ್ಮನಿಯಲ್ಲಿ ನಡೆದಿದೆ.

ಇದುವರೆಗಿನ ಲೆಕ್ಕಾಚಾರದ ಪ್ರಕಾರ 106 ಜನರು ನೀಲ್ಸ್ ಹೋಗೆಲ್ ಎಂಬ ನರ್ಸ್‌ನ ದುರಳ ಕೃತ್ಯಕ್ಕೆ ಬಲಿಯಾಗಿರುವುದು ಖಚಿತಪಟ್ಟಿದೆ.

1999-2005ರ ಅವಧಿಯಲ್ಲಿ ಜರ್ಮನಿಯ 2 ಆಸ್ಪತ್ರೆಗಳಲ್ಲಿ ನೀಲ್ಸ್ ನರ್ಸ್ ಆಗಿ ಕಾರ್ಯ ನಿರ್ವಹಿಸಿದ್ದ. ಈತ ಕಾರ್ಯನಿರ್ವಹಿಸುತ್ತಿದ್ದ ಶಿಫ್ಟ್‌ನಲ್ಲೇ ಹೆಚ್ಚಿನ ರೋಗಿಗಳು ಸಾವನ್ನಪ್ಪುತ್ತಿದ್ದರು. ಒಮ್ಮೆ ಇನ್ನೊಬ್ಬ ನರ್ಸ್ ಈ ಬಗ್ಗೆ ಅನುಮಾನ ಬಂದು ತಪಾಸಣೆ ನಡೆಸಿದ ವೇಳೆ ಈ ದುಷ್ಕೃತ್ಯ ಬಯಲಾಗಿತ್ತು.

ಬಳಿಕ ಇತರ ಪ್ರಕರಣಗಳು ಬೆಳಕಿಗೆ ಬಂದಿವೆ. ನೀಲ್ಸ್ ಗೆ ವಿಚಿತ್ರ ಖಯಾಲಿ ಇತ್ತು. ಕೆಲವೊಮ್ಮೆ ಬೇಜಾರಾಯಿತೆಂದು ರೋಗಿಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಔಷಧ ಕೊಡುತ್ತಿದ್ದ.

ಇನ್ನೊಮ್ಮೆ ಹೀಗೆ ಮಾಡಬಾರದು ಎಂದು ಅಂದುಕೊಳ್ಳುತ್ತಿದ್ದನಂತೆ. ಆದರೆ ಕೆಲ ದಿನಗಳ ಬಳಿಕ ಅದೇ ಮನಸ್ಥಿತಿಗೆ ಮರಳುತ್ತಿದ್ದನಂತೆ. ಈ ವಿಷಯವನ್ನು ಆತನೇ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಸದ್ಯ 2 ಹತ್ಯೆ ಪ್ರಕರಣಗಳಲ್ಲಿ ನೀಲ್ಸ್‌ಗೆ ಜೀವಾವಧಿ ಶಿಕ್ಷೆಯಾಗಿದೆ.

(ಸಾಂದರ್ಭಿಕ ಚಿತ್ರ)

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿಗೆ ಸಮಾಧಿ ತೋಡುತ್ತೇವೆ: ಕಾಂಗ್ರೆಸ್ ವೋಟ್ ಚೋರಿ ಸಮಾವೇಶದಲ್ಲಿ ಕಾರ್ಯಕರ್ತರ ಘೋಷಣೆ
'ಇದಪ್ಪಾ ಕಾನ್ಪಿಡೆನ್ಸ್‌ ಅಂದ್ರೆ..' ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬರೋ ಮುನ್ನವೇ 12 ಸಾವಿರ ಲಡ್ಡು ಮಾಡಿಸಿಟ್ಟ ಸ್ಪರ್ಧಿ!