ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಸಾಮಾನ್ಯ ಮಳೆ

By Web DeskFirst Published Aug 2, 2019, 10:41 AM IST
Highlights

ದೇಶದಲ್ಲಿ ಜುಲೈ ತಿಂಗಳಲ್ಲಿ ಉತ್ತರ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ಮುಂದಿನ ಎರಡು ತಿಂಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ನವದೆಹಲಿ [ಆ.02]: ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ಸಾಮಾನ್ಯ ಪ್ರಮಾಣದ ಮಳೆ ನಿರೀಕ್ಷೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. 

ಮಳೆಗಾಲದ ನಾಲ್ಕು ತಿಂಗಳ ದ್ವಿತೀಯಾರ್ಧದಲ್ಲಿ ದೇಶಾದ್ಯಂತ ದೀರ್ಘಕಾಲೀನ ಸರಾಸರಿಯ 100 ರಷ್ಟುಮಳೆ ಸಂಭವವಿದೆ. ಈ ಪ್ರಮಾಣದಲ್ಲಿ ಶೇ.8ರಷ್ಟುಹೆಚ್ಚು ಇಲ್ಲವೇ ಶೇ.8ರಷ್ಟುಕೊರತೆಯ ಸಾಧ್ಯತೆ ಇದ್ದೇ ಇರುತ್ತದೆ ಎಂದು ಹೇಳಿದೆ. ಆಗಸ್ಟ್‌ ತಿಂಗಳಲ್ಲಿ ದೀರ್ಘಕಾಲೀನ ಸರಾಸರಿಯ ಶೇ.99 ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ತಿಳಿಸಿದೆ.

ಜುಲೈ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾದ ಕಾರಣ ಈ ಬಾರಿಯ ಮುಂಗಾರು ಮಳೆಯ ಒಟ್ಟಾರೆ ಕೊರತೆಯನ್ನು ಶೇ.9ಕ್ಕೆ ಇಳಿದಿತ್ತು. ಜುಲೈ ತಿಂಗಳಲ್ಲಿ ಶೇ.105 ಪ್ರಮಾಣದಷ್ಟುಮಳೆಯಾಗುವ ಮೂಲಕ, ಈ ಹಿಂದೆಂದಿಗಿಂತಲೂ ಹೆಚ್ಚು ಮಳೆಯಾಗಿದೆ. ಇದರ ಪರಿಣಾಮ ಜೂನ್‌ ತಿಂಗಳ ಅವಧಿಯಲ್ಲಿದ್ದ ಮುಂಗಾರು ಕೊರತೆಯು ಶೇ.33ರಿಂದ ಇದೀಗ ಶೇ.9ಕ್ಕೆ ಕುಸಿದಿದೆ.

click me!