ಮಲ್ಯ ವಿರುದ್ಧ 6ನೇ ಜಾಮೀನು ರಹಿತ ವಾರಂಟ್ ಜಾರಿ

By Suvarna Web DeskFirst Published Apr 12, 2017, 8:30 AM IST
Highlights

ಮಲ್ಯ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (FERA 1995) ಉಲ್ಲಂಘನೆ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ವೈಯುಕ್ತಿಕವಾಗಿ ಹಾಜರಾಗುವುದರಿಂದ ಮಲ್ಯಗೆ ನೀಡಿದ್ದ ವಿನಾಯಿತಿಯನ್ನು ನ್ಯಾಯಾಲಯವು ರದ್ದುಗೊಳಿಸಿತ್ತು.

ನವದೆಹಲಿ (ಏ.12): ಉದ್ಯಮಿ ವಿಜಯ್ ಮಲ್ಯ ವಿರುದ್ಧ ದೆಹಲಿ ನ್ಯಾಯಾಲಯವೊಂದು ಜಾಮೀನು ರಹಿತ ಬಂಧನದ ವಾರಂಟನ್ನು ಜಾರಿಗೊಳಿಸಿದೆ.

ಮಲ್ಯ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (FERA 1995) ಉಲ್ಲಂಘನೆ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ವೈಯುಕ್ತಿಕವಾಗಿ ಹಾಜರಾಗುವುದರಿಂದ ಮಲ್ಯಗೆ ನೀಡಿದ್ದ ವಿನಾಯಿತಿಯನ್ನು ನ್ಯಾಯಾಲಯವು ರದ್ದುಗೊಳಿಸಿತ್ತು.

1996, 1997, 1998ರಲ್ಲಿ ಕಿಂಗ್ ಫಿಶರ್ ಸಂಸ್ಥೆಯ ಪ್ರಚಾರಕ್ಕಾಗಿ ಮಲ್ಯ,  ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಬ್ರಿಟಿಷ್ ಕಂಪನಿಗೆ 2ಲಕ್ಷ ಯುಎಸ್ ಡಾಲರ್’ಗಳನ್ನು ಪಾವತಿಸಿದ್ದರು ಎಂದು ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿತ್ತು. ಕಾಯ್ದೆ ಪ್ರಕಾರ ಹಣ ಪಾವತಿಸುವ ಮುಂಚೆ ಮಲ್ಯ ಭಾರತೀಯ ರಿಸರ್ವ್ ಬ್ಯಾಂಕ್ ಮೂರವಾನುಮತಿ ಪಡೆಯಬೇಕಿತ್ತು ಎಂದು ಈಡಿ ಹೇಳಿದೆ.

ಮಲ್ಯ ವಿರುದ್ಧ ಹೊರಡಿಸಲಾಗಿರುವ ಆರನೇ  ಜಾಮೀನು ರಹಿತ ವಾರಂಟ್ ಇದಾಗಿದೆ.

click me!