ಜೆಡಿಎಸ್-ಕೈ ಮೈತ್ರಿಗೆ ಆರಂಭದಲ್ಲಿಯೇ ಅಪಸ್ವರ

By Suvarna Web DeskFirst Published Mar 27, 2018, 2:02 PM IST
Highlights

ಚುನಾವಣಾ ಪೂರ್ವ ಮೈತ್ರಿಗೆ ಕಾಂಗ್ರೆಸ್, ಜೆಡಿಎಸ್​​ನಲ್ಲಿ ಅಪಸ್ವರ​​​​ವೆದ್ದಿದೆ.  ಅತ್ತ ದೇವೇಗೌಡರು ಕಾಂಗ್ರೆಸ್‌ನೊಂದಿಗಿನ ಮೈತ್ರಿಗೆ ಓಕೆ ಎಂದರೆ, ಇತ್ತ ಮಗ ಎಚ್.ಡಿ.ಕುಮಾರಸ್ವಾಮಿ 'ಯಾರೊಂದಿಗೂ ಮೈತ್ರಿ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಚುನಾವಣಾ ಪೂರ್ವ ಮೈತ್ರಿಗೆ ಕಾಂಗ್ರೆಸ್, ಜೆಡಿಎಸ್​​ನಲ್ಲಿ ಅಪಸ್ವರ​​​​ವೆದ್ದಿದೆ.  ಅತ್ತ ದೇವೇಗೌಡರು ಕಾಂಗ್ರೆಸ್‌ನೊಂದಿಗಿನ ಮೈತ್ರಿಗೆ ಓಕೆ ಎಂದರೆ, ಇತ್ತ ಮಗ ಎಚ್.ಡಿ.ಕುಮಾರಸ್ವಾಮಿ 'ಯಾರೊಂದಿಗೂ ಮೈತ್ರಿ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಕಾಂಗ್ರೆಸ್​​ ಜೊತೆ ಮೈತ್ರಿಗೆ ಸಿದ್ಧ,' ಎಂದು ದೇವೇಗೌಡರು ಹೇಳಿದ ಕೂಡಲೇ ಕಾಂಗ್ರೆಸ್ ಮುಖಂಡರು 'ಒಲ್ಲೆ' ಎಂದಿದ್ದು, ಈ ಬೆನ್ನಲ್ಲೇ ಕುಮಾರಸ್ವಾಮಿ ಸಹ ಮೈತ್ರಿವಿಲ್ಲವೆಂದು ಹೇಳಿದ್ದಾರೆ.

'ದೇವೇಗೌಡರ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ.  ಪ್ರಗತಿಪರರ ಸೋಗಿನಲ್ಲಿ ಬಂದವರಿಗೆ ವ್ಯಂಗ್ಯವಾಗಿ ಉತ್ತರ ಕೊಟ್ಟೊರೋದು. ಅವರನ್ನ ಬೇಕಾದ್ರೆ ಸಿದ್ದರಾಮಯ್ಯನವರೇ ಕಳುಸಿರುತ್ತಾರೆ. ಅವಕಾಶವಾದಿ ಪಕ್ಷ ಜೆಡಿಎಸ್ ಅಲ್ಲ. ಸಿದ್ದರಾಮಯ್ಯನವರೇ ಅವಕಾಶ ಕೊಟ್ಟ ಎಲ್ಲರನ್ನೂ ತುಳಿಯುತ್ತಾ ಬಂದಿದ್ದಾರೆ. 
ಖರ್ಗೆ, ಪರಮೇಶ್ವರ್ ಅವರನ್ನ ಬೀದಿಪಾಲು ಮಾಡಿದ್ದೀರಿ ನೀವೂ ಇನ್ನೂ ಹೆಚ್ಚು ಜೆಡಿಎಸ್‌ಗೆ ಬೈಯ್ಯಿರಿ. ಜನರೇ ನಮಗೇ ಆಶೀರ್ವದ ಮಾಡ್ತಾರೆ,' ಎಂದು ಹೇಳಿದ್ದಾರೆ.

 

ಕರ್ನಾಟಕ ಚುನಾವಣೆ: ಇಲ್ಲಿದೆ ಫುಲ್ ಡಿಟೈಲ್ಸ್
 

ಸಿದ್ದರಾಮಯ್ಯ Vs ಬಿಎಸ್‌ವೈ ಪುತ್ರ

ಇದು ನಮ್ಮ ಚುನಾವಣೆ

click me!