ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಯ್ತು ರಂಭಾಪುರಿ ಶ್ರೀಗಳ ಸ್ಕೂಲ್ ಸರ್ಟಿಫಿಕೇಟ್!

By Suvarna Web DeskFirst Published Aug 2, 2017, 5:51 PM IST
Highlights

ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ವೀರಶೈವ ಲಿಂಗಾಯತ ಚರ್ಚೆಯ ಈ ಹಂತದಲ್ಲಿ, ವೀರಶೈವರ ವಿಷಯವಾಗಿ ಪ್ರಬಲ ವಾದ ಮಂಡಿಸುತ್ತಿರುವ ರಂಭಾಪುರಿ ಶ್ರೀಗಳ ಶಾಲಾ ದಾಖಲಾತಿಗಳಲ್ಲಿಯೇ ಹಿಂದು ಲಿಂಗಾಯತ ಎಂದು ಉಲ್ಲೇಖಿಸಲಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

 ಬೆಂಗಳೂರು/ ಗದಗ (ಆ.02): ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ವೀರಶೈವ ಲಿಂಗಾಯತ ಚರ್ಚೆಯ ಈ ಹಂತದಲ್ಲಿ, ವೀರಶೈವರ ವಿಷಯವಾಗಿ ಪ್ರಬಲ ವಾದ ಮಂಡಿಸುತ್ತಿರುವ ರಂಭಾಪುರಿ ಶ್ರೀಗಳ ಶಾಲಾ ದಾಖಲಾತಿಗಳಲ್ಲಿಯೇ ಹಿಂದು ಲಿಂಗಾಯತ ಎಂದು ಉಲ್ಲೇಖಿಸಲಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ಈ ಕುರಿತು ಒಂದು ದಾಖಲೆಯನ್ನು ಹಾಕಲಾಗಿದ್ದು, ರಂಭಾಪುರಿ ಶ್ರೀಗಳು ತಾವು ವೀರಶೈವರೆಂದು ಹೇಳುತ್ತಿದ್ದಾರೆ. ಆದರೆ, ಅವರ ಪ್ರೌಢಶಾಲೆಯ ದಾಖಲಾತಿಗಳಲ್ಲಿ ಏನಿದೆ ನೋಡಿ ಅರ್ಥ ಮಾಡಿಕೊಳ್ಳಿ ಎಂದು ದಾಖಲೆ ಹಾಕಿರುವವರು ಉಲ್ಲೇಖಿಸಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ದಾಖಲೆಯಲ್ಲಿ ಗದಗ ನಗರದಲ್ಲಿರುವ ಸಿ.ಎಸ್. ಪಾಟೀಲ ಪ್ರೌಢಶಾಲೆಯ ದಾಖಲಾತಿ ಕುರಿತು ಪತ್ರವಿದೆ. ಅದರಲ್ಲಿ ಜಿ.ಆರ್. ನಂ ೪೫೨೯, ವಿದ್ಯಾರ್ಥಿಯ ಹೆಸರು ಹಿರೇಮಠ ಶಿವಮೂರ್ತಯ್ಯ ಚೆನ್ನಬಸಯ್ಯ, ಕಲಿತಿರುವ ವರ್ಷ ೧೯೭೨-೭೩, ಜನ್ಮ ದಿನಾಂಕ ೧-೪-೧೯೫೬, ಧರ್ಮ ಮತ್ತು ಜಾತಿ ಎನ್ನುವಲ್ಲಿ ‘ಹಿಂದು ಲಿಂಗಾಯತ’ ಎಂದು ಉಲ್ಲೇಖಿಸಿದ್ದು, ಇದೇ ತಿಂಗಳ ೨೪ರಂದು ಪ್ರಮಾಣಪತ್ರ ನೀಡಿರುವ ಬಗ್ಗೆ ಮುಖ್ಯೋಪಾಧ್ಯಾಯರ ಸಹಿಯೂ ಇದೆ. ಜನ್ಮ ದಿನಾಂಕ ಮತ್ತು ಹೆಸರಿನ ವಿವರ ಶ್ರೀಗಳಿಗೆ ಹೋಲುವಂತಿದೆ.

ಆದರೆ, ಇದೇ ತಿಂಗಳ ೨೪ರಂದು ಈ ಪ್ರಮಾಣಪತ್ರ ಪಡೆದುಕೊಂಡವರು ಯಾರು? ಮುಖ್ಯೋಪಾಧ್ಯಾಯರು ಯಾರಿಗೆ ಇದನ್ನು ನೀಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಮೇಲಾಗಿ ವಿದ್ಯಾರ್ಥಿ ದೆಸೆಯಲ್ಲಿ ಶ್ರೀಗಳ ಪಾಲಕರು ಹಿಂದು ಲಿಂಗಾಯತ ಎಂದು ಕಾಣಿಸಿದ್ದರೆ ಅದರಲ್ಲಿ ಅವರ ತಪ್ಪೇನಿದೆ ಎಂಬ ಮಾತೂ ಕೇಳಿಬಂದಿದೆ.

click me!