ಸ್ವಚ್ಛ ಭಾರತದಂತೆ ಸ್ವಚ್ಛ ಚೀನಾಗೆ ಕ್ಸಿ ಕರೆ

Published : Nov 30, 2017, 07:23 AM ISTUpdated : Apr 11, 2018, 12:48 PM IST
ಸ್ವಚ್ಛ ಭಾರತದಂತೆ  ಸ್ವಚ್ಛ ಚೀನಾಗೆ ಕ್ಸಿ ಕರೆ

ಸಾರಾಂಶ

ಶೌಚಾಲಯ ಎಂಬುದು ಸಣ್ಣ ವಿಷಯವಲ್ಲ. ನಾಗರಿಕವಾದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ಅದು ವಹಿಸುತ್ತದೆ ಎಂದು ಚೀನಾ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಬೀಜಿಂಗ್(ನ.30):  ದೇಶದ ಪ್ರತಿ ಮನೆಗೂ ಶೌಚಾಲಯ ಕಟ್ಟಿಸಿಕೊಡಲು ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ‘ಸ್ವಚ್ಛ ಭಾರತ  ಅಭಿಯಾನ’ ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮನಗೆದ್ದಿರುವಂತಿದೆ. ಚೀನಾದ ಗ್ರಾಮೀಣ ಭಾಗಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ಸುಧಾರಣೆಗೆ ಕ್ಸಿ ಅವರು ಕರೆ ಕೊಟ್ಟಿದ್ದಾರೆ.

ಶೌಚಾಲಯ ಎಂಬುದು ಸಣ್ಣ ವಿಷಯವಲ್ಲ. ನಾಗರಿಕವಾದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ಅದು ವಹಿಸುತ್ತದೆ ಎಂದು ಚೀನಾ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ಶೌಚಾಲಯಗಳು ಇಲ್ಲ. ಜೋಳದ ಕಂತೆಗಳನ್ನು ಸುತ್ತ ಇಟ್ಟುಕೊಂಡು ನಿತ್ಯ ಕರ್ಮವನ್ನು ಜನರು ಮುಗಿಸುತ್ತಾರೆ. ಜತೆಗೆ ಹಂದಿ ಸಾಗಣೆ ಕೊಠಡಿಗಳ ಬಳಿ ತೆರೆದ ಶೌಚಾಲಯ ನಿರ್ಮಿಸಿಕೊಂಡು ಅದನ್ನು ಬಳಸುತ್ತಿದ್ದಾರೆ.

ಹೀಗಾಗಿ ಇಂತಹ ತಾತ್ಕಾಲಿಕ ಶೌಚಾಲಯಗಳನ್ನು ಮೇಲ್ದರ್ಜೆ ಗೇರಿಸಲು ಶೌಚಾಲಯ ಕ್ರಾಂತಿಗೆ ಜಿನ್‌ಪಿಂಗ್ ಅವರು ಕರೆ ನೀಡಿದ್ದಾರೆ. ಚೀನಾಕ್ಕೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಶೌಚಾಲಯ, ನೈರ್ಮಲ್ಯ, ಬಗ್ಗೆ ದೂರುಗಳನ್ನು ನೀಡಿದ್ದರು. ಹೀಗಾಗಿ 2015ರಲ್ಲಿ ಮೊದಲ ಬಾರಿಗೆ ಶೌಚಾಲಯ ಕ್ರಾಂತಿಯನ್ನು ಚೀನಾ ಆರಂಭಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