ಬಿಗ್ ಬಜಾರ್'ನಲ್ಲೂ ಹಣ ವಿತ್ ಡ್ರಾ'ಗೆ ಅವಕಾಶ

By Suvarna Web DeskFirst Published Nov 22, 2016, 10:05 AM IST
Highlights

ಕೇಂದ್ರ ಸರ್ಕಾರ ಬಿಗ್ ಬಜಾರ್ ಹಾಗೂ ಫ್ಯಾಶನ್ ಹಬ್'ಗಳಲ್ಲಿ ಪ್ರತಿ ವ್ಯಕ್ತಿಗೆ ಬ್ಯಾಂಕ್ ನಿಯಮಗಳ ರೀತಿಯಲ್ಲಿಯೇ ಜಾರಿಗೊಳಿಸಲು ಮುಂದಾಗಿದೆ 

ನವದೆಹಲಿ(ನ.22):  ಇತ್ತೀಚಿಗಷ್ಟೆ ಆಯ್ದ ಪೆಟ್ರೋಲ್ ಬಂಕ್'ಗಳಲ್ಲಿ  2 ಸಾವಿರ  ರೂ.ಗಳನ್ನು  ವಿತ್ ಡ್ರಾ ಮಾಡಿಕೊಳ್ಳುವ ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರ ಬಿಗ್ ಬಜಾರ್ ಹಾಗೂ ಫ್ಯಾಶನ್ ಹಬ್'ಗಳಲ್ಲಿ ಪ್ರತಿ ವ್ಯಕ್ತಿಗೆ ಬ್ಯಾಂಕ್ ನಿಯಮಗಳ ರೀತಿಯಲ್ಲಿಯೇ  2 ಸಾವಿರ ರೂ. ಹಣ ಪಡೆದುಕೊಳ್ಳುವ ಅವಕಾಶ ಕಲ್ಪಿಸಲು ಮುಂದಾಗಿದೆ.

ಇಲ್ಲಿ ನೇರ ಹಣ ವರ್ಗಾವಣೆಗೆ ಅವಕಾಶವಿಲ್ಲ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ವಿತ್'ಡ್ರಾ ಮಾಡಿಕೊಳ್ಳಬಹುದು.ಈ ಯೋಜನೆ ನ.24 ರಂದು ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

click me!