ದಲಿತ, ಹರಿಜನ ಪದ ಬಳಸದಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ

By Suvarna Web DeskFirst Published Apr 6, 2018, 9:30 AM IST
Highlights

ಸರ್ಕಾರಿ ಕಡತಗಳಲ್ಲಿ ಪರಿಶಿಷ್ಟಜಾತಿಗೆ ಸೇರಿದ ಸಮುದಾಯವನ್ನು ಗುರುತಿಸುವ ವೇಳೆ ‘ದಲಿತ’, ‘ಹರಿಜನ’ ಪದ ಬಳಸದಂತೆ ಎಲ್ಲಾ ಇಲಾಖೆಗಳು, ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ.

ನವದೆಹಲಿ: ಸರ್ಕಾರಿ ಕಡತಗಳಲ್ಲಿ ಪರಿಶಿಷ್ಟಜಾತಿಗೆ ಸೇರಿದ ಸಮುದಾಯವನ್ನು ಗುರುತಿಸುವ ವೇಳೆ ‘ದಲಿತ’, ‘ಹರಿಜನ’ ಪದ ಬಳಸದಂತೆ ಎಲ್ಲಾ ಇಲಾಖೆಗಳು, ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ.

ಮಾರ್ಚ್ 15ರಂದು ಅಂದರೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ವಿರೋಧಿ ಕಾಯಿದೆ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ನೀಡುವುದಕ್ಕೂ 5 ದಿನ ಮೊದಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಈ ನಿರ್ದೇಶನವನ್ನು ಹೊರಡಿಸಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಮುಖ್ಯಕಾರ್ಯದರ್ಶಿಗಳಿಗೆ ಕಳುಹಿಸಿರುವ ಪತ್ರದಲ್ಲಿ, ‘ಪರಿಶಿಷ್ಟಜಾತಿ’ ಎಂಬ ಪದವನ್ನೇ ಬಳಸಬೇಕೆದಿದ್ದು, ಇತ್ತೀಚೆಗೆ ಜ.15ರಂದು ಮಧ್ಯಪ್ರದೇಶ ಹೈಕೋರ್ಟ್‌ ‘ದಲಿತ’ ಪದ ಬಳಸದಂತೆ ಕೇಂದ್ರ ಮತ್ತು ರಾಜ್ಯಗಳಿಗೆ ಸೂಚಿಸಿದ್ದನ್ನೂ ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

click me!