
ಕೊಚ್ಚಿ: ಎಲ್ಲಾ ಪ್ರೇಮ ವಿವಾಹಗಳನ್ನು ‘ಲವ್ ಜಿಹಾದ್’ ಎಂದು ಬಿಂಬಿಸುವುದು ಸರಿಯಲ್ಲವೆಂದು ಕೇರಳ ಹೈಕೋರ್ಟ್ ಇಂದು ಹೇಳಿದೆ.
ಕಣ್ಣೂರಿನ ಅನೀಸ್ ಅಹಮದ್ ಹಾಗೂ ಶೃತಿ ಎಂಬವರ ಮದುವೆಯ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಪ್ರೀತಿಗೆ ಯಾವುದೇ ಮಿತಿಯಿಲ್ಲ, ಇಂತಹ ವಿವಾಹಗಳನ್ನು ಪ್ರೋತ್ಸಾಹಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಶೃತಿಯನ್ನು ಅನೀಸ್ ಅಹಮದ್ ಅಪಹರಿಸಿ, ಮತಾಂತರ ಮಾಡಿ ವಿವಾಹವಾಗಿದ್ದಾರೆಂದು ಆರೋಪಿಸಲಾಗಿತ್ತು. ಈಗ ಹೈಕೋರ್ಟ್, ಶೃತಿ ಹಾಗೂ ಅನೀಸ್ ವಿವಾಹವು ಕಾನೂನುಬದ್ಧವಾಗಿದ್ದು, ಶೃತಿಯನ್ನು ಆಕೆಯ ಪತಿಯೊಂದಿಗೆ ಹೋಗಲು ಅನುಮತಿಸಿದೆ.
ಕಳೆದ ಅ.10ರಂದು ಹಾದಿಯಾ ಪ್ರಕರಣವನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್, ಎಲ್ಲಾ ಪ್ರೇಮವಿವಾಹಗಳು ಲವ್ ಜಿಹಾದ್ ಅಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.
ಕಳೆದ ಅ.07ರಂದು ಸುಪ್ರಿಂ ಕೋರ್ಟಿನಲ್ಲಿ ಸಲ್ಲಿಸಿದ ಅಫಿಡವಿಟ್’ನಲ್ಲಿ ಕೇರಳ ಸರ್ಕಾರವು, ಇಂತಹ ಪ್ರಕರಣಗಳಿಗೆ ಎನ್’ಐಏ ತನಿಖೆಯ ಅಗತ್ಯವಿಲ್ಲವೆಂದೂ, ಕೇರಳ ರಾಜ್ಯ ಪೊಲೀಸರು ಸಮರ್ಥರಾಗಿದ್ದಾರೆಂದು ಹೇಳಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.