ಈ ಹಳ್ಳಿಗೆ ನೋಟ್ ಬ್ಯಾನ್ ಟೆನ್ಷನ್ ಇಲ್ಲ,ನೋಟ್ ಅಂದ್ರೆ ಇವರಿಗೆ ಅಲರ್ಜಿ!

Published : Nov 25, 2016, 04:41 PM ISTUpdated : Apr 11, 2018, 12:38 PM IST
ಈ ಹಳ್ಳಿಗೆ ನೋಟ್ ಬ್ಯಾನ್ ಟೆನ್ಷನ್ ಇಲ್ಲ,ನೋಟ್ ಅಂದ್ರೆ ಇವರಿಗೆ ಅಲರ್ಜಿ!

ಸಾರಾಂಶ

ಯಾಕೆ ಗೊತ್ತಾ? ಅಷ್ಟಕ್ಕೂ ಆ ಹಳ್ಳಿ ಜನರಿಗೆ ನೋಟ್​​ಗಳು ಅಂದ್ರೇನೇ ಅಲರ್ಜಿ, ಅವ್ರು ನೋಟ್​ಗಳನ್ನ ಕೈನಲ್ಲಿ ಹಿಡ್ಕೊಂಡು ನೋಡಿದ್ದೇ ತುಂಬಾ ಅಪರೂಪ. ಹಾಗಿದ್ರೆ ಅವ್ರು ತಮ್ಮ ವ್ಯವಹಾರ ಹೇಗ್ ಮಾಡ್ತಾರೆ? ಬರೀ 1000, 500 ರೂಪಾಯಿಗಳ ನೋಟ್​ ಬ್ಯಾನ್​ ಮಾಡಿದ್ದಕ್ಕೇ, ದೇಶದ ಜನ ತತ್ತರಿಸಿದ್ದಾರೆ. ಹೀಗಿರುವಾಗ, ನೋಟ್​ಗಳೇ ಇಲ್ಲದೇ ಆ ಹಳ್ಳಿ ಜನ ಹೇಗೆ ಬದುಕು ನಡೆಸ್ತಿದ್ದಾರೆ ಗೊತ್ತಾ? ಕರೆನ್ಸಿ ಇಲ್ಲದ ಕುಗ್ರಾಮದ ಕಥೆಯೇ ಇದು.

ನೋಟ್​ಬ್ಯಾನ್​ ಬಿಸಿಗೆ ಇಡೀ ದೇಶವೇ ತತ್ತರಿಸಿದೆ. ನಗರ ಮತ್ತು ಹಳ್ಳಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆದ್ರೆ ಒಂದೇ ಒಂದು ದೇಶಕ್ಕೆ ಮಾತ್ರ ನೋಟ್​ಬ್ಯಾನ್​ ಬಿಸಿ ತಟ್ಟೇ ಇಲ್ಲ. ಹೌದು ನಾವು ಹೇಳ್ತಾ ಇರೋದು ನಿಜ.. ನಮ್ಮ ದೇಶದಲ್ಲಿ ಒಟ್ಟು 6 ವರೆ ಲಕ್ಷ ಹಳ್ಳಿಗಳಿವೆ. ಬಹುತೇಕ ಹಳ್ಳಿ ಜನಕ್ಕೆ ನೋಟ್​ ಬ್ಯಾನ್​​ನಿಂದ ಸಮಸ್ಯೆ ಆಗ್ತಾ ಇದೆ. ನಗರ ಪ್ರದೇಶದಲ್ಲಿರೋ ಜನರೂ, ನೋಟ್​ಬ್ಯಾನ್​ನಿಂದ ಕಂಗಾಲಾಗಿದ್ದಾರೆ. ಆದ್ರೆ, ಆ ಒಂದು ಹಳ್ಳಿಯಲ್ಲಿರೋ ಜನರಿಗೆ ಮಾತ್ರ, ಯಾವ ಸಮಸ್ಯೇನೂ ಆಗಿಲ್ಲ.

