(ವಿಡಿಯೋ) ಆಂಡ್ರಾಯ್ಡ್ ಜಗತ್ತಿಗೆ ಎಂಟ್ರಿ ಕೊಟ್ಟ ನೋಕಿಯಾ: ಕಡಿಮೆ ಬೆಲೆಗೆ ಹಲವು ಫೀಚರ್'ಗಳುಳ್ಳ ಫೋನ್ ಲಭ್ಯ

By Suvarna Web DeskFirst Published Jan 8, 2017, 7:00 AM IST
Highlights

ಇಂದು ಆಂಡ್ರಾಯ್ಡ್ ವರ್ಶನ್'ನ 'ನೋಕಿಯಾ 6' ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸೀರಿಸ್'ನಲ್ಲಿ ಹಲವು ಅತ್ಯುತ್ತಮ ಫೀಚರ್'ಗಳಿದ್ದು, ಬೆಲೆಯು ಸಹ ಅತಿ ಕಡಿಮೆ.

ಒಂದು ದಶಕದ ಹಿಂದೆ ಭಾರತದ ಮೊಬೈಲ್  ಮಾರುಕಟ್ಟೆಯನ್ನು ಆಳಿದ ಕಂಪನಿ ನೋಕಿಯಾ. ಆಗ ಬಡವರಿಂದ ಶ್ರೀಮಂತರವರೆಗೂ ಎಲ್ಲರ ಬಳಿಯಲ್ಲೂ ಬೆಲೆಗೆ ತಕ್ಕ ನೋಕಿಯಾ ಫೋನ್'ಗಳನ್ನು ಇಟ್ಟುಕೊಂಡಿದ್ದರು. ಯಾವಾಗ ಸ್ಯಾಮ್ಸಂಗ್ ಸೇರಿದಂತೆ ಇತರ ಆಂಡ್ರಾಯ್ಡ್ ಫೋನುಗಳು ಮಾರುಕಟ್ಟೆಯನ್ನು ಪ್ರವೇಶಿಸಿದವೋ ನೋಕಿಯಾ ಕಂಪನಿ ಇನ್ನಿಲ್ಲದಂತೆ ನೆಲ ಕಚ್ಚಿತು.

ನೋಕಿಯಾ ಸಂಸ್ಥೆ ಆಂಡ್ರಾಯ್ಡ್ ಜಗತ್ತಿಗೆ ಕಾಲಿಟ್ಟು ಗ್ರಾಹಕರಿಗೆ ಮತ್ತೆ ಶುಭ ಸುದ್ದಿ ನೀಡಿದೆ. ಇಂದು ಆಂಡ್ರಾಯ್ಡ್ ವರ್ಶನ್'ನ 'ನೋಕಿಯಾ 6' ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸೀರಿಸ್'ನಲ್ಲಿ ಹಲವು ಅತ್ಯುತ್ತಮ ಫೀಚರ್'ಗಳಿದ್ದು, ಬೆಲೆಯು ಸಹ ಅತಿ ಕಡಿಮೆ.

 'ನೋಕಿಯಾ 6' ನಲ್ಲಿರುವ ಫೀಚರ್'ಗಳು

1) ಆಂಡ್ರಾಯ್ಡ್ 7.0 ವರ್ಶನ್ ನ್ಯೂಗಾ

2) 2.5 ಗೊರಿಲ್ಲಾ ಗ್ಲಾಸ್ ಒಳಗೊಂಡ  5.5 ಇಂಚಿನ ಫುಲ್ ಹೆಚ್'ಡಿ ಡಿಸ್ಪ್ಲೇ

3) 4ಜಿಬಿ ರಾಮ್

4) 64 ಜಿಬಿ ಇಂಟರ್'ನಲ್ ಸ್ಟೋರೇಜ್

5)  ಡ್ಯುಯಲ್ ಸಿಮ್ 3000 ಎಂಎಹೆಚ್ ನಾನ್ ರಿಮೂವಬಲ್ ಬ್ಯಾಟರಿ

6) ಹಿಂಭಾಗ 16 ಮೆಗಾ ಪಿಕ್ಸಲ್, ಮುಂಭಾಗ 8 ಮೆಗಾ ಪಿಕ್ಸಲ್ ಕ್ಯಾಮರಾ

ಬೆಲೆ: 1699 ಯಾನ್ (ಭಾರತದ ಬೆಲೆ 16,750) ಪ್ರಸ್ತುತ ಈ ಫೋನ್ JD.com ವೆಬ್'ಸೈಟ್'ನಲ್ಲಿ ಮಾತ್ರ ಲಭ್ಯವಿದ್ದು. ಭಾರತದ ಮಾರುಕಟ್ಟೆ ಹಾಗೂ ಇ-ಕಾಮರ್ಸ್ ಕಂಪನಿಗಳಲ್ಲಿ ಶೀಘ್ರದಲ್ಲಿ ಲಭ್ಯವಾಗಲಿದೆ. ಅಲ್ಲದೆ ಇನ್ನು ಕೆಲವು ದಿನಗಳಲ್ಲಿ ಹಲವು ರೀತಿಯ ಮೊಬೈಲ್ ವರ್ಶನ್'ಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.

click me!