ಹವಾಮಾನ ವೈಪರೀತ್ಯ : ಗುಡಗು ಸಹಿತ ಗಾಳಿ ಮಳೆಗೆ 2 ಬಲಿ

Published : Jan 22, 2019, 01:56 PM IST
ಹವಾಮಾನ ವೈಪರೀತ್ಯ :  ಗುಡಗು ಸಹಿತ ಗಾಳಿ ಮಳೆಗೆ 2 ಬಲಿ

ಸಾರಾಂಶ

ರಾಜಧಾನಿಯಲ್ಲಿ ಗಾಳಿಯ ರಭಸದೊಂದಿಗೆ ಮಳೆ ಸುರಿದಿದೆ. ಹವಾಮಾನ ವೈಪರೀತ್ಯದಿಂದ ಚಳಿಗಾಲದಲ್ಲಿ ಮಳೆಯಾಗಿದೆ.

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಗುಡುಗು ಹಾಗೂ ಗಾಳಿಯ ರಭಸದೊಂದಿದೆ ಮಳೆ ಸುರಿದಿದೆ. ಇದರಿಂದ ರಾಜಧಾನಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. 

ದಿಲ್ಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಕೂಡ ಮಳೆ ಸುರಿದಿದ್ದು, ಹದಗೆಟ್ಟಿದ್ದ ದಿಲ್ಲಿಯ ವಾತಾವರಣ ಸ್ವಲ್ಪ ಪ್ರಮಾಣದಲ್ಲಿ ಸುಧಾರಿಸಿದೆ. 

ದಿನಪೂರ್ತಿ ಗಾಳಿಯಿಂದ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.  

 

ಸೋಮವಾರ ಸಂಜೆಯಿಂದಲೇ ಅಲ್ಪ ಪ್ರಮಾಣದಲ್ಲಿ ಮಳೆ ಆರಂಭವಾಗಿದ್ದು, ಸಫ್ದರ್ ಗಂಜ್ ಪ್ರದೇಶದಲ್ಲಿ ಮನೆಯೊಂದರ ಗೋಡೆ ಕುಸಿದು ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿದ್ದಾರೆ. 

ಮಳೆಯಿಂದ ರಾಜಧಾನಿಯಲ್ಲಿ 11.5 ಡಿಗ್ರಿ ಉಷ್ಣಾಂಶ ದಾಖಲಾಗಿದೆ.  2012ರಿಂದ ಜನವರಿ ತಿಂಗಳಲ್ಲಿ ಇದೇ ಮೊದಲ ಬಾರೀ ಈ ಪ್ರಮಾಣದಲ್ಲಿ ಬೆಚ್ಚನೆಯ ವಾತಾವರಣ ಕಂಡು ಬಂದಿದೆ. 

 ಜನವರಿ 24ರ ನಂತರವೂ ಕೂಡ ಅಲ್ಪ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!