ಯಾಕೆ ಗೊತ್ತಾ? ಅಷ್ಟಕ್ಕೂ ಆ ಹಳ್ಳಿ ಜನರಿಗೆ ನೋಟ್​​ಗಳು ಅಂದ್ರೇನೇ ಅಲರ್ಜಿ, ಅವ್ರು ನೋಟ್​ಗಳನ್ನ ಕೈನಲ್ಲಿ ಹಿಡ್ಕೊಂಡು ನೋಡಿದ್ದೇ ತುಂಬಾ ಅಪರೂಪ. ಹಾಗಿದ್ರೆ ಅವ್ರು ತಮ್ಮ ವ್ಯವಹಾರ ಹೇಗ್ ಮಾಡ್ತಾರೆ? ಬರೀ 1000, 500 ರೂಪಾಯಿಗಳ ನೋಟ್​ ಬ್ಯಾನ್​ ಮಾಡಿದ್ದಕ್ಕೇ, ದೇಶದ ಜನ ತತ್ತರಿಸಿದ್ದಾರೆ. ಹೀಗಿರುವಾಗ, ನೋಟ್​ಗಳೇ ಇಲ್ಲದೇ ಆ ಹಳ್ಳಿ ಜನ ಹೇಗೆ ಬದುಕು ನಡೆಸ್ತಿದ್ದಾರೆ ಗೊತ್ತಾ? ಕರೆನ್ಸಿ ಇಲ್ಲದ ಕುಗ್ರಾಮದ ಕಥೆಯೇ ಇದು.

ಇನ್​ಕ್ರೆಡಿಬಲ್​ ಇಂಡಿಯಾ.ವಿವಿಧತೆಯಲ್ಲಿ  ಏಕತೆಯನ್ನು ಹೊಂದಿರೋ ದೇಶ ನಮ್ಮದು. ವಿವಿಧ ಸಂಸ್ಲೃತಿ, ವಿವಿಧ ಮತಭೇದಗಳ ನಡುವಲ್ಲಿ, ಸುಂದರವಾಗಿ ಅರಳಿ ನಿಂತಿರೋ ಜಗತ್ತಿನ ಪ್ರಭಾವಶಾಲಿ ದೇಶ, ನಮ್ಮ ಭಾರತ.

ಕಪ್ಪು ಹಣ ತಡೆಗಾಗಿ ಈ ಕ್ರಮ

ಅದು ನವೆಂಬರ್​ 8ನೇ ತಾರೀಕು. ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತುಗಳು, ಇಡೀ ದೇಶವನ್ನೇ ಅಲುಗಾಡಿಸಿತ್ತು. ನವೆಂಬರ್​ 8 ನೇ ತಾರೀಕು ಮಧ್ಯರಾತ್ರಿ 12 ಗಂಟೆಯಿಂದ 1000 ಮತ್ತು 500 ರೂಪಾಯಿ ನೋಟ್​ಗಳನ್ನ ಬ್ಯಾನ್ ಮಾಡಿದ್ರು ಮೋದಿ. ಯಾವಾಗ ಮೋದಿ ಈ ಮಹತ್ವ ಪೂರ್ಣ ನಿರ್ಧಾರವನ್ನ ಕೈಗೊಂಡ್ರೋ, ಹಳೆ ನೋಟ್​ಗಳನ್ನ ಎಕ್ಸ್​ಚೈಂಚ್​ ಮಾಡೋದಕ್ಕೆ ಇಡೀ ದೇಶದ ಜನರೆಲ್ಲಾ ಬ್ಯಾಂಕ್​ ಮುಂದೆ ಸಾಲುಗಟ್ಟಿ ನಿಂತುಬಿಟ್ರು.

