ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಹೊಸ ತಿರುವು; ಮಠಾಧೀಶರಿಂದ ಸಿಎಂಗೆ ಮನವಿ

By Suvarna Web DeskFirst Published Aug 11, 2017, 5:49 PM IST
Highlights

ಲಿಂಗಾಯತ ‘ಧರ್ಮಕ್ಕೆ ರಾಜ್ಯ ಸರ್ಕಾರವೇ ಅಲ್ಪಸಂಖ್ಯಾತ ‘ಧರ್ಮದ ಮಾನ್ಯತೆಯನ್ನು ನೀಡಬೇಕು ಎಂದು ಲಿಂಗಾಯತ ಮಠಾಧೀಶರು ಹಾಗೂ ಮುಖಂಡರು ಮನವಿ ಸಲ್ಲಿಸುವುದರೊಂದಿಗೆ ಈ ಪ್ರಕರಣ ಹೊಸ ತಿರುವು ಪಡೆದಿದೆ.

ಬೆಂಗಳೂರು (ಆ.11): ಲಿಂಗಾಯತ ‘ಧರ್ಮಕ್ಕೆ ರಾಜ್ಯ ಸರ್ಕಾರವೇ ಅಲ್ಪಸಂಖ್ಯಾತ ‘ಧರ್ಮದ ಮಾನ್ಯತೆಯನ್ನು ನೀಡಬೇಕು ಎಂದು ಲಿಂಗಾಯತ ಮಠಾಧೀಶರು ಹಾಗೂ ಮುಖಂಡರು ಮನವಿ ಸಲ್ಲಿಸುವುದರೊಂದಿಗೆ ಈ ಪ್ರಕರಣ ಹೊಸ ತಿರುವು ಪಡೆದಿದೆ.
ವೀರಶೈವ ಮಹಾಸ‘ ಹಾಗೂ ಮಾತೆ ಮಹದೇವಿ ಸೇರಿದಂತೆ ಪ್ರಮುಖರು ಈ ಹಿಂದೆ ಮುಖ್ಯಮಂತ್ರಿ ಅವರಿಗೆ ನೀಡಿದ್ದ ಮನವಿಯಂತೆ ಲಿಂಗಾಯತ ಅಥವಾ ಲಿಂಗಾಯತ-ವೀರಶೈವ ‘ಧರ್ಮ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸುವುದು ಮಾತ್ರ ರಾಜ್ಯ ಸರ್ಕಾರದ ಹೊಣೆಯಾಗಿತ್ತು. ಆದರೆ, ಲಿಂಗಾಯತ ಮಠಾಧೀಶರು ಹಾಗೂ ಮುಖಂಡರು, ರಾಜ್ಯ ಸರ್ಕಾರಕ್ಕೆ  ಲಿಂಗಾಯತ ‘ಧರ್ಮಕ್ಕೆ ಅಲ್ಪಸಂಖ್ಯಾತ ‘ಧರ್ಮದ ಸ್ಥಾನಮಾನವನ್ನು ರಾಜ್ಯ ಸರ್ಕಾರವೇ ನೀಡಬಹುದು. ಜೈನ ‘ಧರ್ಮಕ್ಕೆ ಕೇಂದ್ರ ಸರ್ಕಾರ ಅಲ್ಪಸಂಖ್ಯಾತ ಮಾನ್ಯತೆ ನೀಡುವ ಮುನ್ನ ದೇಶದ ಹಲವು ರಾಜ್ಯಗಳು ಅಲ್ಪಸಂಖ್ಯಾತ ‘ಧರ್ಮದ ಮಾನ್ಯತೆಯನ್ನು ನೀಡಿದ್ದ ಉದಾಹರಣೆಯಿದೆ. ಹೀಗಾಗಿ ರಾಜ್ಯ ಸರ್ಕಾರವೇ ಇಂತಹ ಮಾನ್ಯತೆಯನ್ನು ಲಿಂಗಾಯತ ‘ಧರ್ಮಕ್ಕೆ ನೀಡಬೇಕು ಎಂಬ ವಾದ ಲಿಂಗಾಯತ ಮಠಾಧೀಶರು ಹಾಗೂ ಮುಖಂಡರ ಹೊಸ ಮನವಿ.  ಹೀಗಾಗಿ, ಲಿಂಗಾಯತ ‘ಧರ್ಮದ ವಿಚಾರದಲ್ಲಿ ಕೇವಲ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮನಸ್ಥಿತಿಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಈ ಹೊಸ ಬೇಡಿಕೆಗೆ ಹೇಗೆ ಸ್ಪಂದಿಸುತ್ತದೆ ಎಂಬ ಕುತೂಹಲ ಮೂಡಿದೆ.

ವೀರಶೈವ-ಲಿಂಗಾಯತ ಮತ್ತು ಲಿಂಗಾಯತ ಎಂಬ ಧರ್ಮದ ಮಾನ್ಯತೆಗೆ ಕೋರಿ ಎರಡು ಪ್ರತ್ಯೇಕ ಅರ್ಜಿಗಳು ಬಂದಿವೆ. ಎರಡೂ ಅರ್ಜಿಗಳನ್ನು ರಾಜಕೀಯ ಮಾಡದೇ, ಮುಕ್ತ ಮನಸ್ಸಿನಿಂದ ಪರಿಶೀಲಿಸುತ್ತೇನೆ. ಅಖಿಲ ಭಾರತ ವೀರಶೈವ ಮಹಾಸಭಾ ಈ ಹಿಂದೆ ಮನವಿ ನೀಡಿ, ವೀರಶೈವ ಲಿಂಗಾಯತ  ಧರ್ಮ ಘೋಷಿಸುವಂತೆ ಕೋರಿತ್ತು. ಇದೀಗ ಲಿಂಗಾಯತ ಮಠಾಧೀಶರು ಮತ್ತು ಮುಖಂಡರು ಲಿಂಗಾಯತ  ಧರ್ಮ ಮಾನ್ಯತೆಗೆ ಕೋರಿದ್ದಾರೆ. ಇನ್ನೂ ಕೆಲವು ಅರ್ಜಿಗಳು ಬಂದಿವೆ. ಎಲ್ಲವನ್ನೂ ಪರಿಶೀಲನೆ ಮಾಡುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 

click me!