ಡೆಬಿಟ್ ಕಾರ್ಡ್ ಬಳಕೆದಾರರೆಲ್ಲರೂ ಓದಲೇಬೇಕಾದ ಸುದ್ದಿ..!

By Suvarna Web DeskFirst Published Dec 15, 2017, 6:09 PM IST
Highlights

ಶುಕ್ರವಾರ ಸರ್ಕಾರವೂ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಒಂದು  ಸಿಹಿ ಸುದ್ದಿಯನ್ನು ನೀಡಿದೆ. 2000 ರೂ.ವರೆಗಿನ ಡೆಬಿಟ್ ಕಾರ್ಡ್ ಬಳಕೆಗೆ ಯಾವುದೇ ರೀತಿಯಾದ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಹೇಳಿದೆ.

ನವದೆಹಲಿ (ಡಿ.15): ದೇಶದಾದ್ಯಂತ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಮೋದಿ ಸರ್ಕಾರದ ನೋಟ್ ಬ್ಯಾನ್ ಬಳಿಕ  ಜನರು ಕ್ಯಾಶ್ ವ್ಯವಹಾರಕ್ಕಿಂತಲೂ ಕೂಡ ಡಿಜಿಟಲ್ ವ್ಯವಹಾರದತ್ತ ಜನರ ಒಲವೂ ಕೂಡ ಹೆಚ್ಚಿದೆ.

ಅದರಂತೆಯೇ ಶುಕ್ರವಾರ ಸರ್ಕಾರವೂ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಒಂದು  ಸಿಹಿ ಸುದ್ದಿಯನ್ನು ನೀಡಿದೆ. 2000 ರೂ.ವರೆಗಿನ ಡೆಬಿಟ್ ಕಾರ್ಡ್ ಬಳಕೆಗೆ ಯಾವುದೇ ರೀತಿಯಾದ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಹೇಳಿದೆ.

ಡೆಬಿಟ್ ಕಾರ್ಡ್ ಬಳಕೆ ಮೇಲೆ ವಿಧಿಸಲಾಗುತ್ತಿದ್ದ ಮರ್ಚಂಟ್ ಡಿಸ್ಕೌಂಟ್ ರೇಟ್’ನಿಂದ ವಿನಾಯಿತಿ ನೀಡುವ ಬಗ್ಗೆ ಕೇಂದ್ರ ಸಚಿವ ಸಂಪುಟವು ನಿರ್ಧಾರವನ್ನು ಕೈಗೊಂಡಿದೆ.

click me!