ಆರ್'ಟಿಒ ಕಚೇರಿ ಕೆಲಸ ಆನ್'ಲೈನಲ್ಲೇ ಮಾಡಿಕೊಳ್ಳಿ!

Published : Jul 30, 2017, 01:15 PM ISTUpdated : Apr 11, 2018, 12:51 PM IST
ಆರ್'ಟಿಒ ಕಚೇರಿ ಕೆಲಸ ಆನ್'ಲೈನಲ್ಲೇ ಮಾಡಿಕೊಳ್ಳಿ!

ಸಾರಾಂಶ

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್ ಟಿಒ) ಕಾಗದ ರಹಿತ ಸೇವೆ ನೀಡುವುದು, ದಾಖಲೆ ಹಿಡಿದು ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸುವುದು ಹಾಗೂ ದಲ್ಲಾಳಿಗಳ ಹಾವಳಿ ನಿಯಂತ್ರಿಸುವ ಉದ್ದೇಶದಿಂದ ಸಾರಿಗೆ ಇಲಾಖೆಯು ‘ವಾಹನ್ 4’ ಎಂಬ ಆನ್‌ಲೈನ್ ಸೇವೆ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಿದೆ.

ನವದೆಹಲಿ(ಜು.30): ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್ ಟಿಒ) ಕಾಗದ ರಹಿತ ಸೇವೆ ನೀಡುವುದು, ದಾಖಲೆ ಹಿಡಿದು ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸುವುದು ಹಾಗೂ ದಲ್ಲಾಳಿಗಳ ಹಾವಳಿ ನಿಯಂತ್ರಿಸುವ ಉದ್ದೇಶದಿಂದ ಸಾರಿಗೆ ಇಲಾಖೆಯು ‘ವಾಹನ್ 4’ ಎಂಬ ಆನ್‌ಲೈನ್ ಸೇವೆ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಿದೆ.

ಈ ನೂತನ ಆನ್‌ಲೈನ್ ಸೇವೆಯು ವಾಹನ ನೋಂದಣಿ, ತೆರಿಗೆ ಪಾವತಿ, ವಿಳಾಸ ಬದಲಾ ವಣೆ, ತೆರಿಗೆ ಪಾವತಿ, ವಾಹನದ ಮಾಲೀಕತ್ವ ಬದಲಾವಣೆ, ದಾಖಲೆಗಳ ಅಳವಡಿಕೆ ಮೊದಲಾದ ಕೆಲಸಗಳಿಗೆ ನೆರವಾಗಲಿದೆ. ಕೇವಲ ವಾಹನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಆರ್‌ಟಿಒ ಕಚೇರಿಗಳಲ್ಲಿ ಕೆಲಸ ನಡೆಯಲಿದೆ.

ಈ ಹಿಂದೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆಯು ಕಲಿಕಾ ಚಾಲನಾ ಪರವಾನಗಿ (ಎಲ್‌ಎಲ್ ಆರ್), ಚಾಲನಾ ಪರವಾನಗಿಗೆ (ಡಿಎಲ್) ಅರ್ಜಿ ಸಲ್ಲಿಕೆಗೆ ‘ಸಾರಥಿ 4’ ಎಂಬ ಆನ್ ಲೈನ್ ಸೇವೆ ಆರಂಭಿಸಿತ್ತು. ಈ ಸೇವೆಯನ್ನು ಸಾರಿಗೆ ಇಲಾಖೆಯು ಎಲ್ಲ ಆರ್‌ಟಿಒ ಕಚೇರಿಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ಇದೀಗ ಡಿಜಿಟಲ್ ಇಂಡಿಯಾ ಯೋಜನೆ ಯಡಿ ಕೇಂದ್ರದ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (ಇಎನ್‌ಸಿ) ವಾಹನ್ 4 ತಂತ್ರಾಂಶ ವನ್ನು ಅಭಿವೃದ್ಧಿಪಡಿಸಿದೆ.

