ಕಾಲಕ್ಕೆ ತಕ್ಕಂತೆ ಸಂವಿಧಾನದ ಸ್ವರೂಪ ಇರುತ್ತದೆ: ಪ್ರಣಬ್

By Web DeskFirst Published Jul 28, 2019, 8:54 AM IST
Highlights

ಕಾಲಕ್ಕೆ ತಕ್ಕಂತೆ ಸಂವಿಧಾನ ಬದಲಾವಣೆ ತಪ್ಪಲ್ಲ ಎಂದ ಮಾಜಿ ರಾಷ್ಟ್ರಪತಿ ಮುಖರ್ಜಿ| ಸಂವಿಧಾನ ರಚನೆ ವೇಳೆ ನಡೆದ ಚರ್ಚೆಗಳಲ್ಲಿ ಜನರ ಅಭಿಪ್ರಾಯ ಮತ್ತು ಕಾಲಕ್ಕೆ ಅನುಗುಣವಾಗಿ ಸಂವಿಧಾನ ಸ್ವರೂಪವನ್ನು ಬದಲಾವಣೆ, ತಿದ್ದುಪಡಿ ಮಾಡಬಹುದಾಗಿದೆ

ನವದೆಹಲಿ[ಜು.28]: ಕಾಲಕ್ಕೆ ತಕ್ಕಂತೆ ಸಂವಿಧಾನದ ಬದಲಾವಣೆ ಮಾಡುವುದು ತಪ್ಪಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರೇ ಸಂವಿಧಾನ ರಚನೆ ವೇಳೆ ನಡೆದ ಚರ್ಚೆಗಳಲ್ಲಿ ಜನರ ಅಭಿಪ್ರಾಯ ಮತ್ತು ಕಾಲಕ್ಕೆ ಅನುಗುಣವಾಗಿ ಸಂವಿಧಾನ ಸ್ವರೂಪವನ್ನು ಬದಲಾವಣೆ, ತಿದ್ದುಪಡಿ ಮಾಡಬಹುದಾಗಿದೆ. ಅವಶ್ಯಕತೆಗೆ ಅನುಸಾರ ಬದಲಾಗುವುದು ತಪ್ಪಲ್ಲ ಎಂದು ತಿಳಿಸಿದ್ದರು.

ಅಲ್ಲದೇ, ಬದಲಾವಣೆಯು ಜನರು ಆರಿಸಿ ಕಳುಹಿಸುವ ಜನಪ್ರತಿಧಿಗಳಿಗೂ ಸಂಬಂಧಿಸಿದೆ ಎಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದರು. ಸಂವಿಧಾನದ ಬದಲಾವಣೆ ಮತ್ತು ಅದರ ಸ್ವರೂಪವನ್ನು ಕಾಲವೇ ನಿರ್ಧರಿಸುತ್ತದೆ. ಇಲ್ಲಿ ಜನರೇ ಅಂತಿಮ ನಿರ್ಧಾರ ತೆಗೆದುಕೊಳ್ಳುವವರು. ಶಾಸನವನ್ನು ಬದಲಾಯಿಸುವ ಹಕ್ಕು ಸಂಸತ್ತಿಗೆ ಇದೆ ಎಂದು ತಿಳಿಸಿದರು.

click me!