ದೇಶವೇ ತತ್ತರಿಸಿತು

ಭಾರತದಲ್ಲಿ ಒಟ್ಟು 29 ರಾಜ್ಯಗಳಿವೆ. 687 ಜಿಲ್ಲೆಗಳಿವೆ. ಸಾವಿರಾರು ನಗರ ಪ್ರದೇಶಗಳಿವೆ. 6 ಲಕ್ಷದ 49 ಸಾವಿರದ 481 ಹಳ್ಳಿಗಳಿವೆ. ಬಹುತೇಕ ಎಲ್ಲಾ ರಾಜ್ಯಗಳ ನಗರಗಳು ಮತ್ತು ಬಹುತೇಕ ಎಲ್ಲಾ ಹಳ್ಳಿ ಜನರೂ, ನೋಟ್​ಬ್ಯಾನ್​ ಬಿಸಿಯಿಂದ ತತ್ತರಿಸಿ ಹೋಗಿದ್ರು. ತಮ್ಮ ಬಳಿ ಇರೋ ಹಣದ ಮೌಲ್ಯ ಎಲ್ಲಿ ಕಳೆದು ಹೋಗುತ್ತೋ ಅನ್ನೋ ಆತುರಕ್ಕೆ ಬಿದ್ದು, ನೋಟ್​ ಬದಲಾಯಿಸಿಕೊಳ್ಳೋದಕ್ಕಾಗಿ, ಸರತಿ ಸಾಲಿನಲ್ಲಿ ನಿಂತು ನೋಟ್​ ಬದಲಾಯಿಸಿಕೊಳ್ಳಲು ಹರಸಾಹಸ ಪಡ್ತಿದ್ರು.

 

ಒಬ್ರಲ್ಲ ಇಬ್ರಲ್ಲ. ಕೋಟಿ ಕೋಟಿ ಮಂದಿ, ಬೆಳಗಾಗೆದ್ದು ಬ್ಯಾಂಕ್​ ಮುಂದೆ ಬಂದು ನಿಲ್ಲೋದೇ ಕೆಲಸವಾಗಿತ್ತು. ನೋಟ್​ ಇಲ್ಲದೇ ಪರದಾಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಹೀಗೆ ಇಡೀ ದೇಶವೇ ನೋಟ್​ಬ್ಯಾನ್​ ಬಿಸಿಯಿಂದ ತತ್ತರಿಸಿರಬೇಕಾದ್ರೇ, ಒಂದೇ ಒಂದು ಹಳ್ಳಿ ಮಾತ್ರ ಕೂಲಾಗಿತ್ತು. ಯಾಕಂದ್ರೆ ನೋಟ್​ ಬ್ಯಾನ್​ ಬಿಸಿನೇ ಈ ಹಳ್ಳಿಗೆ ತಟ್ಟಿರಲಿಲ್ಲ. ಅಷ್ಟಕ್ಕೂ ಆ ಹಳ್ಳಿ ಯಾವುದು ಗೊತ್ತಾ?

ಗುಜರಾತ್'ನಲ್ಲಿದೆ  ಆ ಹಳ್ಳಿ

ಮೋದಿ ತೆಗೆದುಕೊಳ್ಳೋ ನಿರ್ಧಾರದ ಹಿಂದೆ, ದೇಶಾ ಅಭಿವೃದ್ಧಿಯ ಕನಸಿರುತ್ತೆ ಅನ್ನೋದು ಜನಸಾಮಾನ್ಯರ ನಂಬಿಕೆ. ಇದಕ್ಕೆ ಉತ್ತಮ ನಿದರ್ಶನವಾಗಿದೆ ಗುಜರಾತ್​ ರಾಜ್ಯದ ಅಕೋಡರಾ ಅನ್ನೋ ಹಳ್ಳಿ. ಈ ಹಳ್ಳಿಯಲ್ಲಿ ಒಂದು ಎಟಿಎಂ ಇದೆ. ಒಂದು ಬ್ಯಾಂಕ್​ ಕೂಡ ಇದೆ. ಆದ್ರೆ ಈ ಎಟಿಎಂ ಮತ್ತು ಬ್ಯಾಂಕ್​ಗೆ ಯಾರೂ ಹೋಗೋದಿಲ್ಲ, ಅದಕ್ಕೆ ನೋಡಿ. ದೇಶಾದ್ಯಂತ ನೋಟ್​ ಬ್ಯಾನ್​ ಬಿಸಿ ತಟ್ಟಿದ್ರೂ, ಜನ ಕಿಲೋಮೀಟರ್​ನಷ್ಟು ಉದ್ದಕ್ಕೂ ಸರತಿ ಸಾಲಿನಲ್ಲಿ ನಿಂತಿದ್ರೂ, ಈ ಹಳ್ಳಿ ಜನ ತಲೆ ಕೆಡಿಸಿಕೊಳ್ತಿಲ್ಲ. ಒಬ್ಬರೂ ಕೂಡ ಇಲ್ಲಿನ ಬ್ಯಾಂಕ್​ಗೆ ಬಂದೇ ಇಲ್ಲ. ನೋಟ್​ ಬದಲಾಯಿಸಿ ಕೊಡಿ ಅಂತ ಕೇಳೇ ಇಲ್ಲ..

