
ಗುವಾಹತಿ(ಫೆ.19): ಮನೆಯಲ್ಲಿ ಟಾಯ್ಲೆಟ್ ಇಲ್ಲವಾದರೆ, ಮದುವೆಯೂ ಇಲ್ಲ..! ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಪಂಜಾಬ್'ನಲ್ಲಿ ಟಾಯ್ಲೆಟ್ ಇಲ್ಲದ ಮನೆಗಳಲ್ಲಿ ವಿವಾಹ ಶಾಸ್ತ್ರ ನೆರವೇರಿಸುವುದಿಲ್ಲ ಎಂದು ಮೌಲ್ವಿಗಳೂ, ಮುಫ್ತಿಗಳು ನಿರ್ಧರಿಸಿದ್ದಾರೆ.
ಈ ಮೂರು ರಾಜ್ಯಗಳಲ್ಲಿ ಮುಸ್ಲಿಮರ ವಿವಾಹ ನಡೆಸಲು ಟಾಯ್ಲೆಟ್ ಕಡ್ಡಾಯ ಎಂಬ ನಿಯಮ ಜಾರಿಗೊಳಿಸಲಾಗಿದೆ ಮತ್ತು ಶೀಘ್ರದಲ್ಲೇ ಇದು ಎಲ್ಲ ರಾಜ್ಯಗಳಿಗೂ ಅನ್ವಯವಾಗಲಿದೆ ಎಂದು ಜಮಿಯತ್ ಉಲಾಮ ಇ ಹಿಂದ್'ನ ಪ್ರಧಾನ ಕಾರ್ಯದರ್ಶಿ ಮೌಲಾನ ಮೆಹ್ಮೂದ್ ಎ ಮದನಿ ಹೇಳಿದ್ದಾರೆ. ಎಲ್ಲ ಧರ್ಮಗಳ ಧಾರ್ಮಿಕ ಮುಖಂಡರು ಇದೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಖಾನಾಪುರದಲ್ಲಿ ಮುಕ್ತಾಯವಾದ ಅಸ್ಸಾಂ ಕಾನ್ಫರೆನ್ಸ್ ಆನ್ ಸ್ಯಾನಿಟೇಷನ್ 2017 ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮದನಿ, ನಮ್ಮಲ್ಲಿ ಎರಡು ರೀತಿಯ ಸ್ವಚ್ಚತೆಯಿದೆ. ಒಂದು ಬಾಹ್ಯ ಸ್ವಚ್ಚತೆ, ಇನ್ನೊಂದು ಆಂತರಿಕ ಸ್ವಚ್ಚತೆ. ಇವೆರಡೂ ಒಂದಕ್ಕೊಂದು ಸಂಬಂಧ ಹೊಂದಿವೆ. ನಮ್ಮ ದೇಹ ಸ್ವಚ್ಚವಾಗಿದ್ದರೆ ಆಂತರಿಕ ಶುಚಿತ್ವವನ್ನೂ ಕಾಪಾಡಿಕೊಳ್ಳಬಹುದು ಎಂದು ಮಾಜಿ ರಾಜ್ಯಸಭಾ ಸಂಸದರೂ ಆಗಿದ್ದ ಮದನಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.