ಬಂಗಾಳದಲ್ಲಿ ವಿಜಯೋತ್ಸವ ರ‍್ಯಾಲಿಗಳಿಗೆ ಮಮತಾ ನಿಷೇಧ!

By Web DeskFirst Published Jun 8, 2019, 9:07 AM IST
Highlights

ಬಂಗಾಳದಲ್ಲಿ ವಿಜಯೋತ್ಸವ ರ‍್ಯಾಲಿಗಳಿಗೆ ಮಮತಾ ನಿಷೇಧ!|  ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ನಿಷೇಧ

ಕೋಲ್ಕತಾ[ಜೂ.08]: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ವಿಜಯೋತ್ಸವ ರ‍್ಯಾಲಿಗಳಿಗೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿದೆ.

ಎರಡು ದಿನದ ಹಿಂದಷ್ಟೇ ಉತ್ತರ 24 ಪರಗಣದ ನಿಮ್ತಾದಲ್ಲಿನ ತೃಣಮೂಲ ಪಕ್ಷದ ವಾರ್ಡ್‌ ಅಧ್ಯಕ್ಷ ನಿರ್ಮಲ್‌ ಕುಂದು ಅವರ ಹತ್ಯೆ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಮಮತಾ ಬ್ಯಾನರ್ಜಿ, ಹತ್ಯೆ ಕುರಿತು ಸಿಐಡಿ ತನಿಖೆಗೆ ಆದೇಶಿಸಿದರು. ಜೊತೆಗೆ ವಿಜಯೋತ್ಸವ ರಾರ‍ಯಲಿಗೆ ನಿಷೇಧ ಹೇರಿದ್ದಾಗಿ ಪ್ರಕಟಿಸಿದರು.

ಇದೇ ವೇಳೆ ಬಿಜೆಪಿಯನ್ನು ಹೆಸರಿಸದೇ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿರುವ ಮಮತಾ, ಕೊಲೆ ನಮ್ಮ ಸಂಸ್ಕೃತಿಯಲ್ಲ, ಇದೀಗ 18 ಸ್ಥಾನ ಗೆದ್ದವರಿಂದ ಆಗಲೇ ಅಶಾಂತಿ ಸೃಷ್ಠಿ ಆರಂಭವಾಗಿದೆ ಎಂದು ದೂರಿದ್ದಾರೆ.

click me!