ಕುಗ್ರಾಮವಾಗಿದ್ದ ಹಳ್ಳಿ ದೇಶದ ಗಮನ ಸೆಳೆಯಿತು

ಈ ಹಳ್ಳಿ ಜನ ಡಿಜಿಟಲ್ ಆಗಿದ್ದಾರೆ. ನೋಟ್​ ಇಲ್ಲದೇ ನಡೆಯುತ್ತೆ ಇವರ ವ್ಯವಹಾರ.  ಒಂದು ಕಾಲದಲ್ಲಿ ಈ ಹಳ್ಳಿ ಅತಿ ದೊಡ್ಡ ಕುಗ್ರಾಮ ಆಗಿತ್ತು. ಆದ್ರೀಗ ಈ ಹಳ್ಳಿ ಚಿತ್ರಣವೇ ಬದಲಾಗಿದೆ. ಡಿಜಿಟಲ್​ ಆಗಿದೆ. ಇಡೀ ಹಳ್ಳಿ ತುಂಬಾ ವೈಫೈ ಇದೆ. ಮೊಬೈಲ್​ ಬ್ಯಾಂಕಿಂಗ್​ ವ್ಯವಸ್ಥೆ ಇದೆ. ಇವ್ರಿಗೆ ನೋಟ್​​ ಬಗ್ಗೆ ಚಿಂತೇನೇ ಇಲ್ಲ.. ಯಾವ ನೋಟ್​ ಬಂದ್ರೂ, ಯಾವ ನೋಟ್​ಗಳು ಹೋದ್ರೂ, ಇವ್ರಿಗೆ ಸಮಸ್ಯೆ ಇಲ್ಲ.. ಯಾಕಂದ್ರೆ ಇವರದ್ದೇನಿದ್ರೂ, ಆನ್​ಲೈನ್​ ಟ್ರಾನ್ಸಾಕ್ಷನ್​. ಡಿಜಿಟಲ್ ವ್ಯವಹಾರ.

ಸ್ಕೂಲ್'ಗಳು ಡಿಜಿಟಲ್

ಬರೀ ಇಲ್ಲಿನ ವ್ಯವಹಾರ ಮಾತ್ರ ಡಿಜಿಟಲ್ ಆಗಿಲ್ಲ. ಇಲ್ಲಿನ ಸ್ಕೂಲ್​ಗಳೂ ಡಿಜಿಟಲ್ ಆಗಿವೆ. ಎಲ್ಲಾ ಸ್ಕೂಲ್​ಗಳಲ್ಲೂ ವೈಫೈ ಇಂಟರ್​ನೆಟ್​ ಕಂಪ್ಯೂಟರ್​ಗಳಿವೆ. ಅದರ ಆಧಾರದ ಮೇಲೇನೇ ಶಿಕ್ಷಣ ನಡೀತಿದೆ. ಇನ್ನು ಈ ಹಳ್ಳಿಯಲ್ಲಿ ಒಂದು ಲೈಬ್ರರಿ ಕೂಡ ಇದೆ. ಅದೂ ಡಿಜಿಟಲ್ ಆಗಿದೆ. ಇಲ್ಲಿ ಪುಸ್ತಕಗಳಿಲ್ಲ. ಬದಲಿಗೆ ಲ್ಯಾಪ್​​ಟಾಪ್​ಗಳಿವೆ. ಆ ಲ್ಯಾಪ್​ಟಾಪ್​ಗಳಿಂದಲೇ ಮಾಹಿತಿಯನ್ನು ಹುಡುಕ್ತಾರೆ.. ಜಗತ್ತನ್ನ ಓದುತ್ತಾರೆ ಇಲ್ಲಿನ ಜನ.

