
ನೋಟ್ಬ್ಯಾನ್, ಭಾರತದ ಇತಿಹಾಸದಲ್ಲಿಯೇ ಅಂಥಾದ್ದೊಂದು ಘಟನೆ ನಡೆದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಕಳೆದ ವರ್ಷ ನವೆಂಬರ್ 8ನೇ ದಿನಾಂಕದಂದು ರಾತ್ರಿ 8 ಗಂಟೆಗೆ 500, 1000 ರೂಪಾಯಿ ನೋಟುಗಳೆಲ್ಲ ರದ್ದಿಯಾಗಲಿವೆ ಎಂದು ಘೋಷಿಸಿದಾಗ...ಭಾರತೀಯರು ಸಂಭ್ರಮದಿಂದಲೇ ಬ್ಯಾಂಕುಗಳಲ್ಲಿ ಕ್ಯೂ ನಿಂತಿದ್ದರು. ಕಪ್ಪುಕುಳಗಳು ಕಂಗಾಲಾಗಿದ್ದರು. ಆ ಐತಿಹಾಸಿಕ ದಿನಕ್ಕೆ ನಾಳೆಗೆ 1 ವರ್ಷ. ಈ ಒಂದು ವರ್ಷದಲ್ಲಿ ನೋಟ್ಬ್ಯಾನ್ ಕುರಿತ ಜನರ ನಿರ್ಧಾರ ಬದಲಾಗಿದೆಯಾ..? ಈ ಬಗ್ಗೆ ಸುವರ್ಣ ನ್ಯೂಸ್ ಸಮೀಕ್ಷೆ ಮಾಡಿದೆ. ಆ ಸಮೀಕ್ಷೆಯ ಒಂದು ಡೀಟೈಲ್ ರಿಪೋರ್ಟ್ ಇಲ್ಲಿದೆ.
ಮೇರೆ ಪ್ಯಾರ್ ದೇಶ್ವಾಸಿಯೋ.. ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಅಂದಿನ ಆ ಪುಟ್ಟ ಘೋಷಣೆ, ಭಾರತದ ಆರ್ಥಿಕತೆಯಲ್ಲಿ ಕ್ರಾಂತಿ ಎಂದರೂ ತಪ್ಪಾಗಲಿಕ್ಕಿಲ್ಲ. 500, 1000 ರೂಪಾಯಿ ನೋಟುಗಳನ್ನು ರದ್ದಿ ಮಾಡಿದ ದಿನ ಅದು.ಈ ಘೋಷಣೆಗೆ ನಾಳೆ ಒಂದು ವರ್ಷ ತುಂಬುತ್ತಿದೆ. ಆರಂಭದಲ್ಲಿ ಜನ ಇದನ್ನು ಸ್ವಾಗತಿಸಿದ್ದರು. ಎಟಿಎಂಗಳಲ್ಲಿ ಕ್ಯಾಷ್ಗಾಗಿ ಕ್ಯೂ ನಿಂತಿದ್ದರು. ಬ್ಯಾಂಕುಗಳಲ್ಲಿ ಡೆಪಾಸಿಟ್ ಮಾಡಲು ಜನ ಸಾಲುಗಟ್ಟಿದ್ದರು. ಇಷ್ಟಿದ್ದರೂ, ಕಪ್ಪುಹಣದ ವಿರುದ್ಧ ಇದು ನಿರ್ಣಾಯಕ ಸಮರ ಎಂಬ ಏಕೈಕ ಕಾರಣಕ್ಕೆ, ಅವರೆಲ್ಲ ಪ್ರಧಾನಿಗೆ ಬೆಂಬಲವಾಗಿದ್ದರು. ಹಲವು ಸಮೀಕ್ಷೆಗಳಲ್ಲಿ ಇದು ವ್ಯಕ್ತವಾಗಿತ್ತು ಕೂಡಾ.
ಇದು ಕನ್ನಡಿಗರ ತೀರ್ಪು
ಒಂದು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಸುವರ್ಣ ನ್ಯೂಸ್ ಒಂದು ಜನತಾ ಸಮೀಕ್ಷೆಯನ್ನೇ ನಡೆಸಿದೆ. ಇದು ಕನ್ನಡಿಗರ ತೀರ್ಪು. ಜನಗಳ ಮನದಲ್ಲಿ ಏನಿದೆ ಅನ್ನೋದನ್ನು ವಿವರವಾಗಿ ಸಂಗ್ರಹಿಸಿದೆ ಸುವರ್ಣ ನ್ಯೂಸ್. ಅಂದು ನೋಟ್ಬ್ಯಾನ್ನ್ನು ಸ್ವಾಗತಿಸಿದ್ದ ಕನ್ನಡಿಗರು ಈಗ ಏನಂತಾರೆ..? ಅವರ ನಿರ್ಧಾರ ಬದಲಾಗಿದೆಯಾ..? ಅವರ ನಿರೀಕ್ಷೆಗಳು ಈಡೇರಿವೆಯಾ..? ಪ್ರಧಾನಿ ಮೋದಿಯವರಲ್ಲಿ ಜನರ ವಿಶ್ವಾಸ ಈಗಲೂ ಹಾಗೆಯೇ ಇವೆಯಾ..? ಈ ಕುರಿತು 10 ಪ್ರಶ್ನೆಗಳನ್ನಿಟ್ಟುಕೊಂಡು ಜನರ ಮುಂದೆ ಹೋದೆವು.
