ಆದೇಶ ತಿದ್ದುಪಡಿ ಸಾಧ್ಯವಿಲ್ಲ ಎಂದ ಹೈಕೋರ್ಟ್: ಡಿಕೆಶಿಗೆ ಮತ್ತೆ 'ಟ್ರಬಲ್'!

Published : Aug 30, 2019, 01:58 PM ISTUpdated : Aug 30, 2019, 03:08 PM IST
ಆದೇಶ ತಿದ್ದುಪಡಿ ಸಾಧ್ಯವಿಲ್ಲ ಎಂದ ಹೈಕೋರ್ಟ್: ಡಿಕೆಶಿಗೆ ಮತ್ತೆ 'ಟ್ರಬಲ್'!

ಸಾರಾಂಶ

ಡಿಕೆಶಿಗೆ ಟ್ರಬಲ್ ಮೇಲೆ ಟ್ರಬಲ್!| ಡಿ.ಕೆ.ಶಿ ಮನವಿ ತಿರಸ್ಕರಿಸಿದ ಹೈಕೋರ್ಟ್| ದೆಹಲಿಗೆ ಹೊರಟ ಡಿಕೆಶಿಗೆ ಬಿಗ್ ಶಾಕ್| ಬಂಧನದ ಭೀತಿಯಲ್ಲಿ ಒದ್ದಾಡುತ್ತಿದ್ದಾರೆ ಡಿ.ಕೆ.ಶಿವಕುಮಾರ್| ವಿಚಾರಣೆಗೆ ಹಾಜರಾದಾಗ ಡಿಕೆಶಿ ಬಂಧಿಸಿಬಿಡುತ್ತಾರಾ ಇಡಿ?| ಹೆಚ್ಚಿನ ವಿಚಾರಣೆಗಾಗಿ ಬಂಧಿಸುವುದಕ್ಕೆ EDಗೆ ಅವಕಾಶ ಇದೆ

ಬೆಂಗಳೂರು[ಆ.30]: ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಡಿಕೆ ಶಿವಕುಮಾರ್, ಸಂಕಷ್ಟದಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ಆದರೀಗ ಅವರೆಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದು, ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ನಿನ್ನೆ ಗುರುವಾರ ಡಿಕೆಶಿ, ಇಡಿ ತನ್ನ ವಿರುದ್ಧ ಜಾರಿಗೊಳಿಸಿದ್ದ ಸಮನ್ಸ್ ಹಾಗೂ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿ ವಜಾಗೊಂಡಿತ್ತು. ಇಂದು ಶುಕ್ರವಾರ ಮತ್ತೆ ಮಧ್ಯಂತರ ತಡೆಯಾಜ್ಞೆ ವಿಸ್ತರಣೆ ಕೋರಿ ಸಲ್ಲಿಸಿದ್ದ ಸರ್ಜಿಯೂ ತಿರಸ್ಕೃತಗೊಂಡಿದೆ.

"

ಇಡಿ ಬಲೆಯಲ್ಲಿ ಸಿಲುಕಿದ ಡಿಕೆಶಿ: ಈವರೆಗೆ ಏನೇನಾಯ್ತು? ೆಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೌದು ಐಟಿ ದಾಳಿ ನಡೆದಮದಿನಿಂದಲೂ ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟ ಎದುರಿಸುತ್ತಿರುವ ಡಿಕೆಶಿ, ಗುರುವಾಗ ಹೈಕೋರ್ಟ್ ನೀಡಿದ್ದ ಇಡಿ ಸಮನ್ಸ್‌ಗೆ ನೀಡಿದ್ದ ಮಧ್ಯಂತರ ತಡೆ ಮುಂದುವರೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಮತ್ತೆ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಅಲ್ಲದೇ ನಿನ್ನೆ ನೀಡಿರುವ ಆದೇಶದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇಂದು[ಶುಕ್ರವಾರ] ನೀವು ಇಡಿ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದಿದೆ. ಹೀಗಾಗಿ ಡಿಕೆ ಶಿವಕುಮಾರ್‌ ಈಗ ಇಡಿ ಖೆಡ್ಡಾದಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ.

ದೆಹಲಿಯಲ್ಲಿ ಸಿಕ್ಕ ಹಣ ನನ್ನದೇ, ಆದ್ರೆ ತಪ್ಪು ಮಾಡಿಲ್ಲ: ಡಿಕೆಶಿ ಸುದ್ದಿಗೋಷ್ಠಿ ಮುಖ್ಯಾಂಶಗಳು

ವಿಚಾರಣೆಗೆ ಹಾಜರಾಗುವ ಡಿಕೆ ಶಿವಕುಮಾರ್‌ರನ್ನು ಹೆಚ್ಚಿನ ತನಿಖೆಗಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸುವ ಸಾಧ್ಯತೆಗಳಿವೆ. ಹೀಗಾಗಿ ಮುಂದೇನಾಗುತ್ತೆ ಎಂಬುವುದನ್ನು ಕಾದು ನೋಡಬೇಕಷ್ಟೇ. ಸದ್ಯ ಹೈಕೋರ್ಟ್ ಆದೇಶದ ಬೆನ್ನಲ್ಲೇ ಡಿಕೆಶಿ ದೆಹಲಿ ವಿಮಾನವನ್ನೇರಿದ್ದಾರೆ.

ಡಿಕೆಶಿಗೆ ED ಕಂಟಕ: ಟ್ರಬಲ್ ಶೂಟರ್ ಮುಂದಿದೆ 3 ತಂತ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?