ನಿಮ್ಮ ಬ್ಯಾಂಕ್'ನಲ್ಲಿ ಕನಿಷ್ಠ ಠೇವಣಿ ಹಣ ಇರದಿದ್ದಲ್ಲಿ 500ಕ್ಕಿಂತ ಹೆಚ್ಚು ಕಡಿತ ! ಹೇಗೆ ಗೊತ್ತಾ ?

Published : Mar 08, 2017, 07:27 AM ISTUpdated : Apr 11, 2018, 12:52 PM IST
ನಿಮ್ಮ ಬ್ಯಾಂಕ್'ನಲ್ಲಿ ಕನಿಷ್ಠ ಠೇವಣಿ ಹಣ ಇರದಿದ್ದಲ್ಲಿ 500ಕ್ಕಿಂತ ಹೆಚ್ಚು ಕಡಿತ ! ಹೇಗೆ ಗೊತ್ತಾ ?

ಸಾರಾಂಶ

ಖಾಸಗಿ ಬ್ಯಾಂಕುಗಳು ಯಾವ ರೀತಿ ಹಣ ಕಡಿತಗೊಳಿಸಲಿವೆ ಇಲ್ಲಿದೆ ಮಾಹಿತಿ

ಮುಂಬೈ(ಮಾ.08): ಇತ್ತೀಚಿಗಷ್ಟೆ ಕೆಲ ಖಾಸಗಿ ಬ್ಯಾಂಕ್'ಗಳು ಕನಿಷ್ಠ ಹಣ ಠೇವಣಿಯಿಡದಿದ್ದಲ್ಲಿ  500 ರೂ. ಕಡಿತ ಮಾಡುವುದಾಗಿ ಸುತ್ತೋಲೆ ಹೊರಡಿಸಿದ್ದವು. ಸರ್ಕಾರಿ ಸ್ವಾಮ್ಯದ ಎಸ್'ಬಿಐ ಕೂಡ ಏಪ್ರಿಲ್ 1ರಿಂದ ನಿಗದಿತ ಠೇವಣಿ ಇಲ್ಲದಿದ್ದಲ್ಲಿ 100 ರೂ. ಕಡಿತಗೊಳಿಸುವುದಾಗಿ ಈಗಾಗಲೇ ಪ್ರಕಟಣೆ ತಿಳಿಸಿದೆ. ಆದರೆ ಹೆಚ್'ಡಿಎಫ್'ಸಿ ಬ್ಯಾಂಕ್'ನಲ್ಲಿ 500ರೂ.ಗಿಂತ ಹೆಚ್ಚು ಹಣ ಕಡಿತಗೊಳ್ಳಲಿದೆ.

ಖಾಸಗಿ ಬ್ಯಾಂಕುಗಳು ಯಾವ ರೀತಿ ಹಣ ಕಡಿತಗೊಳಿಸಲಿವೆ ಇಲ್ಲಿದೆ ಮಾಹಿತಿ

ಹೆಚ್'ಡಿಎಫ್'ಸಿ ಬ್ಯಾಂಕ್'

1) ಉಳಿತಾಯ ಖಾತೆದಾರರು 0 ರೂನಿಂದ 2500 ರೂ. ಠೇವಣಿಯಿಟ್ಟಿದ್ದರೆ ಕನಿಷ್ಠ 600 ಹಾಗೂ ಅದಕ್ಕಿಂತ ಹೆಚ್ಚು ಹಣ ಕಡಿತವಾಗುತ್ತದೆ. ಹೆಚ್ಚುವರಿ ಹಣದಲ್ಲಿ ಶೇ.14 ಸೇವಾ ತೆರಿಗೆ,0.5 ಕೃಷಿ ಕಲ್ಯಾಣ ಸೆಸ್ ಹಾಗೂ ಶೇ.0.5 ಸ್ವಚ್ಛ ಭಾರತ ಸೆಸ್ ಒಳಗೊಳ್ಳುತ್ತದೆ.

2) 2,500 ರಿಂದ 5000 ರೂ ಠೇವಣಿಯಿದ್ದರೆ  450 ರೂ. ಕಡಿತ ಹಾಗೂ ತೆರಿಗೆ ಹಾಗೂ ಸೆಸ್ ಕಡಿತಗೊಳ್ಳುತ್ತದೆ.

3) 5,000 ರೂ.ನಿಂದ 7,500 ಠೇವಣಿಯಿದ್ದರೆ 300 ರೂ. ಕಡಿತಗೊಳುತ್ತದೆ. 7,500ರಿಂದ 10,000 ರೂ ಹಣವಿದ್ದರೆ 150 ರೂ. ಕಡಿತಗೊಳ್ಳುತ್ತದೆ.

4) ಗ್ರಾಮೀಣ ಪ್ರದೇಶದ ಉಳಿತಾಯ ಖಾತೆದಾರರಿಗೆ ತುಸು ರಿಯಾಯಿತಿ ಸಿಗಲಿದೆ. ಈ ಖಾತೆದಾರರಿಗೆ ಕನಿಷ್ಠ ಠೇವಣಿ ಹಣದ ವಾಯಿದೆಯನ್ನು 3 ತಿಂಗಳಿಗೆ ನಿಗದಿಪಡಿಸಲಾಗಿದೆ. ಮೂರು ತಿಂಗಳಲ್ಲಿ  1,000 ರೂ.ನಿಂದ 2,500 ಇದ್ದರೆ 270 ರೂ. ಕಡಿತಗೊಳ್ಳುತ್ತದೆ. 1000 ರೂ.ಗಳಿಗಿಂತ ಕಡಿಮೆಯಿದ್ದರೆ 400 ರೂ. ಕಡಿತಗೊಳ್ಳುತ್ತದೆ.

ಐಸಿಐಸಿಐ ಬ್ಯಾಂಕ್ : ನಿಗದಿತ ಠೇವಣಿ ಹಣವಿಲ್ಲದಿದ್ದಲ್ಲಿ 450 ರೂ. ಕಡಿತವಾಗುತ್ತದೆ.

ಆಕ್ಸಿಸ್ ಬ್ಯಾಂಕ್: ನಿಗದಿತ ಠೇವಣಿ ಹಣವಿಲ್ಲದಿದ್ದಲ್ಲಿ 350 ರೂ. ಕಡಿತವಾಗುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2ನೇ ಮಹಡಿಗೆ ಏಣಿ ಮೂಲಕ ಹತ್ತಿ ಮಲಗಿದ್ದ ಯುವತಿಯ ಚಿನ್ನದ ಸರ ಕದ್ದ ಕಳ್ಳ, ಸಿಸಿಟಿವಿ ದೃಶ್ಯ
ಅಣ್ಣಾಮಲೈಯಲ್ಲಿ ಏನಿದೆ? ಆತ ಝಿರೋ ಎಂದ ಠಾಕ್ರೆಗೆ ನೆಟ್ಟಿಗರ ಕ್ಲಾಸ್, ಪೇಚಿಗೆ ಸಿಲುಕಿದ ಶಿವಸೇನೆ