30 ಜಿಲ್ಲೆಗಳಲ್ಲಿಯೂ ನಮ್ಮ ವರದಿಗಾರರು ಜನಗಳ ಮತ ಸಂಗ್ರಹಿಸಿದರು. ಒಟ್ಟು 3 ಸಾವಿರ ಜನಗಳಿಂದ ಜನಾಭಿಪ್ರಾಯ ಸಂಗ್ರಹಿಸಲಾಯ್ತು. ಹಾಗೆ ಸಂಗ್ರಹಿಸುವಾಗ ಗ್ರಾಮೀಣ, ನಗರ ಪ್ರದೇಶದವರು ಹಾಗೂ ಮಹಿಳೆ ಹಾಗೂ ಪುರುಷರನ್ನು ಸರಿಸಮಾನವಾಗಿ ಆಯ್ಕೆ ಮಾಡಿಕೊಳ್ಳಲಾಯ್ತು. ಅವರೆಲ್ಲರ ಒಟ್ಟು ಅಭಿಪ್ರಾಯವನ್ನು ತರಿಸಿಕೊಂಡು ಪ್ರತಿ ಸಮೀಕ್ಷೆಯ ಪ್ರತಿಯನ್ನೂ ವಿಭಜಿಸಿ ಅಂಕಿ ಅಂಶಗಳನ್ನು ಸಂಗ್ರಹಿಸಲಾಯ್ತು. 10 ಪ್ರಶ್ನೆಗಳಿಗೂ ಸಾಮಾನ್ಯ ಜನರು ಕೊಟ್ಟಿದ್ದ ವಿವರಗಳನ್ನೆಲ್ಲ ಕ್ರೋಢೀಕರಿಸಿ, ನಂತರ ಅದನ್ನು ಶೇಕಡಾವಾರು ವಿಭಜಿಸಲಾಯ್ತು.
ಇದು ಸುವರ್ಣ ನ್ಯೂಸ್ ಸಮೀಕ್ಷೆ ಮಾಡಿದ ರೀತಿ. ಸಮೀಕ್ಷೆಯ ಫಲಿತಾಂಶ, ಕೇವಲ ಅಂಕಿ ಅಂಶವಷ್ಟೇ ಅಲ್ಲ. ಕನ್ನಡಿಗರ ತೀರ್ಪು ಎಂದರೂ ಅಡ್ಡಿಯಿಲ್ಲ.
10 ಪ್ರಶ್ನೆಗಳಿಗೆ ಜನರು ಕೊಟ್ಟ ಉತ್ತರ
1) ನೋಟು ರದ್ದತಿ ಮೋದಿಯವರ ಕ್ರಾಂತಿಕಾರಿ ನಿರ್ಧಾರವೇ?
ಗ್ರಾಮೀಣ: ಹೌದು - 53 % , ಇಲ್ಲ 25 % ಗೊತ್ತಿಲ್ಲ 22 %
ನಗರ: ಹೌದು - 67 %, ಇಲ್ಲ 18 %, ಗೊತ್ತಿಲ್ಲ 15 %
-----------
2) ನೋಟ್ ಬ್ಯಾನ್ನಿಂದ ಪ್ರಧಾನಿ ಮೋದಿ ಕಪ್ಪು ಹಣ ಹೊಂದಿರುವವರಲ್ಲಿ ಭಯ ಮೂಡಿಸಿದರಾ?
ಗ್ರಾಮೀಣ ನಗರ
ಹೌದು ಶೇ.51 ಶೇ.63
ಇಲ್ಲ ಶೇ.35 ಶೇ. 25
ಗೊತ್ತಿಲ್ಲ ಶೇ.14 ಶೇ. 12
--
3) ನೋಟು ರದ್ದತಿಯಿಂದ ಅತಿಹೆಚ್ಚು ತೊಂದರೆ ಅನುಭವಿಸಿದವರು ಯಾರು..?
