
ದೆಹಲಿ(ಮೇ 28) : ಕೇಂದ್ರ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದ್ ಪುಷ್ಕರ್ ಅನುಮಾನಾಸ್ವದ ಸಾವು ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣ ವಿಚಾರಣೆ ತೀವ್ರಗೊಳ್ಳುತ್ತಿರುವುಂತೆ ಹೊಸ ವಿಚಾರಗಳು ಹೊರಬರುತ್ತಿದೆ. ಇದೀಗ ಸುನಂದ್ ಪುಷ್ಕರ್ ಪತಿ ಶಶಿ ತರೂರ್‌ಗೆ ಕಳುಹಿಸಿದ ಕೊನೆಯ ಇ-ಮೇಲ್ ಸಂದೇಶ ಸಾವಿನ ಅನುಮಾನವನ್ನ ಮತ್ತಷ್ಟು ಬಲಪಡಿಸಿದೆ.
ದೆಹಲಿ ಪೊಲೀಸರು ಸಲ್ಲಿಸಿರುವ 3000 ಸಾವಿರ ಪುಟಗಳ ಚಾರ್ಜ್ ಶೀಟ್ ನಲ್ಲಿ ಪುಷ್ಕರ್ ಹಾಗೂ ಶಶಿ ತರೂರ್ ನಡುವಿನ ಇ-ಮೇಲ್ ಸಂಭಾಷಣೆಯನ್ನ ಬಹಿರಂಗ ಪಡಿಸಿದೆ. ಸುನಂದ್ ಪುಷ್ಕರ್ ಶವ ಪತ್ತೆಯಾಗೋ 9 ದಿನಗಳ ಮುಂಚೆ ಶಶಿ ತರೂರ್‌ಗೆ ಇ-ಮೇಲ್ ಸಂದೇಶ ರವಾನಿಸಿದ್ದರು. ನನಗೆ ಬದುಕಲು ಆಸೆ ಇಲ್ಲ. ಸಾವಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ ಎಂದು ಪುಷ್ಕರ್ ತನ್ನ ಇ-ಮೇಲೆ ಸಂದೇಶದಲ್ಲಿ ಬರೆದಿದ್ದಾರೆ. ಈ ಸಂದೇಶ ಫುಷ್ಕರ್ ಸಾವಲ್ಲ ಕೊಲೆ ಅನುಮಾನವನ್ನ ಹೆಚ್ಚಿಸಿದೆ.
ಜನವರಿ 8 ರಂದು ಸುನಂದ್ ಪುಷ್ಕರ್ ಈ ಸಂದೇಶವನ್ನ ಶಶಿ ತರೂರ್‌ಗೆ ಕಳುಹಿಸಿದ್ದಾರೆ. ಬಳಿಕ ಒಂದು ವಾರದಲ್ಲಿ ಸುನಂದ ಪುಷ್ಕರ್ ದೆಹಲಿ ಹೊಟೆಲ್ ಒಂದರಲ್ಲಿ ಅನುಮಾನಸ್ವಾದವಾಗಿ ಸಾವನ್ನಪ್ಪಿದ್ದರು. ಪುಷ್ಕರ್ ತಂಗಿದ್ದ ಹೊಟೆಲ್ ಕೊಠಡಿಯಲ್ಲಿ 27 ಆಲ್‌ಪ್ರಾಕ್ಸ್ ಮಾತ್ರೆಗಳು ಸಿಕ್ಕಿವೆ ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಶಶಿ ತರೂರ್ ಹಾಗೂ ಸುನಂದ ಪುಷ್ಕರ್ ನಡುವಿನ ಸಂಬಂಧ ಹಳಸಿತ್ತು. ಸುನಂದ್ ಪುಷ್ಕರ್ ಮಾನಸಿಕವಾಗಿ ಬಹಳ ನೊಂದಿದ್ದರೂ, ಪತಿ ತರೂರ್ ಅಸಡ್ಡೆ ತೋರಿದ್ದಾರೆ. ಸಾವಿಗೂ ಮುನ್ನ ಸುನಂದ ಪುಷ್ಕರ್ ಫೋನ್ ಕರೆಗಳನ್ನು ತರೂರ್ ಸ್ವೀಕರಿಸಿಲ್ಲ ಎಂದು ದೆಹಲಿ ಪೊಲೀಸರು ತಮ್ಮ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈಗಾಗಲೇ ಹಲವು ತಿರುವು ಪಡೆದುಕೊಂಡಿರುವ ಪುಷ್ಕರ್ ಅನುಮಾನಸ್ವದ ಸಾವು ಪ್ರಕರಣ ಮುಂದಿನ ದಿನಗಳಲ್ಲಿ ಇನ್ನಷ್ಟು ತಿರುವು ಪಡೆಯೋದರಲ್ಲಿ ಯಾವುದೇ ಅನುಮಾನವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.