ಟಾಯ್ಲೆಟ್ ಇಲ್ಲದ್ದಕ್ಕೆ ಡೈವೋರ್ಸ್

By Suvarna Web DeskFirst Published Aug 20, 2017, 3:44 PM IST
Highlights

ತೆರೆದ ಬಯಲಲ್ಲಿ ಶೌಚಕ್ಕೆ ಹೋಗುವುದು ಸಮಾಜದಲ್ಲಿ ಮಹಿಳೆಗೆ ಅಗೌರವ ತರುವಂತದ್ದು ಮತ್ತು ಕ್ರೂರವಾದುದು ಎಂದು ನ್ಯಾಯಾಧೀಶ ರಾಜೇಂದ್ರ ಕುಮಾರ್ ಶರ್ಮಾ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಜೈಪುರ(ಆ.20): ಮನೆಯಲ್ಲಿ ಪ್ರತ್ಯೇಕ ಕೋಣೆಯಿಲ್ಲ, ಶೌಚಾಲಯ ಇಲ್ಲ ಎಂಬ ಕಾರಣ ನೀಡಿ ಮಹಿಳೆಯೊಬ್ಬರು ಕೋರಿದ್ದ ವಿವಾಹ ವಿಚ್ಛೇದನವನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಈ ಕುರಿತು ರಾಜಸ್ಥಾನದ ಭಿಲ್ವಾರ ಕೌಟುಂಬಿಕ ಕೋರ್ಟ್ ಅಪರೂಪದ ತೀರ್ಪು ನೀಡಿದೆ. ಮನೆಯಲ್ಲಿ ಶೌಚಾಲಯ ಹೊಂದುವುದು ಕುಟುಂಬಕ್ಕೆ ಅಗತ್ಯವಾದುದು.

ತೆರೆದ ಬಯಲಲ್ಲಿ ಶೌಚಕ್ಕೆ ಹೋಗುವುದು ಸಮಾಜದಲ್ಲಿ ಮಹಿಳೆಗೆ ಅಗೌರವ ತರುವಂತದ್ದು ಮತ್ತು ಕ್ರೂರವಾದುದು ಎಂದು ನ್ಯಾಯಾಧೀಶ ರಾಜೇಂದ್ರ ಕುಮಾರ್ ಶರ್ಮಾ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

2011ರಲ್ಲಿ ನನಗೆ ಮದುವೆಯಾಗಿತ್ತು. ಆದರೆ ಪತಿಯ ಮನೆಯಲ್ಲಿ ತಮಗೆ ಪ್ರತ್ಯೇಕ ಕೋಣೆಯಿಲ್ಲ ಮತ್ತು ಶೌಚಾಲಯವಿಲ್ಲ. ನಾವು ಶೌಚಾಲಯಕ್ಕಾಗಿ ತೆರೆದ ಬಯಲಿಗೆ ತೆರಳಬೇಕು. ಇದು ನನ್ನ ಮೇಲಿನ ಕ್ರೌರ್ಯ. ಇಷ್ಟಾದರೂ ನನ್ನ ಪತಿಗೆ ನನ್ನ ಮೇಲೆ ಯಾವುದೇ ಅನುಕಂಪ ಇಲ್ಲ. ಹೀಗಾಗಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಪತಿಯಿಂದ ತನಗೆ ವಿಚ್ಛೇದನ ನೀಡಬೇಕು ಎಂದು 20ರ ಹರೆಯದ ಮಹಿಳೆ 2015ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಕೆಯ ವಾದವನ್ನು ಒಪ್ಪಿಕೊಂಡ ನ್ಯಾಯಾಲಯ ಇದೀಗ ಆಕೆಗೆ ವಿಚ್ಛೇದನ ನೀಡಿದೆ.

click me!