ಬೆಂಗಳೂರು, ಮಂಗಳೂರು ರೈಲು 15 ದಿನ ಬಂದ್?

By Web DeskFirst Published Aug 19, 2018, 11:37 AM IST
Highlights

- ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ, 50 ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ 

- ಬೆಂಗಳೂರು- ಮಂಗಳೂರು ರೈಲ್ವೇ ಸೇವೆ ಬಂದ್ 

ಬೆಂಗಳೂರು (ಆ. 19): ರೈಲ್ವೆ ಹಳಿಯ ಮೇಲೆ ಸುಮಾರು 50 ಕಡೆ ಗುಡ್ಡ ಕುಸಿದಿದೆ. ಕೆಲವು ಕಡೆ ಬೃಹತ್ ಆಕಾರದ ಬಂಡೆಗಳು ಉರುಳಿ ಬಂದು ಹಳಿ ಮೇಲೆ ಕುಳಿತಿವೆ.

ಪರಿಣಾಮ ಬೆಂಗಳೂರು- ಮಂಗಳೂರು ರೈಲು ಸಂಚಾರ ಇನ್ನು ಕನಿಷ್ಠ 15 ದಿನ ಬಂದ್ ಆಗುವ ಸಾಧ್ಯತೆ ಇದೆ. ಸಕಲೇಶಪುರ ಪಟ್ಟಣದ ರೇಲ್ವೆ ಸ್ಟೇಷನ್‌ನಿಂದ ಯಡಕುಮರಿವರೆಗೆ ರೈಲ್ವೆ ಹಳಿ ಮೇಲೆ ವಿಪರೀತವಾಗಿ ಗುಡ್ಡಗಳು, ಬಂಡೆಗಳು ಕುಸಿತಗೊಂಡಿದೆ. ಇದನ್ನು ತೆರವುಗೊಳಿಸಲು ಕೂಲಿ ಆಳುಗಳು ಸಿಗದೆ ರೈಲ್ವೆ ಸಿಬ್ಬಂದಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.

ಸಕಲೇಶಪುರ ಪಟ್ಟಣದ ರೇಲ್ವೆ ಸ್ಟೇಷನ್ ಅಧಿಕಾರಿ ನವೀನ್ ಕುಮಾರ್ ಪ್ರತಿಕ್ರಿಯಿಸಿದ್ದು, ಸಕಲೇಶಪುರ- ಯಡಕುಮರಿ ವರೆಗೆ 21 ಕಡೆ ಭೂಕುಸಿತ ಉಂಟಾಗಿದೆ ಎಂದು ತಿಳಿಸಿದ್ದಾರೆ.  

click me!