‘ಅಶ್ಲೀಲತೆ ನೋಡುಗರ ದೃಷ್ಟಿಯಲ್ಲಿದೆ, ಸ್ತನ್ಯಪಾನದಲ್ಲಲ್ಲ’

First Published Jun 21, 2018, 9:18 PM IST
Highlights

‘ಅಶ್ಲೀಲತೆ ಇರುವುದು ನೋಡುಗರ ದೃಷ್ಟಿಯಲ್ಲಿಯೇ ಹೊರತು, ಮಗುವಿಗೆ ಸ್ತನ್ಯಪಾನ ಮಾಡಿಸುವುದರಲ್ಲಿ ಇಲ್ಲ’ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಾಗಾದರೆ ಕೇರಳ ನ್ಯಾಯಾಲಯ ಇಂಥ ತೀರ್ಮಾನ ನೀಡಲು ಕಾರಣವೇನು ಇಲ್ಲಿದೆ ಫುಲ್ ಸ್ಟೋರಿ..

ತಿರುವನಂತಪುರ (ಜೂ. 21) ‘ಅಶ್ಲೀಲತೆ ಇರುವುದು ನೋಡುಗರ ದೃಷ್ಟಿಯಲ್ಲಿಯೇ ಹೊರತು, ಮಗುವಿಗೆ ಸ್ತನ್ಯಪಾನ ಮಾಡಿಸುವುದರಲ್ಲಿ ಇಲ್ಲ’ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಾಗಾದರೆ ಕೇರಳ ನ್ಯಾಯಾಲಯ ಇಂಥ ತೀರ್ಮಾನ ನೀಡಲು ಕಾರಣವೇನು ಇಲ್ಲಿದೆ ಫುಲ್ ಸ್ಟೋರಿ..

ಮಹಿಳಾ ದಿನದ ಅಂಗವಾಗಿ ಗೃಹಲಕ್ಷ್ಮಿ ಮ್ಯಾಗಜಿನ್  ರೂಪದರ್ಶಿ ಗಿಲು ಜೋಸೆಫ್ ಅವರು ಮಗುವಿಗೆ ಸ್ತನ್ಯಪಾನ ಮಾಡಿಸುವ ಚಿತ್ರವನ್ನು ತನ್ನ ಮುಖಪುಟಕ್ಕೆ ಬಳಸಿಕೊಂಡಿತ್ತು. ಆದರೆ ಗಿಲು ಜೋಸೆಫ್ ಅವರು ಅವಿವಾಹಿತೆಯಾಗಿದ್ದು ಸ್ತನ್ಯಪಾನ ಮಾಡಿಸುತ್ತಿರುವ ಪೋಸ್ ನೀಡಿದ್ದರಿಂದ ಸ್ತ್ರೀತನಕ್ಕೆ ಧಕ್ಕೆಯಾಗಿದೆಡ. ಚಿತ್ರ ಕಾಮ ಪ್ರಚೋದಕವಾಗಿದೆ ಎಂದು ವಕೀಲ ಮ್ಯಾಥ್ಯೂ ವಿಲ್ಸನ್ ಎಂಬುವವರು ಪತ್ರಿಕೆ ವಿರುದ್ಧ ನ್ಯಾಯಾಯದ ಮೊರೆ ಹೋಗಿದ್ದರು.

ಚಿತ್ರಕ್ಕೆ ಪರ ಮತ್ತು ವಿರೋಧದ ಅಭಿಪ್ರಾಯ ವ್ಯಕ್ತವಾಗಿತ್ತು. ಕೆಲವು ಮಹಿಳಾ ಪರ ಸಂಘಟನೆಗಳು ಸಮರ್ಥನೆ ಮಾಡಿಕೊಂಡಿದ್ದವು. ಇಂದು ತೀರ್ಪು ಹೊರಬಂದಿದ್ದು ಸಾಮಾಜಿಕ ತಾಣಗಳಲ್ಲಿಯೂ ವ್ಯಾಪಕ ಚರ್ಚೆಯಾಗುತ್ತಿದೆ.

click me!