ಮಹಾಯುದ್ಧ ಸನ್ನಿಹಿತ: ಅಮೆರಿಕದ ಯುದ್ಧ ನೌಕೆ ಮುಳುಗಿಸುತ್ತೇವೆ ಎಂದ ಉ.ಕೊರಿಯಾ

By Suvarna Web DeskFirst Published Apr 23, 2017, 4:40 PM IST
Highlights

ನಮ್ಮಕ್ರಾಂತಿಕಾರಿಪಡೆಗಳುಅಮೆರಿಕದಅಣ್ವಸಗಳನ್ನುಹೊತ್ತೊಯ್ಯುವಯುದ್ಧವಿಮಾನವಾಹಕನೌಕೆಯೊಂದನ್ನುಮುಳುಗಿಸಲಿದೆಎಂದುಉತ್ತರಕೊರಿಯಾದಆಡಳಿತಪಕ್ಷದಪತ್ರಿಕೆರೊಡೊಂಗ್ಸಿನ್ಮನ್ಹೇಳಿದೆ.

ಸೋಲ್(ಏ.23): ಜಪಾನ್ ಸಮುದ್ರತೀರಕ್ಕೆ ಅಮೆರಿಕ ನೌಕಾಪಡೆಯನ್ನು ರವಾನಿಸಿದ ಬೆನ್ನಲ್ಲೇ, ಅಮೆರಿಕದ ಯುದ್ಧವಿಮಾನ ನೌಕೆಯನ್ನು ಮುಳುಗಿಸಿ ತನ್ನ ತನ್ನ ಪರಾಕ್ರಮ ಸಾಬೀತುಪಡಿಸುವುದಾಗಿ ಉತ್ತರ ಕೊರಿಯಾ ಬೆದರಿಕೆ ಹಾಕಿದೆ. ಇದೇ ವೇಳೆ ಫಿಲಿಪ್ಪೀನ್ ಸಮುದ್ರದಲ್ಲಿ ಸಮರಾಭ್ಯಾಸಕ್ಕೆ ಜಪಾನಿನ ಎರಡು ಹಡಗುಗಳು ಸೇರ್ಪಡೆಗೊಂಡಿವೆ.

ನಮ್ಮ ಕ್ರಾಂತಿಕಾರಿ ಪಡೆಗಳು ಅಮೆರಿಕದ ಅಣ್ವಸಗಳನ್ನು ಹೊತ್ತೊಯ್ಯುವ ಯುದ್ಧವಿಮಾನ ವಾಹಕ ನೌಕೆಯೊಂದನ್ನು ಮುಳುಗಿಸಲಿದೆ ಎಂದು ಉತ್ತರ ಕೊರಿಯಾದ ಆಡಳಿತ ಪಕ್ಷದ ಪತ್ರಿಕೆ ರೊಡೊಂಗ್ ಸಿನ್ಮನ್ ಹೇಳಿದೆ. ಅಮೆರಿಕದ ಕಾರ್ಲ್ ವಿನ್ಸನ್ ನೌಕೆಯನ್ನು ‘ಕುರೂಪಿ ಪ್ರಾಣಿ’ ಎಂದು ಪತ್ರಿಕೆ ಅಣಕಿಸಿದೆ. ಈ ಯುದ್ಧ ನೌಕೆಯ ಮೇಲೆ ದಾಳಿ ಮಾಡುವುದು ನಮ್ಮ ಮಿಲಿಟರಿ ಸಾಮರ್ಥ್ಯವನ್ನು ತೋರಿಸುವುದಕ್ಕೆ ನೈಜ ಉದಾಹರಣೆ ಎಂದು ತಿಳಿಸಿದೆ.

click me!