ವೃದ್ಧ ದಂಪತಿ ಹತ್ಯೆ ಪ್ರಕರಣದಲ್ಲಿ ಮೊಮ್ಮಗನೇ ಹಂತಕ

Published : Nov 29, 2017, 10:07 PM ISTUpdated : Apr 11, 2018, 01:10 PM IST
ವೃದ್ಧ ದಂಪತಿ ಹತ್ಯೆ ಪ್ರಕರಣದಲ್ಲಿ ಮೊಮ್ಮಗನೇ ಹಂತಕ

ಸಾರಾಂಶ

ಮೋಜು ಮಸ್ತಿ ಮಾಡಲು ಹಣಕ್ಕಾಗಿ ಸ್ವಂತ ಅಜ್ಜಿ- ಅಜ್ಜರನ್ನೇ ಹತ್ಯೆ ಮಾಡಿದ ಮೊಮ್ಮಗನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ನ.29): ಮೋಜು ಮಸ್ತಿ ಮಾಡಲು ಹಣಕ್ಕಾಗಿ ಸ್ವಂತ ಅಜ್ಜಿ- ಅಜ್ಜರನ್ನೇ ಹತ್ಯೆ ಮಾಡಿದ ಮೊಮ್ಮಗನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಎಚ್​ಎಎಲ್​ ಬಳಿ ಅಶ್ವಥನಗರಲ್ಲಿ ನಿನ್ನೆ ಬೆಳಕಿಗೆ ಬಂದಿದ್ದ ವೃದ್ಧ ದಂಪತಿ ಕೊಲೆಯನ್ನು ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿ ಮೃತರ ಮೊಮ್ಮಗ. ಮೃತ ಗೋವಿಂದನ್​, ಸರೋಜಾ ಅವರ ಮೊಮ್ಮಗ ಪ್ರಮೋದ್​, ಆತನ ಸ್ನೇಹಿತರಾದ ಪ್ರವೀಣ್​, ಹಸನ್​ ಬಾಷಾ ಸೇರಿ ಕೊಲೆ ಮಾಡಿದ್ದಾರೆ. ಭಾನುವಾರ ಮಧ್ಯಾಹ್ಮ ಪ್ರಮೋದ ಅಜ್ಜಿ  ದೊಣ್ಣೆಯಿಂದ ಹಲ್ಲೆಗೈದು, ತಾತನನ್ನು ಕೊಲೆ ಮಾಡಿದ್ದ. ನಂತರ  ಪ್ರಕರಣದಿಂದ ಬಚಾವಾಗಲೂ ಗ್ಯಾಸ್​ ಸಿಲಿಂಡರ್​ ಲೀಕ್​ ಮಾಡಿ, ಮನೆಯನ್ನು  ಬೆಂಕಿಗಾಹುತಿ ಮಾಡಲು ಪ್ಲಾನ್​ ಮಾಡಿದ್ದರು. ಆದರೆ ಆರೋಪಿಗಳ ಪ್ಲಾನ್​ ಉಲ್ಟಾ ಹೊಡೆದಿದ್ದು, ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಂದು ಮಧ್ಯಾಹ್ನ ಯಮಲೂರು ಸಮೀಪ ಹಸನ್​ ಬಾಷಾ ಬಂಧಿಸುವಾಗ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದು, ಆತ್ಮರಕ್ಷಣೆಗೆ ಪಿಎಸ್​ಐ ಪ್ರಶೀಲಾ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.  ಘಟನೆ ವೇಳೆ ಪೇದೆ ರವಿಗೆ ಗಾಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