ಗ್ರಾಮೀಣ ನಗರ
ಶ್ರೀಮಂತರು ಶೇ.22 ಶೇ.21
ಮಧ್ಯಮ ವರ್ಗ ಶೇ. 37 ಶೇ.39
ಬಡವರು ಶೇ. 32 ಶೇ.31
ಯಾರಿಗೂ ತೊಂದರೆಯಾಗಿಲ್ಲ ಶೇ. 09 ಶೇ. 09
4) ನೋಟು ರದ್ಧತಿಯಿಂದ ದೇಶಕ್ಕೆ ಒಳ್ಳೆಯದಾಗಿದೆಯಾ..?
ಗ್ರಾಮೀಣ ನಗರ
ಒಳ್ಳೆಯದಾಗಿದೆ ಶೇ.46 ಶೇ.48
ಕೆಟ್ಟದ್ದಾಗಿದೆ ಶೇ.16 ಶೇ.14
ಮುಂದೆ ಒಳ್ಳೆಯದಾಗುತ್ತೆ ಶೇ.38 ಶೇ.38
5) ನೋಟು ರದ್ದತಿಯ ಬಗ್ಗೆ ನಿಮ್ಮ ಅಭಿಪ್ರಾಯ?
ಗ್ರಾಮೀಣ ನಗರ
ಒಳ್ಳೆಯ ಉದ್ದೇಶ, ಜಾರಿ ಸರಿಯಿಲ್ಲ ಶೇ.28 ಶೇ.32
ದುರುದ್ದೇಶಪೂರಿತ ಶೇ.18 ಶೇ.22
ಒಳ್ಳೆಯ ಉದ್ದೇಶ, ಜಾರಿಯೂ ಸರಿ ಶೇ. 32 ಶೇ.36
ಗೊತ್ತಿಲ್ಲ ಶೇ.22 ಶೇ.10
6) ನೋಟ್ಬ್ಯಾನ್ ನಂತರ ನರೇಂದ್ರ ಮೋದಿ ವರ್ಚಸ್ಸು
ಗ್ರಾಮೀಣ ನಗರ
ಹೆಚ್ಚಾಗಿದೆ ಶೇ.56 ಶೇ. 57
ಕಡಿಮೆಯಾಗಿದೆ ಶೇ.10 ಶೇ.10
ಏನೂ ವ್ಯತ್ಯಾಸವಾಗಿಲ್ಲ ಶೇ. 15 ಶೇ.19
ಗೊತ್ತಿಲ್ಲ ಶೇ. 19 ಶೇ.14
7) ನೋಟ್ಬ್ಯಾನ್ನ್ನು ವಿರೋಧ ಪಕ್ಷಗಳು ರಾಜಕೀಯಕ್ಕೆ ಬಳಸಿಕೊಂಡವಾ ?
ಗ್ರಾಮೀಣ ನಗರ
ಹೌದು ಶೇ. 62 ಶೇ.65
ಇಲ್ಲ ಶೇ. 13 ಶೇ.15
ಗೊತ್ತಿಲ್ಲ ಶೇ.25 ಶೇ.20
8) 2000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಬೇಕಾ?
ಗ್ರಾಮೀಣ ನಗರ
ಹೌದು ಶೇ.61 ಶೇ.57
ಬೇಡ ಶೇ.28 ಶೇ.30
ಗೊತ್ತಿಲ್ಲ ಶೇ.11 ಶೇ.13
9) ನೋಟ್ಬ್ಯಾನ್ ವೇಳೆ ಮಾಧ್ಯಮಗಳು ಪ್ರಧಾನಿ ಮೋದಿಯವರಿಗೆ ಹೆಚ್ಚು ಪ್ರಚಾರ ಕೊಟ್ಟವಾ?
ಗ್ರಾಮೀಣ ನಗರ
ಹೌದು ಶೇ.58 ಶೇ.60
ಇಲ್ಲ ಶೇ.33 ಶೇ.30
ಗೊತ್ತಿಲ್ಲ ಶೇ.09 ಶೇ.10
10) ನೋಟ್ಬ್ಯಾನ್ನಿಂದ ಬಿಜೆಪಿಗೆ ರಾಜಕೀಯವಾಗಿ ಒಳ್ಳೆಯದಾಯಿತಾ ?
ಗ್ರಾಮೀಣ ನಗರ
ಒಳ್ಳೆಯದಾಗಿದೆ ಶೇ.36 ಶೇ.38
ಕೆಟ್ಟದಾಗಿದೆ ಶೇ.16 ಶೇ.14
ವ್ಯತ್ಯಾಸವಾಗಿಲ್ಲ ಶೇ. 27 ಶೇ.25
ಗೊತ್ತಿಲ್ಲ ಶೇ.21 ಶೇ.23
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.