
ಬೆಂಗಳೂರು(ಅ.19): #ಮೀ ಟೂ ಅಭಿಯಾನ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ರಾಜಕಾರಣಿಗಳು, ಸಿನಿಮಾ ನಟರು, ಉದ್ಯಮಿಗಳ ಲೈಂಗಿಕ ದೌರ್ಜನ್ಯದ ವಿರುದ್ಧ ದೊಡ್ಡ ಅಭಿಯಾನವೇ ನಡೆದಿದೆ.
ಅದರಂತೆ ಇಡೀ ರಾಜ್ಯವೇ ಬೆಚ್ಚಿ ಬೀಳುವಂತ #ಮೀ ಟೂ ಆರೋಪ ಕೇಳಿ ಬಂದಿದ್ದು, ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಸದಾನಂದಗೌಡ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.
ಬಾಗಲಕೋಟೆ ಮೂಲದ ಮಾಧುರಿ ಮುಧೋಳ್ ಎಂಬ ಮಹಿಳೆ ಸದಾನಂದ ಗೌಡ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿದ್ದಾಗ ಸದಾನಂದಗೌಡರು ತಮಗೆ ಪದೇ ಪದೇ ಕರೆ ಮಾಡಿ ತೊಂದರೆ ಕೊಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸದಾನಂದಗೌಡರು ಪದೇ ಪದೇ ಕರೆ ಮಾಡಿ ವೈಯಕ್ತಿಕ ಮಾಹಿತಿ, ಬಯೋಡೆಟಾ ಕೊಡುವಂತೆ ಸತಾಯಿಸುತ್ತಿದ್ದರು ಎಂದು ಮಾಧುರಿ ಮುಧೋಳ್ ಎಂಬ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಮತ್ತೋರ್ವ ಬಿಜೆಪಿ ನಾಯಕ, ಮಾಜಿ ಸಚಿವ ಶಿವಾನಂದ್ ನಾಯಕ್ ಅವರ ಮೇಲೂ ಇಂತದ್ದೇ ಆರೋಪವನ್ನು ಮಾಧುರಿ ಮುಧೋಳ್ ಫೇಸ್‌ಬುಕ್ ಮೂಲಕ ಆರೋಪ ಮಾಡಿದ್ದಾರೆ.
ತಮ್ಮ ಖಾಸಗಿ ನಂಬರ್ ಗೆ ಕರೆ ಮಾಡಿ ಪದೇ ಪದೇ ಕಚೇರಿಗೆ ಬರುವಂತೆ ಸದಾನಂದ ಗೌಡರು ಒತ್ತಾಯಿಸುತ್ತಿದ್ದರು ಎಂದು ಮಾಧುರಿ ಮುಧೋಳ್ ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಸದಾನಂದ ಗೌಡರು, ಇಂತಹ ನೀಚ ಕೃತ್ಯವನ್ನು ನನ್ನಿಂದ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆದರೆ ಮಾಧ್ಯಮಗಳಲ್ಲಿ ಈ ಕುರಿತು ಚರ್ಚೆ ನಡೆಯುತ್ತಿರುವ ಕುರಿತು ಸ್ಪಷ್ಟನೆ ನೀಡಿರುವ ಮಾಧುರಿ ಮುಧೋಳ್, ತಾವು ಯಾವ ಮಾಧ್ಯಮದ ಜೊತೆಯೂ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ತಾವು ಈ ಕುರಿತು ಏನು ಹೇಳಬೇಕೊ ಅದನ್ನು ಫೇಸ್‌ಬುಕ್‌ನಲ್ಲಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಕೆಲವು ಮಾಧ್ಯಮಗಳು ತಾನು ಹೇಳಬೇಕೊ ಎಂದುಕೊಂಡಿದ್ದೇನೋ ಅದರ ತದ್ವಿರುದ್ಧವಾಗಿ ವರದಿ ಮಾಡಿ ತಮ್ಮ ತೇಜೋವಧೆ ಮಾಡುತ್ತಿವೆ ಎಂದು ಮಾಧುರಿ ಆರೋಪಿಸಿದ್ದಾರೆ. ಅಲ್ಲದೇ ಮಾಧ್ಯಮಗಳ ಸಣ್ಣತನಕ್ಕೆ ರೋಸಿ ಹೋಗಿ ತಮ್ಮ ಈ ಮೊದಲಿನ ಪೋಸ್ಟ್‌ನ್ನು ಡೀಲಿಟ್ ಮಾಡಿದ್ದೇನೆಂದೂ ಮಾಧುರಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.