ಇನ್ನು ಮುಂದೆ ಪೆಟ್ರೋಲ್ ಬಂಕ್'ಗಳಲ್ಲಿ ಬೈಕ್'ನಿಂದ ಕೆಳಗಿಳಿದರಷ್ಟೆ ಪೆಟ್ರೋಲ್ !: ಏಕೆ ಗೊತ್ತಾ ?

By Suvarna Web DeskFirst Published Dec 30, 2016, 6:49 AM IST
Highlights

ಈ ಘಟನೆಯ ನಂತರ ಗ್ರಾಹಕರ ಪ್ರಾಣದ ಹಿತದೃಷ್ಟಿಯಿಂದ ಬೈಕ್'ನಿಂದ ಕೆಳಗಿಳಿದರಷ್ಟೆ

ಪೆಟ್ರೋಲ್ ಕಂಪನಿಗಳು ವಾಹನ ಸವಾರರು ತಮ್ಮ ಬೈಕ್'ನಿಂದ ಕೆಳಗಿಳಿದರಷ್ಟೆ ಸ್ಟೂಟರ್'ಗಳಿಗೆ ಪೆಟ್ರೋಲ್ ಹಾಕಬೇಕೆಂಬ ಕಠಿಣ ನಿಯಮವನ್ನು ಜಾರಿಗೊಳಿಸಿವೆ. ಈ ರೀತಿಯ ನಿಯಮವನ್ನು ಜಾರಿಗೊಳಿಸಲು ಪ್ರಮುಖ ಕಾರಣವೂ ಇದೆ. ನ.25 ರಂದು ಕರ್ನಾಟಕದ ಕಲಬುರಗಿಯ ಬಂಕ್ ಒಂದರಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಬೈಕ್'ನ ದೋಷದಿಂದಾಗಿ ಬೈಕ್'ಗೆ ಬೆಂಕಿ ಹೊತ್ತಿಹೊಂಡು ಸಂಪೂರ್ಣ ಬೈಕ್ ಭಸ್ಮವಾಗುತ್ತದೆ.

ಈ ಘಟನೆಯ ನಂತರ ಗ್ರಾಹಕರ ಪ್ರಾಣದ ಹಿತದೃಷ್ಟಿಯಿಂದ ಬೈಕ್'ನಿಂದ ಕೆಳಗಿಳಿದರಷ್ಟೆ ಪೆಟ್ರೋಲ್ ಭರ್ತಿ ಮಾಡಬೇಕೆಂದು ಬಂಕ್'ನ ಸಿಬ್ಬಂದಿಗಳಿಗೆ ಪೆಟ್ರೋಲ್ ಕಂಪನಿಗಳು ಸೂಚನೆ ನೀಡಿದೆ. ಆದರೆ ಅಂದಿನಿಂದ ಶೆಲ್ ಬಂಕ್ ಗಳನ್ನು ಹೊರತು ಪಡಿಸಿ ಉಳಿದ ಯಾವ ಬಂಕ್'ಗಳು ಈ ನಿಯಮವನ್ನು ಪಾಲಿಸುತ್ತಿಲ್ಲ.

Latest Videos

click me!