
ನವದೆಹಲಿ(ಜ.01): ರಾಷ್ಟ್ರೀಯ ಭದ್ರತಾ ದಳ(ಎನ್'ಎಸ್'ಜಿ)ದ ವೆಬ್‌ಸೈಟ್'ಗೆ ಪಾಕಿಸ್ತಾನ ಮೂಲದ ‘ಅಲೋನ್ ಇಂಜೆಕ್ಟರ್’ ಎಂಬ ಹ್ಯಾಕರ್ ಗುಂಪು ಕನ್ನಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ ಸಂದೇಶವನ್ನು ಹ್ಯಾಕರ್ ಗುಂಪು ವೆಬ್'ಸೈಟ್'ನಲ್ಲಿ ಪ್ರಕಟಿಸಿದೆ. ವೆಬ್‌ಸೈಟ್'ನ ಹೋಮ್ ಪೇಜ್‌ನಲ್ಲಿ ‘ಕಾಶ್ಮೀರ ಮುಕ್ತಗೊಳಿಸಿ’ ಎಂಬ ಸಂದೇಶದೊಂದಿಗೆ, ನಾಗರಿಕರಿಗೆ ಭದ್ರತಾ ಸಿಬ್ಬಂದಿ ಥಳಿಸುವ ಫೋಟೋವನ್ನೂ ಪ್ರಕಟಿಸಲಾಗಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಪಾಕ್ ಪರ ಘೋಷಣೆಗಳನ್ನು ಪ್ರಕಟಿಸಲಾಗಿರುವುದರಿಂದ, ಹ್ಯಾಕರ್ ಗುಂಪು ಆ ದೇಶದವರೇ ಇರಬಹುದೇನೋ ಎಂದು ಶಂಕಿಸಲಾಗಿದೆ. ವೆಬ್‌ಸೈಟ್ ಹ್ಯಾಕ್ ಆಗಿರುವುದು ಗೊತ್ತಾದ ತಕ್ಷಣವೇ ವೆಬ್‌ಸೈಟ್ ಅನ್ನು ಆಫ್'ಲೈನ್'ಗೊಳಿಸಲಾಯಿತು. ಆಶ್ಚರ್ಯವೆಂದರೆ, ಹ್ಯಾಕರ್ ಸಂಪೂರ್ಣ ವೆಬ್‌ಸೈಟ್'ಗೆ ಕನ್ನ ಹಾಕಿಲ್ಲ. ಮುಖ್ಯಪುಟದಲ್ಲಿ ಮಾತ್ರ ತಮ್ಮ ಸಂದೇಶ ಪ್ರಕಟಿಸಿರುವ ಹ್ಯಾಕರ್'ಗಳು ಉಳಿದ ಪುಟಗಳಲ್ಲಿ ಯಾವುದೇ ಹಾನಿ ಎಸಗಿಲ್ಲ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್‌ನಲ್ಲಿ ಕಾಂಗ್ರೆಸ್ ನಾಯಕರು, ಕೆಲವು ಪ್ರಮುಖ ಪತ್ರಕರ್ತರ ಖಾತೆಗಳನ್ನು ಲೀಜಿಯನ್ ಗುಂಪು ಹ್ಯಾಕ್ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.