ಆಸ್ಪತ್ರೆಗೆ ಟ್ರೀಟ್‌ಮೆಂಟ್ ನೀಡಿದ 22 ವರ್ಷಗಳ ನಂತರದ ತೀರ್ಪು

First Published Jun 21, 2018, 7:08 PM IST
Highlights

ಗ್ರಾಹಕ ನ್ಯಾಯಾಲಯದ ತೀರ್ಪೊಂದು ಹೊರಬಿದ್ದಿದೆ ಅದು ಬರೋಬ್ಬರಿ 22 ವರ್ಷಗಳ ನಂತರ. ಆದರೆ ತೀರ್ಪು ಸಾಮಾನ್ಯವಾದದ್ದಲ್ಲ. ನೊಂದ ವ್ಯಕ್ತಿಯ ಕುಟುಂಬಕ್ಕೆ ಬರೋಬ್ಬರಿ 19 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ತಿಳಿಸಿದೆ. ಏನಿದು ಪ್ರಕರಣ ಅಂತೀರಾ।.

ಕೋಲ್ಕತಾ [ಜೂ. 21]  ಗ್ರಾಹಕ ನ್ಯಾಯಾಲಯದ ತೀರ್ಪೊಂದು ಹೊರಬಿದ್ದಿದೆ ಅದು ಬರೋಬ್ಬರಿ 22 ವರ್ಷಗಳ ನಂತರ. ಆದರೆ ತೀರ್ಪು ಸಾಮಾನ್ಯವಾದದ್ದಲ್ಲ. ನೊಂದ ವ್ಯಕ್ತಿಯ ಕುಟುಂಬಕ್ಕೆ ಬರೋಬ್ಬರಿ 19 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ತಿಳಿಸಿದೆ. ಏನಿದು ಪ್ರಕರಣ ಅಂತೀರಾ।.

ರೇಬೀಸ್ ಸೋಂಕಿಗೆ ನೀಡುವ ಚುಚ್ಚುಮದ್ದನ್ನು ಸರಿಯಾಗಿ ಸಂಗ್ರಹಿಸಿಡದೆ ಬಾಲಕನೊಬ್ಬನಿಗೆ ನೀಡಿದ್ದ ಆಸ್ಪತ್ರೆ ಇದೀಗ ಪರಿಹಾರ ಭರಿಸಬೇಕಾಗಿದೆ.  ಈ ಆದೇಶ ಮತ್ತಷ್ಟು ಮಹತ್ವ ಪಡೆದುಕೊಳ್ಳಲು ಕಾರಣವಿದೆ. ಈ ಮೊದಲು ಕುಟುಂಬದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು. ಬಾಲಕ ಉಚಿತ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು ಆತನನ್ನು ಗ್ರಾಹಕ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಇದಾದ ಮೇಲೆ ಕುಟುಂಬದವರು ಮತ್ತೊಂದು ಮೇಲ್ಮನವಿ ಸಲ್ಲಿಸಿದ್ದರು.

ಜುಲೈ 12, 1996 ರಂದು 15 ವರ್ಷದ ಬಾಲಕ ದಿನಾನಾಥ್ ಚೌಧರಿ ತನ್ನ ತಂದೆ ಕೆಲಸ ಮಾಡುವ ಜಾಗಕ್ಕೆ ನಡೆದುಕೊಂಡು ಗೋಗುತ್ತಿದ್ದಾಗ ಬೀದಿ ನಾಯಿಯೊಂದು ಕಡಿದಿದೆ. ಮರುದಿನ ಬಾಲಕನನ್ನು ಚಂದಾನಗರ್ ಸಬ್ ಡಿವಿಸನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಬಾಲಕನನ್ನು ಹಿಂದಕ್ಕೆ ಕಳುಸಹಿಸಿದ್ದಾರೆ. ನಂತರ ಮತ್ತೆ ಆಸ್ಪತ್ರೆಗೆ ಹೋದಾಗ ರೇಬಿಸ್ ಚುಚ್ಚು ಮದ್ದು ನೀಡಿದ್ದಾರೆ. ಆದರೆ ಚುಚ್ಚುಮದ್ದನ್ನು ಸರಿಯಾಗಿ ಸಂಗ್ರಹಿಸಿಡದ ಕಾರಣ ಬಾಲಕನ ಪರಿಸ್ಥಿತಿ ಚಿಂತಾಜನಕವಾಗಿದೆ. ಬೇರೆ ಆಸ್ಪತ್ರೆಗೆ ದಾಖಲಿಸಿದ 2 ದಿನದಲ್ಲಿ ಬಾಲಕ ಅಸುನೀಗಿದ್ದಾನೆ. ನೊಂದ ಕುಟುಂಬ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. 22 ವರ್ಷದ ನಂತರ ಕುಟುಂಬಕ್ಕೆ ಪರಿಹಾರ ಸಿಕ್ಕಿದೆ.

click me!