ಚಿತ್ರಮಂದಿರಗಳಲ್ಲಿ ಹೊರಗಿನ ಆಹಾರ ನಿರ್ಬಂಧಿಸುವಂತಿಲ್ಲ

By Suvarna Web DeskFirst Published Apr 6, 2018, 9:38 AM IST
Highlights

ಚಲನಚಿತ್ರ ಮಂದಿರಗಳಲ್ಲಿ ಹೊರಗಿನಿಂದ ತಂದ ಆಹಾರ ಪದಾರ್ಥ ಬಳಸದಂತೆ ನಿಷೇಧ ಹೇರುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಚಲನ ಚಿತ್ರಮಂದಿರದ ಆವರಣಗಳಲ್ಲಿ ಹೆಚ್ಚಿನ ದರಗಳಿಗೆ ತಿಂಡಿ-ತಿನಿಸು ಮಾರಲು ಅವಕಾಶ ನೀಡಲಾಗಿದೆ.

ಮುಂಬೈ: ಚಲನಚಿತ್ರ ಮಂದಿರಗಳಲ್ಲಿ ಹೊರಗಿನಿಂದ ತಂದ ಆಹಾರ ಪದಾರ್ಥ ಬಳಸದಂತೆ ನಿಷೇಧ ಹೇರುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಚಲನ ಚಿತ್ರಮಂದಿರದ ಆವರಣಗಳಲ್ಲಿ ಹೆಚ್ಚಿನ ದರಗಳಿಗೆ ತಿಂಡಿ-ತಿನಿಸು ಮಾರಲು ಅವಕಾಶ ನೀಡಲಾಗಿದೆ.

ಹೀಗಿದ್ದಾಗ ಹೊರಗಿನಿಂದ ಆಹಾರ ಮತ್ತು ತಿನಿಸು ತರುವುದನ್ನು ನಿರ್ಬಂಧಿಸಕೂಡದು ಎಂದು ಹೈಕೋರ್ಟ್‌ ಹೇಳಿದೆ. ಕೆಲವು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಆಹಾರ ಮತ್ತು ತಿನಿಸು ತರುವುದನ್ನು ನಿರ್ಬಂಧಿಸಲಾಗುತ್ತದೆ. ವ್ಯಕ್ತಿಯ ಅನಾರೋಗ್ಯದಿಂದ ವ್ಯಕ್ತಿ ಬಳಲುತ್ತಿದ್ದರೆ ಆತನ ಬದುಕಿನ ಹಕ್ಕನ್ನು ಇದರಿಂದ ನಿರಾಕರಿಸಿದಂತಾಗುತ್ತದೆ ಎಂದು ವ್ಯಕ್ತಿಯೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದರು.

ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ, ‘ಒಂದೋ ಥಿಯೇಟರ್‌ನ ಒಳಗೆ ಯಾವುದೇ ಥರದ ತಿನಿಸು ಮಾರಾಟ ಮಾರಬಾರದು ಅಥವಾ ಥಿಯೇಟರ್‌ಗೆ ಯಾರೂ ಆಹಾರ ಕೊಂಡೊಯ್ಯಲು ಅವಕಾಶ ನೀಡಬಾರದು. ಇಲ್ಲವೇ, ಹೊರಗಿನಿಂದ ಆಹಾರ-ನೀರು ಒಯ್ಯಲು ಅವಕಾಶ ಕಲ್ಪಿಸಬೇಕು ಹಾಗೂ ಥಿಯೇಟರ್‌ನೊಳಗೂ ತಿಂಡಿ ಮಾರಾಟಕ್ಕೆ ಅನುವು ಮಾಡಿಕೊಡಬೇಕು’ ಎಂದು ಖಡಕ್ಕಾಗಿ ಹೇಳಿತು.

click me!