
ಪ್ರಧಾನಿ ಮೋದಿಯವರ ರೇಡಿಯೊ ಕಾರ್ಯಕ್ರಮ ‘ಮನ್ ಕೀ ಬಾತ್ (ಮನದ ಮಾತು)’ಗೆ ಅಣಕವಾಗಿ, ‘ಮನೀ ಕೀ ಬಾತ್ (ಹಣದ ಮಾತು)’ ಎಂಬ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ಕಾಂಗ್ರೆಸ್ ನಿರ್ಧರಿಸಿದೆ. ನ. 20ರಿಂದ ಈ ಕಾರ್ಯಕ್ರಮ ಆರಂಭಿಸಲು ಅದು ಚಿಂತಿಸಿದೆ. ಮುಂಬೈ ನಗರ ಘಟಕದ ಅಧ್ಯಕ್ಷ ಸಂಜಯ್ ನಿರುಪಮ್ ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ದುಬಾರಿ ರಾಜಕೀಯ ಪ್ರಹಸನ: ಇನ್ನೊಂದೆಡೆಯಲ್ಲಿ ಮೋದಿಯವರ ನೋಟು ರದ್ದತಿ ಆದೇಶದ ಬಗ್ಗೆ ಪ್ರಸ್ತಾಪಿಸಿರುವ ಚೀನಾದ ಮಾಧ್ಯಮವೊಂದು, ಇದರ ಹಿಂದಿನ ಉದ್ದೇಶ ಈಡೇರದಿದ್ದಲ್ಲಿ ಇದೊಂದು ‘ದುಬಾರಿ ರಾಜಕೀಯ ಪ್ರಹಸನ’ವಾಗಲಿದೆ ಎಂದು ವ್ಯಂಗ್ಯವಾಡಿದೆ. ಅಲ್ಲದೆ ಇದು ‘ಅಸಹ್ಯ ಪಕ್ಷಪಾತದ ಸಂಚು’ ಆಗಿ ಪರಿಣಮಿಸಲಿದೆ ಎಂದೂ ಅಲ್ಲಿನ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ಅಭಿಪ್ರಾಯ ಪಟ್ಟಿದೆ.
ಕಳ್ಳರಿಗೂ ಹಳೆ ನೋಟು ಬೇಡ: ನೋಟು ರದ್ದತಿಯಿಂದಾಗಿ ಮಹಾರಾಷ್ಟ್ರದಲ್ಲಿ ಕಳ್ಳರಿಗೂ ಹಳೆ ನೋಟುಗಳು ಬೇಕಾಗಿಲ್ಲ ಎಂಬುದು ವಿವಿಧ ಘಟನೆಗಳಿಂದ ಗೊತ್ತಾಗಿದೆ. ಧುಲೆ ಮತ್ತು ನಾಸಿಕ್ ಜಿಲ್ಲೆಯಲ್ಲಿ ನಡೆದ ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಸುಲಿಗೆಕೋರರು, 500 ಮತ್ತು 1,000 ನೋಟುಗಳ ಕಂತೆಗಳನ್ನು ಮುಟ್ಟಿಯೂ ನೋಡಿಲ್ಲ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.