
ವೀಕ್ಷಕರೇ ನೀವು ಸಂಕ್ರಾಂತಿ ಹಬ್ಬಕ್ಕೆ ಬೆಲ್ಲ ಖರೀದಿಸಲು ಹೊರಟಿದ್ದೀರಾ? ಹಾಗಾದರೆ ಎಚ್ಚರ, ನಮ್ಮ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಕಿಲ್ಲರ್ ಬೆಲ್ಲ. ಈ ಕಿಲ್ಲರ್ ಬೆಲ್ಲದ ಡೆಡ್ಲಿ ಸೀಕ್ರೆಟನ್ನ ಬಯಲು ಮಾಡಿದೆ ನಮ್ಮ ಕವರ್ಸ್ಟೋರಿ ತಂಡ. ಸ್ನೇಹಿತ್ರೆ ಹಬ್ಬದ ಖರೀದಿಗೆ ಮಾರುಕಟ್ಟೆಗೆ ಹೋಗೋ ಮುನ್ನ ಈ ವರದಿಯನ್ನ ಗಮನವಿಟ್ಟು ನೋಡಿ. ಯಾಕಂದರೆ ಮಾರುಕಟ್ಟೆಗೆ ನಕಲಿ, ವಿಷಕಾರಿ ಕೆಮಿಕಲ್ ಮಿಶ್ರಿತ ಬೆಲ್ಲ ಲಗ್ಗೆ ಇಟ್ಟಿದೆ.
ಈ ಕಿಲ್ಲರ್ ಬೆಲ್ಲ ಜನರಿಗೆ ಆರೋಗ್ಯ ಕೊಡೋ ಬದಲು ಜನರ ಜೀವಕ್ಕೇ ಕುತ್ತು ತರಲಿದೆ. ವಿಷ ರಾಸಾಯನಿಕ ಬೆರೆಸಿರೋ ಬೆಲ್ಲ ನಮ್ಮ ದೇಹಕ್ಕೆ ಕೊಡಬಾರದ ಬೇನೆ ಕೊಡಲಿದೆ.
ಇಂಥಾ ಒಂದು ಶಾಕಿಂಗ್ ನ್ಯೂಸ್ ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡಕ್ಕೆ ಸಿಕ್ತು. ಈ ನ್ಯೂಸ್ನ ಸತ್ಯಾಸತ್ಯತೆಯನ್ನು ತುರ್ತಾಗಿ ತಿಳಿದು ನಮ್ಮ ಕರುನಾಡಿನ ಮಂದಿಗೆ ತಿಳಿಸಲು ನಮ್ಮ ತಂಡ ಈ ಬೆಲ್ಲ ತಯಾರು ಮಾಡೋ ಮಾಫಿಯಾ ಮಂದಿ ಅಡ್ಡಕ್ಕೆ ನುಗ್ಗಿತು. ಅಲ್ಲಿ ನಮಗೆ ಶಾಕ್ ಕಾದಿತ್ತು.
ನಮ್ಮ ಮಾರುಕಟ್ಟೆ ಬರುತ್ತಿರೋ ಹೆಚ್ಚಿನ ಬೆಲ್ಲ ವಿಷ ರಾಸಾಯನಿಕದಿಂದ ತಯಾರಾಗುತ್ತಿದೆ. ಈ ಬೆಲ್ಲಕ್ಕೆ ರಸಗೊಬ್ಬರ, ಅಪಾಯಕಾರಿ ಸೋಡಿಯಂ ಬೈ ಕಾರ್ಬೋನೇಟ್, ಬಣ್ಣಕ್ಕೆ ಡೇಂಜರಸ್ ಸಲ್ಫರ್ ಬಳಸ್ತಿದ್ದಾರೆ. ಇನ್ನು ಬೆಲ್ಲ ಗಟ್ಟಿಯಾಗಲು ಸೀಮೆಂಟ್ ಹಾಗೂ ಬಿಳಿ ಬಣ್ಣಕ್ಕೆ ಕ್ಯಾನ್ಸರ್ಕಾರಕ ಡೈ ಬಳಸುತ್ತಿದ್ದಾರೆ.
ಇನ್ನು ನಮ್ಮ ಜನ ನಕಲಿ ಬಿಳಿ ಬಣ್ಣದ ಬೆಲ್ಲವನ್ನೇ ಡಿಮ್ಯಾಂಡ್ ಮಾಡುತ್ತಿರೋದ್ರಿಂದ ಕರುನಾಡಿನ ಆಲೆಮನೆಗಳು ಈಗ ಲಾಭಕ್ಕಾಗಿ ಕೆಮಿಕಲ್ ಬಲ್ಲವನ್ನೇ ತಯಾರು ಮಾಡುತ್ತಿದ್ದಾರೆ.
ಇದು ನಿಜವಾಗ್ಲೂ ದುರಂತದ ಸಂಗತಿ. ಈಗಾಲಾದ್ರೂ ನಮ್ಮ ಜನ ಎಚ್ಚೆತ್ತುಕೊಳ್ಳಬೇಕು. ಬಿಳಿ ಬಣ್ಣಕ್ಕೆ ಮಾರು ಹೋಗದೆ ನೈಜವಾಗಿ ತಯಾರಾಗೋ ಬೆಲ್ಲವನ್ನ ಖರೀದಿಸಿ, ಆರೋಗ್ಯ ಉಳಿಸಿಕೊಳ್ಳಬೇಕು.
ವರದಿ: ರಂಜಿತ್ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.