ಪ್ರಸ್ತುತ ತಮಿಳು ನಾಡು, ಪಾಂಡಿಚೇರಿ, ಮೇಘಾಲಯ, ಬಿಹಾರ, ಜಾರ್ಖಂಡ್ ಸೇರಿ 14 ರಾಜ್ಯದ ಆಯ್ದ ಆರ್‌ಟಿಒ ಕಚೇರಿಗಳಲ್ಲಿ ವಾಹನ್ 4 ಪ್ರಾಯೋಗಿಕವಾಗಿ ಆರಂಭಗೊಂಡಿದೆ. ಅದರಂತೆ ಈಗ ಕರ್ನಾಟಕದ ಆರ್‌ಟಿಒ ಕಚೇರಿಗಳಲ್ಲೂ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. ಮೊದಲಿಗೆ ಗ್ರಾಮಾಂತರ ವಿಭಾಗದಲ್ಲಿ ರಾಮನಗರ ಹಾಗೂ ನಗರ ವಿಭಾಗದಲ್ಲಿ ಯಶವಂತಪುರ ಆರ್‌ಟಿಒ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಸೇವೆ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಕಾಗದದ ಅರ್ಜಿಗೆ ಗುಡ್‌ಬೈ:

ಪ್ರಸ್ತುತ ವಾಹನ ನೋಂದಣಿ, ವಾಹನ ತೆರಿಗೆ, ದಾಖಲೆಗಳಲ್ಲಿ ವಿಳಾಸ ಬದಲಾವಣೆ, ವಾಹನದ ಮಾಲೀಕತ್ವ ಬದಲಾವಣೆ, ವಾಹನಗಳ ಅರ್ಹತಾ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಕೆಲಸ ಗಳಿಗೆ ಜನರು ಪ್ರತಿಯೊಂದಕ್ಕೂ ಪ್ರತ್ಯೇಕ ಅರ್ಜಿ ಪಡೆದು ‘ರ್ತಿ ಮಾಡಿ ಬಳಿಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಬಂದು ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ವಾಹನ್ 4 ಅನುಷ್ಠಾನಕ್ಕೆ ಬಂದಲ್ಲಿ ಜನ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ತೆರಿಗೆ ಪಾವತಿಸಬಹುದು. ಅಲ್ಲದೆ, ಅಗತ್ಯ ದಾಖಲೆಗಳ ಪ್ರತಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಇದರಿಂದ ಜನರಿಗೆ ಕಾಗದ ಬಳಕೆ, ಸಮಯ, ಹಣ ಎಲ್ಲವೂ ಉಳಿತಾಯ ವಾಗಲಿದೆ.

ದಲ್ಲಾಳಿಗಳಿಗೆ ಬ್ರೇಕ್:

ಆರ್‌ಟಿಒ ಕಚೇರಿಗಳೆಂದರೆ ಭ್ರ್ರಷ್ಟಾಚಾರದ ಕೂಪಗಳೆಂಬ ಆರೋಪ ವಿದೆ. ಇಲ್ಲಿನ ದಲ್ಲಾಳಿಗಳು ಆರ್‌ಟಿಒ ಕಚೇರಿ ಗಳಿಗೆ ಬರುವ ಸಾರ್ವಜನಿಕರಿಂದ ಸಾಕಷ್ಟು ಹಣ ಸುಲಿಯುತ್ತಿದ್ದಾರೆ ಎಂಬ ಕೂಗಿದೆ. ವಾಹನ್ 4 ಅನುಷ್ಠಾನದಿಂದ ಆರ್‌ಟಿಒ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಬ್ರೇಕ್ ಬೀಳಲಿದೆ. ಅರ್ಜಿ ಸಲ್ಲಿಕೆ, ತೆರಿಗೆ ಪಾವತಿ ಎಲ್ಲವೂ ಆನ್ ಲೈನ್‌ನಲ್ಲಿ ನಡೆಯುವುದರಿಂದ ಸಾರ್ವಜನಿಕರು ಆರ್‌ಟಿಒ ಕಚೇರಿಗೆ ಅಲೆಯುವುದು ಸಹಜ ವಾಗಿ ಕಡಿಮೆಯಾಗಲಿದೆ. ಭ್ರಷ್ಟಾಚಾರಕ್ಕೆ ತಕ್ಕಮಟ್ಟಿಗೆ ಕಡಿವಾಣ ಬೀಳಲಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದು ವೈರಸ್ ಎಂಟ್ರಿ, 14 ಕೋಟಿ ರೂ ಕಳೆದುಕೊಂಡು ರ‍್ಯಾಪಿಡೋ ಚಾಲಕನಾದ ಉದ್ಯಮಿ ಕಣ್ಣೀರ ಕತೆ
ಒಂದೇ ವರ್ಷದಲ್ಲಿ 1 ಲಕ್ಷ ಮೌಲ್ಯದ ಕಾಂಡೋಮ್‌‌ ಖರೀದಿ ಮಾಡಿದ ಚೆನ್ನೈ ವ್ಯಕ್ತಿ!