
ಬೆಂಗಳೂರು(ಆ.19): ಕೊಡಗಿನಲ್ಲಿ ಜಲಪ್ರಳಯವನ್ನು ಸೃಷ್ಟಿಸಿ ಸಾವಿರಾರು ಜನರನ್ನು ಬೀದಿಪಾಲು ಮಾಡುತ್ತಿರುವ ಮಳೆ, ಜಿಲ್ಲೆ ಕಂಡ ದಶಕದ ಮಹಾಮಳೆಯಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಬರೋಬ್ಬರಿ ಒಂದು ದಶಕದ ಹಿಂದೆ ಹಾಲಿ ಮಳೆಗಿಂತಲೂ ಭೀಕರ ಮಳೆಯನ್ನು ಕೊಡಗು ಜಿಲ್ಲೆ ಕಂಡಿತ್ತು. ಆದರೆ, ಆಗ ಈ ಬಾರಿಯಷ್ಟು ಅನಾಹುತ ಸಂಭವಿಸಿರಲಿಲ್ಲ.
ವಾಡಿಕೆಯಂತೆ ಕೊಡಗು ಜೂನ್‌ನಿಂದ ಆಗಸ್ಟ್ 17ವರೆಗೆ ಜಿಲ್ಲೆಯಲ್ಲಿ 1948.4 ಮಿ.ಮೀ. ಮಳೆ ಕಾಣುತ್ತದೆ. ಆದರೆ, ಈ ಬಾರಿ ಇದೇ ಅವಧಿಯಲ್ಲಿ (ಜೂನ್‌ನಿಂದ ಆಗಸ್ಟ್ 17ವರೆಗೆ) ವಾಡಿಕೆಗಿಂತ ಶೇ.46ರಷ್ಟು ಹೆಚ್ಚು ಅಂದರೆ 2,847.6 ಮಿ.ಮೀ. ಹೆಚ್ಚಿನ ಮಳೆಯಾಗಿದೆ. ಈ ಭಾರಿ ಮಳೆಗೆ ಕೊಡಗು ಅಲ್ಲೋಲಕಲ್ಲೋಲವಾಗಿದೆ. ಆದರೆ, 2008-09ರಲ್ಲಿ ಜೂನ್‌ನಿಂದ ಆಗಸ್ಟ್ 17ರವರೆಗೆ ವಾಡಿಕೆಗಿಂತ ಶೇ.64ರಷ್ಟು ಹೆಚ್ಚಿನ ಮಳೆ ಅಂದರೆ 3,175.8 ಮಿ.ಮೀ. ಹೆಚ್ಚಿನ ಮಳೆಯಾಗಿತ್ತು. ಅದಕ್ಕಿಂತ ಹಿಂದೆ 1974ರಲ್ಲಿ 2,922.6 ಮಿ.ಮೀ. ಅಂದರೆ ಶೇ.50ರಷ್ಟು ಹೆಚ್ಚಿನ ಮಳೆಯಾಗಿತ್ತು.
2008-09ರಲ್ಲಿ ಭಾರಿ ಮಳೆಯಾಗಿದ್ದರೂ ಜನಜೀವನ ಅಸ್ತವ್ಯಸ್ತಗೊಳಿಸಿರಲಿಲ್ಲ. ರಸ್ತೆಗಳು ಕೊಚ್ಚಿಹೋಗಿರಲಿಲ್ಲ. ಭೂಕುಸಿತ ಉಂಟಾಗಿರಲಿಲ್ಲ. ಪ್ರಕೃತಿ ಅಷ್ಟು ಪ್ರಮಾಣದ ಮಳೆಯನ್ನು ತನ್ನಲ್ಲಿ ನುಂಗಿಕೊಂಡಿತ್ತು. ಹವಾಮಾನ ತಜ್ಞರ ಪ್ರಕಾರ ಕೊಡಗು ಜಿಲ್ಲೆಗೆ ಶೇ.46ರಷ್ಟು ಹೆಚ್ಚಿನ ಮಳೆ ದೊಡ್ಡ ಮಳೆಯಲ್ಲ. ಈ ಮಳೆಯನ್ನು ತಡೆಯುವ ಶಕ್ತಿ ಕೊಡಗು ಸೇರಿದಂತೆ ಮಲೆನಾಡು ಪ್ರದೇಶಕ್ಕಿದೆ. ಆದರೆ, ಈ ಬಾರಿ ಈ ಪ್ರಮಾಣದಲ್ಲಿ ಅನಾಹುತವಾಗಲು ಕಾರಣವೇನು ಎಂಬುದನ್ನು ಕಂಡುಕೊಳ್ಳಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.