ಡಿಜಿಟಲ್ ಇಂಡಿಯಾ

ಇದು ಪ್ರಧಾನಿ ನರೇಂದ್ರ ಮೋದಿಯವರ ಕನಸು. ಇಡೀ ದೇಶವನ್ನ ಡಿಜಿಟಲ್ ಮಾಡ್ತೀನಿ ಅಂತ ಪಣ ತೊಟ್ಟಿರೋ ನರೇಂದ್ರ ಮೋದಿ, ನೋಟ್​ ವ್ಯವಹಾರಗಳಿಗೆ ಕಡಿವಾಣ ಹಾಕ್ತಾ, ಡಿಜಿಟಲ್​ ವ್ಯವಹಾರಗಳಿಗೆ ಮುನ್ನುಡಿ ಬರೆಯೋದಕ್ಕೆ ಪ್ಲಾನ್ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನೂ ಕೈಗೊಂಡಿದ್ದಾರೆ. ಆದ್ರೆ ಇಡೀ ದೇಶವೇ ಡಿಜಿಟಲ್ ಆಗೋದರ ನಡುವಲ್ಲೇ, ಒಂದು ಹಳ್ಳಿ ಆಲ್ರೆಡಿ ಡಿಜಿಟಲ್ ಆಗಿದೆ.

ಭಾರತ ಬಡ ದೇಶ. ಭಾರತದ ಹಳ್ಳಿಗಳು ಬಡ ಹಳ್ಳಿಗಳು.. ಹಳ್ಳಿ ಜನರ ಬದುಕು ತುಂಬಾನೇ ದುಸ್ತರ. ಅವ್ರಿಗೇ ಏನೂ ಗೊತ್ತಾಗೋದಿಲ್ಲ. ಹಳ್ಳಿ ಜನರ ಬದುಕನ್ನ ಬದಲಾಯಿಸೋದು ತುಂಬಾನೇ ಕಷ್ಟ ಅನ್ನೋ ಮಾತು, ಇಡೀ ಜಗತ್ತೇ ಹೇಳ್ತಾ ಇತ್ತು. ಸ್ವತಂತ್ರ್ಯ ಬಂದು ಇಷ್ಟು ವರ್ಷಗಳಾದ್ರೂ, ಹಳ್ಳಿಗಳ ಉದ್ಧಾರವೇ ಅಗಿರಲಿಲ್ಲ.. ಗಾಂಧೀಜಿ ಕಂಡಿದ್ದ ಗ್ರಾಮರಾಜ್ಯ ಇಷ್ಟು ದಿನ ಬಂದಿರಲೇ ಇಲ್ಲ. ಎಷ್ಟೋ ಪ್ರಧಾನಿಗಳು ಬಂದ್ರು, ಹೋದ್ರೂ, ಆದ್ರೂ ಹಳ್ಳಿ ಜನರ ಬದುಕು ಬದಲಾಗಲೇ ಇಲ್ಲ..

ಹೀಗೆ ಭಾರತದ ಹಳ್ಳಿಗಳ ಬಗ್ಗೆ ತಾತ್ಸಾರದಿಂದ ಮಾತಾಡ್ತಾ ಇದ್ದ ಜನರು, ಈಗ ಮೂಕ ವಿಸ್ಮಿತರಾಗಿದ್ದಾರೆ. ಬಡತನದ ನಡುವಲ್ಲೂ, ಅವ್ರ ಬದುಕು ನಿಧಾನವಾಗಿ ಸುಧಾರಿಸ್ತಾ ಇರೋದನ್ನ ಕಂಡು, ಅಚ್ಚರಿ ಪಡ್ತಿದ್ದಾರೆ. ಅದರಲ್ಲೂ ಇಡೀ ದೇಶಕ್ಕೇ ಅಚ್ಚರಿಯ ಸಂಕೇತವಾಗಿ ಕಾಣ್ತಾ ಇರೋದು, ಈ ಡಿಜಿಟಲ್ ವಿಲೇಜ್​, ಸಂಪೂರ್ಣವಾಗಿ ತಂತ್ರಜ್ಞಾನವನ್ನ ಅಳವಡಿಸಿಕೊಂಡು ನೋಟ್​ಲೆಸ್​​ ಆಗಿರೋ ವಿಲೇಜ್​.

ಕಡಿಮೆ ಜನ ಡಿಜಿಟಲ್ ಪಣ

ಈ ಹಳ್ಳಿಯಲ್ಲಿರೋದು ಬರೀ 1100 ಮಂದಿ ಮಾತ್ರ. ಕಡಿಮೆ ಜನ ಇದ್ರೂ, ಇಡೀ ಹಳ್ಳಿಯನ್ನೇ ಡಿಜಿಟಲ್ ಮಾಡಿದ್ದಾರೆ. ನಗರವಾಸಿಗಳೂ ಅಚ್ಚರಿ ಪಡುವಂತೆ ಹಳ್ಳಿಯ ಚಿತ್ರಣವನ್ನೇ ಬದಲಾಯಿಸಿದ್ದಾರೆ.

ಈ ಹಳ್ಳಿ ಜನ ಯಾವತ್ತೂ ನೋಟ್​ಗಳನ್ನ ಕೈನಲ್ಲಿ ಹಿಡಿದುಕೊಂಡಿದ್ದೇ ಇಲ್ಲ. 10 ರೂಪಾಯಿನಿಂದ ಹಿಡಿದು, 5 ಸಾವಿರ ರೂಪಾಯಿವರೆಗೆ. ಒಂದು ಸಣ್ಣ ಪಾನ್​ ಬೀಡಾ ಅಂಗಡಿಯಿಂದ ಹಿಡಿದು ಎಲ್ಲಾ ಅಂಗಡಿಗಳಲ್ಲೂ ಕ್ಯಾಶ್​ಲೆಸ್​ ವ್ಯವಹಾರ ನಡೆಯುತ್ತೆ.. ಮೊಬೈಲ್​ಗಳಲ್ಲೇ ಹಣದ ವಹಿವಾಟು ನಡೆಯುತ್ತೆ.

ಅಂದ್ಹಾಗೆ ಈ ಹಳ್ಳಿಯನ್ನ ದೇಶವೇ ತಿರುಗಿ ನೋಡುವಂತೆ ಮಾಡಿದ್ದು ಯಾರು ಗೊತ್ತಾ? ಇಡೀ ದೇಶವೇ ನೋಟ್​ಬ್ಯಾನ್​ನಿಂದ ತತ್ತರಿಸಿ ಹೋಗಿದ್ರೂ, ಇಲ್ಲಿನ ಜನ ಕೂಲಾಗಿ ತಮ್ಮ ಬದುಕು ನಡೆಸುವಂತಾಗಿದ್ದು ಯಾರಿಂದ ಗೊತ್ತಾ? ಪ್ರಧಾನಿ ನರೇಂದ್ರ ಮೋದಿಯವರಿಂದ..

ಪ್ರಧಾನಿಯಾಗೋದಕ್ಕಿಂತ ಮೊದಲೇ ಡಿಜಿಟಲಿಕರಣ

ಈ ಹಳ್ಳಿ ಡಿಜಿಟಲ್ ಆಗಿದೆ.ಪ್ರಧಾನಿಯಾಗೋದಕ್ಕಿಂತ ಮೊದಲೇ, ಈ ಹಳ್ಳಿಯನ್ನ ಡಿಜಿಟಲ್ ಮಾಡಿ ತೋರಿಸಿದ್ದಾರೆ ನರೇಂದ್ರ ಮೋದಿ. ಇದೇ ಡಿಜಿಟಲ್ ಅಭಿವೃದ್ಧಿ ದೇಶಾದ್ಯಂತ ಆಗಬೇಕು ಅನ್ನೋ ಕನಸನ್ನು ಹೊತ್ತು, ನಾನಾ ಯೋಜನೆಗಳನ್ನ ರೂಪಿಸ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪವರ್​ಫುಲ್​ ಯೋಜನೆಗಳನ್ನ ತರ್ತೀನಿ ಅನ್ನೋ ಸೂಚನೆಯನ್ನೂ ಕೊಟ್ಟಿದ್ದಾರೆ ಈ ದೇಶದ ಪ್ರಧಾನ ಸೇವಕ.

ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಬರಿಮಲೆ ದೇಗುಲದ ಬಂಗಾರ ಕಳವು ಪ್ರಕರಣ, ಬಳ್ಳಾರಿ ಚಿನ್ನದ ವ್ಯಾಪಾರಿ ಗೋವರ್ಧನ್ ಕೇರಳದಲ್ಲಿ ಬಂಧನ!
ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರನ ₹8 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ!